ಬಬಲೇಶ್ವರ ವಿದ್ಯುತ್‌ ಜಾಲ ಸುಧಾರಣೆಗೆ 300 ಕೋಟಿ ಅನುದಾನ

Team Udayavani, Jul 15, 2019, 1:13 PM IST

(ಸಾಂದರ್ಭಿಕ ಚಿತ್ರ)

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿದ್ಯುತ್‌ ಜಾಲ ಸುಧಾರಣೆಗೆ 300 ಕೋಟಿ ರೂ. ಅನುದಾನ ನೀಡಲು ಅನುಮೋದನೆ ದೊರಕಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನನ್ನ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶ ವಿವಿಧ ನೀರಾವರಿ ಯೋಜನೆಗಳಿಂದ ಸಂಪೂರ್ಣ ನೀರಾವರಿಗೆ ಒಳಪಡುತ್ತಿದೆ. ರೈತರಿಗೆ ನೀರಿನ ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್‌ ಸಂಪರ್ಕವೂ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. ಇದಕ್ಕೆ ತಕ್ಕಂತೆ ಬಬಲೇಶ್ವರ ಕ್ಷೇತ್ರದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ವಿದ್ಯುತ್‌ ಕೇಂದ್ರಗಳಿಗೆ ವಿವಿಧ ಕಡೆಗಳಿಂದ ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದಿದ್ದಾರೆ.

110 ಕೆ.ವಿ ವಿದ್ಯುತ್‌ ಕೇಂದ್ರಗಳಾದ ಬಬಲೇಶ್ವರ, ಮಮದಾಪುರ, ಶಿರಬೂರ, ದೇವರಗೆಣ್ಣೂರ, ತಿಕೋಟಾ, ಟಕ್ಕಳಕಿ ಮತ್ತು ಸ್ಥಾಪನೆಗೊಳ್ಳಲಿರುವ 110 ಕೆ.ವಿ ವಿದ್ಯುತ್‌ ಕೇಂದ್ರಗಳಾದ ಬೆಳ್ಳುಬ್ಬಿ, ಕಂಬಾಗಿ, ಅರ್ಜುಣಗಿ, ಕಾಖಂಡಕಿ, ಹೊನವಾಡ ಮತ್ತು ಕನಮಡಿಗಳಿಗೆ ವಿಜಯಪುರ ಜಿಲ್ಲೆ ಹಾಗೂ ಎಲ್ಲ ಪಕ್ಕದ ಬಾಗಲಕೋಟೆ ಮತು ಬೆಳಗಾವಿ ಜಿಲ್ಲೆಗಳಿಂದ ಲಿಂಕ್‌ ಲೈನ್‌ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

220 ಕೆ.ವಿ ವಿದ್ಯುತ್‌ ಕೇಂದ್ರಗಳಾದ ಬಸವನಬಾಗೇವಾಡಿ, ವಿಜಯಪುರ, ಅಥಣಿ, ವಜ್ರಮಟ್ಟಿ ಮತ್ತು ಉದ್ದೇಶಿತ ಚಿಕ್ಕಲಕಿ ಕ್ರಾಸ್‌ ಸ್ಟೇಷನ್‌ನಿಂದ ಬಬಲೇಶ್ವರ ಕ್ಷೇತ್ರದ ಎಲ್ಲಾ 110 ಕೆ.ವಿ ಚಾಲ್ತಿಯಲ್ಲಿರುವ ಹಾಗೂ ಉದ್ದೇಶಿತ ಸ್ಟೇಷನ್‌ಗಳಿಗೆ ನಿರಂತರ ವಿದ್ಯುತ್‌ ಸಂಪರ್ಕ ಒದಗಿಸಲಾಗುವದು. ಬೀಳಗಿ ತಾಲೂಕು 110 ಕೆ.ವಿ ವಿದ್ಯುತ್‌ ಕೇಂದ್ರ ಬಿಸನಾಳದಿಂದ ಶಿರಬೂರ 110ಕೆ.ವಿ ಸ್ಟೇಷನ್‌ವರೆಗೆ ಲಿಂಕ್‌ ಲೈನ್‌ ಅಳವಡಿಸುವದು ಮತ್ತು ಉದ್ದೇಶಿತ 220 ಕೆ.ವಿ. ಸ್ಟೇಷನ್‌ ಚಿಕ್ಕಲಕಿ ಕ್ರಾಸ್‌ನಿಂದ ಬಬಲೇಶ್ವರ ಹಾಗೂ ಮಮದಾಪುರ ಸ್ಟೇಷನ್‌ಗಳಿಗೆ ಲಿಂಕ್‌ ಲೈನ್‌ ಒದಗಿಸಗಿಸುವದು.

ಕೆ.ಐ.ಎ.ಡಿ.ಬಿ ವಿಜಯಪುರ ಸ್ಟೇಷನ್‌ನಿಂದ ತಿಕೋಟಾ ವಿದ್ಯುತ್‌ ಕೇಂದ್ರದ ವರೆಗೆ ಈಗಿರುವ ಒಂಟಿ ಮಾರ್ಗ ಬದಲಾಗಿ ಜೋಡಿ ಮಾರ್ಗ ನಿರ್ಮಿಸುವದು. ಅಥಣಿ ತಾಲೂಕು ಕಕಮರಿ 110 ಕೆ.ವಿ ಕೇಂದ್ರದಿಂದ ಹೊನವಾಡದಲ್ಲಿ ಉದ್ದೇಶಿತ 110 ಕೆ.ವಿ ಕೇಂದ್ರಕ್ಕೆ ಲಿಂಕ್‌ ಲೈನ್‌ ಒದಗಿಸುವದು. ಬಬಲೇಶ್ವರ, ತಿಕೋಟಾ ಲಿಂಕ್‌ ಲೈನ್‌ ಸಂಪರ್ಕಿಸುವದು ಸೇರಿದಂತೆ ವಿವಿಧ ಸಂಪರ್ಕ ಜಾಲಗಳಿಗೆ ಅನುಮೋದನೆ ದೊರಕಿದೆ ಎಂದು ಹೇಳಿದ್ದಾರೆ.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಬಲೇಶ್ವರ, ಶಿರಬೂರ, ಮಮದಾಪುರ ಮತ್ತು ತಿಕೋಟಾ 110ಕೆ.ವಿ. ವಿದ್ಯುತ್‌ ಕೇಂದ್ರಗಳಲ್ಲಿ ಹಾಲಿಯಿರುವ 10ಎಂ.ವಿ ಟಿ.ಸಿಗಳ ಬದಲಾಗಿ ದುಪ್ಪಟ್ಟು ಸಾಮರ್ಥಯದ 20ಎಂ.ವಿ ಟಿ.ಸಿ ಅಳವಡಿಒಸುವುದಾಗಿ ತಿಳಿಸಿದ್ದಾರೆ.

220 ಕೆ.ವಿ ವಿದ್ಯುತ್‌ ಕೇಂದ್ರಗಳು ಹಾಗೂ 110 ಕೆ.ವಿ ವಿದ್ಯುತ್‌ ಕೇಂದ್ರಗಳು ಅಂತರ್‌ ಸಂಪರ್ಕಗೊಳ್ಳುವದರಿಂದ ಈ ಭಾಗದಲ್ಲಿ ಎಂದಿಗೂ ಸಹ ಲೋ ವೋಲೆrಜ್‌ ಸಮಸ್ಯೆ ಆಗುವದಿಲ್ಲ. ಅಲ್ಲದೆ ಸಂಪೂರ್ಣ ನೀರಾವರಿಗೊಳ್ಳುವ ಈ ಪ್ರದೇಶದ ರೈತ ಬಾಂಧವರಿಗೆ ಉತ್ತಮ ಗುಣಮಟ್ಟದ ವಿದ್ಯುತ್‌ನ್ನು ಸದಾ ಕಾಲ ನೀಡಲು ಅನುಕೂಲವಾಗುತ್ತದೆ. ಅಲ್ಲದೇ ಜಿಲ್ಲೆಯ ಏತ ನೀರಾವರಿ ಯೋಜನೆಗಳ ಜಾಕ್‌ವೆಲ್ಗಳಿಗೂ ಸಹ ಗುಣಮಟ್ಟದ ಮತ್ತು ವಿಶ್ವಾಸಾರ್ಹ ವಿದ್ಯುತ್‌ ಸದಾ ಕಾಲ ದೊರಕುತ್ತದೆ.

ನೈಸರ್ಗಿಕ ವಿಕೋಪದಂತಹ ಕಷ್ಟ ಕಾಲದಲ್ಲಿಯೂ ಸಹ ಬಹುಸಂಪರ್ಕ ವಿದ್ಯುತ್‌ ಮಾರ್ಗವಿರುವ ಕಾರಣ ನಿರಂತರ ವಿದ್ಯುತ್‌ ನೀಡಲು ಅನುಕೂಲವಾಗುತ್ತದೆ. ಈ ಎಲ್ಲ ಉದ್ದೇಶಿತ ಕಾಮಗಾರಿಗಳು ಮುಂದಿನ 3-4 ವರ್ಷಗಳಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿವೆ. ಈಗಾಗಲೇ ಕೆಲವು ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಉಳಿದವುಗಳು ವಿವಿಧ ಹಂತಗಳಲ್ಲಿ ಇರುತ್ತವೆ ಎಂದು ಸಚಿವ ಪಾಟೀಲ ಹೇಳಿದ್ದಾರೆ.

ಈ ಎಲ್ಲ ಕಾಮಗಾರಿಗಳ ಅಂದಾಜು ಮೊತ್ತ 300 ಕೋಟಿ ರೂ. ಅನುದಾನದ ಅಗತ್ಯವಿದ್ದು, ಈ ಎಲ್ಲ ಯೋಜನೆಗಳಿಗೆ ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅನುಮೋದನೆ ನೀಡಿದ್ದಾರೆ. ಅವರಿಗೆ ನನ್ನ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ