ಕಾಡುವ ವರ್ತನೆಗಳ ಪರಿವರ್ತನೆಗೆ ಕಲ್ಯಾಣ

ದೇಶಾದ್ಯಂತ ಯುವಕರಲ್ಲಿ ಹೆಚ್ಚುತ್ತಿದೆ ವಿಷಮ ಶೀತ ಜ್ವರ: ತೋಂಟದ ನಿಜಗುಣಾನಂದ ಸ್ವಾಮೀಜಿ

Team Udayavani, Jul 5, 2019, 10:20 AM IST

05-July-6

ವಿಜಯಪುರ: ನಗರದ ಬಿ.ಎಲ್.ಡಿ.ಇ ಹಳಕಟ್ಟಿ ಭವನ-2ರಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆಯಲ್ಲಿ ಮುಂಡರಗಿಯ ತೋಂಟದ ನಿಜಗುಣಪ್ರಭು ಶ್ರೀಗಳು ಮಾತನಾಡಿದರು.

ವಿಜಯಪುರ: ಪ್ರಸಕ್ತ ಸಮಾಜದಲ್ಲಿ ನಮ್ಮಲ್ಲಿನ ಭಾವನೆಗಳು ಸತ್ತು ಹೋಗಿದ್ದು, ನಮ್ಮ ತಲೆಯನ್ನು ಪರರಿಗೆ ಮಾರಿಕೊಂಡು ನಮ್ಮ ಅಸ್ಮಿತೆ ನಾಶ ಮಾಡಿಕೊಂಡಿದ್ದೇವೆ. ಹೀಗಾಗಿ ಇದೀಗ ದೇಶವನ್ನು ಕಾಡುತ್ತಿರುವ ವರ್ತನೆಗಳನ್ನು ಪರಿವರ್ತನೆ ಮಾಡುವುದು ಇಂದಿನ ಜರೂರಾಗಿದೆ. ಇದಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಂಡರಗಿಯ ನಿಜಗುಣಪ್ರಭು ಶ್ರೀಗಳು ಅಭಿಪ್ರಾಯಪಟ್ಟರು.

ನಗರದ ಬಿ.ಎಲ್.ಡಿ.ಇ ಹಳಕಟ್ಟಿ ಭವನ-2ರಲ್ಲಿ ಸಾಣೇಹಳ್ಳಿ ಪಂಡಿರಾದ್ಯ ಶಿವಾಚಾರ್ಯ ಶ್ರೀಗಳ ಸಹಮತ ವೇದಿಕೆಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇಂದು ಇಡೀ ದೇಶಾದ್ಯಂತ ಯುವಕರಲ್ಲಿ ವಿಷಮ ಶೀತ ಜ್ವರ ಆವರಿಸಿ, ಎಲ್ಲರೂ ಬಳಲುತ್ತಿದ್ದಾರೆ. ದೇಶ ಕಟ್ಟುವ ನಿಜವಾದ ವಿಷಯಗಳನ್ನು ಮರೆಮಾಚಿ, ಎಲ್ಲರೂ ಸಾಮಾಜಿಕ ಜಾಲತಾಣಗಳ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

1995ರ ನಂತರದಲ್ಲಿ ಹುಟ್ಟಿದವರು ದೇಶದ ವಾಸ್ತವಿಕ ಚಿತ್ರಣವನ್ನೇ ಮರೆತಿದ್ದಾರೆ. ಮೊದಲು ದೇಶದಲ್ಲಿ ಭಾವೈಕ್ಯತೆ ಎಂಬುದು ಎಲ್ಲರ ನರ-ನಾಡಿಗಳಲ್ಲಿ ಇತ್ತು. ಮುಸ್ಲಿಂ ಕವಿ ಇಕ್ಬಾಲ್ ಬರೆದ ಸಾರೆ ಜಹಾಂಸೆ ಅಚ್ಚಾ, ಹಿಂದೂ ಸಿತಾ ಹಮಾರಾ ಗೀತೆಯನ್ನು ಹಾಡುವಾಗ ಬರೆದ ಕವಿಯನ್ನು ನೆನಪಿಸದ ಸ್ಥಿತಿಗೆ ನಾವು ಬಂದಿದ್ದೇವೆ. ಆ ಕಾರಣಕ್ಕಾಗಿ ಮತ್ತೆ ಕಲ್ಯಾಣ ಅವಶ್ಯಕತೆ ಇದೆ ಎಂದರು.

ಚಿಂತನ ಸಾಂಸ್ಕೃತಿಕ ಬಳಗ ಕಾರ್ಯದರ್ಶಿ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಬಸವಾದಿ ಶರಣರ ಆಶಯಗಳಂತೆ ನಡೆದಿರುವ ತರಳಬಾಳು ಮಠ ಹೆಜ್ಜೆ ಹಾಕುತ್ತಿದೆ. ಇದರ ಶಾಖಾ ಮಠವಾದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲೀಗ ನಾಡಿನ ವಿವಿಧ ಮಠಾಧೀಶರ, ಚಿಂತಕರ, ಸಾಹಿತಿಗಳ, ಕಲಾವಿದರ ಮುಂದಾಳತ್ವದಲ್ಲಿ ಚಳವಳಿ ರೂಪದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ. ಈ ಚಳವಳಿ ನಾಡಿನ ಮನೆ-ಮನಗಳಿಗೆ ಮುಟ್ಟಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಜಯಪುರದಲ್ಲಿ ಆಗಸ್ಟ್‌ 28ರಂದು ನಡೆಯಲಿದೆ ಎಂದರು.

ಅಖೀಲ ಭಾರತ ವೀರಶೈವ ಮಹಾಸಭೆಯ ವಿ.ಸಿ. ನಾಗಠಾಣ ಮಾತನಾಡಿ, ಬಸವನಾಡಿನ ನಾವುಗಳು ಅಭಿಮಾನ ಶೂನ್ಯರಾಗಿದ್ದೇವೆ. ಹಿಂದೆ ಬೀದರನ ಮೀರಾಜುದ್ದೀನ್‌ ಪಟೇಲ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದಾಗ, ಬಸವ ಜಯಂತಿ ಹಿಂದಿನ ದಿನವೇ ಬಂದು ವಾಸ್ತವ್ಯ ಮಾಡಿದ್ದರು. ಮಾರನೇ ದಿನ ಕಾರ್ಯಕ್ರಮದಲ್ಲಿ ಬಂದವರು ಬೆರಳೆಣಿಕೆಯ ಜನ. ಅವರು ಗಾಬರಿಗೊಂಡು ಬೀದರನಲ್ಲಿ ಬಸವ ಜಯಂತಿಗೆ ಸೇರುವ ಹತ್ತರಷ್ಟು ಜನ ಇಲ್ಲಿ ಸೇರಿಲ್ಲ. ಇದು ಬಸವ ಜನ್ಮಭೂಮಿ. ಇಲ್ಲಿಯೇ ಹೀಗಾದರೇ ಬಸವಣ್ಣನವರನ್ನು ಉಳಿಸುವವರು ಯಾರು ಎಂದು ಪ್ರಶ್ನಿಸಿದ್ದರು ಎಂದು ಸ್ಮರಿಸಿದರು.

ಅಮ್ಮನ ಮಡಿಲು ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ದೇವರಾಜ್‌ ಅರಸು ವಿಚಾರ ವೇದಿಕೆಯ ಸೋಮನಾಥ ಕಳ್ಳಿಮನಿ, ದಲಿತ ಸಂಘಟನೆಗಳ ಒಕ್ಕೂಟದ ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ದಲಿತ ವಿದ್ಯಾರ್ಥಿ ಒಕ್ಕೂಟದ ಶ್ರೀನಾಥ ಪೂಜಾರಿ, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ವಚನಪಿತಾಮಹ ಡಾ| ಫ‌.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ| ಎಂ.ಎಸ್‌.ಮದಭಾವಿ, ಎ.ಬಿ.ಬೂದಿಹಾಳ, ಟಿಪ್ಪು ಸಂಘರ್ಷ ಸಮಿತಿ ಇರ್ಫಾನ್‌ ಶೇಖ ಮಾತನಾಡಿದರು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಬಸವನ ಬಾಗೇವಾಡಿ ಸಿದ್ದಲಿಂಗ ಶ್ರೀಗಳು, ರಾಷ್ಟ್ರೀಯ ಬಸವಸೇನೆ ರವಿಕುಮಾರ ಬಿರಾದಾರ, ಉದ್ಯಮಿ ಎಸ್‌.ಎಚ್. ನಾಡಗೌಡ, ಎನ್‌.ಕೆ. ಕುಂಬಾರ, ಬಿ.ಕೆ. ಗೊಟ್ಯಾಳ, ಬಿ.ಎಂ.ಪಾಟೀಲ, ಶಂಕರ ಬೈಚಬಾಳ, ಭೀಮಣ್ಣ ಹಳೆಮನಿ, ಗಂಗಾಧರ ಜೋಗುರ, ಸರ್ಫಾರಾಜ್‌ ಬೀಳಗಿ, ಮ.ಗು. ಯಾದವಾಡ, ಪ್ರಶಾಂತ ಹಿರೆದೇಸಾಯಿ, ನಿಂಗಪ್ಪ ಸಂಗಾಪುರ, ಅನಿಲ ಸೂರ್ಯವಂಶಿ, ಶಂಕರ ತಳವಾರ, ಶರಣಬಸು ಅವಜಿ, ಬಸವರಾಜ ಬಿರಾದಾರ, ಎ.ಎಸ್‌. ಪಾಟೀಲ, ಡಾ| ವಿ.ಡಿ. ಐಹೊಳ್ಳಿ ಸಭೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.