ಮೊದಲ ದಿನ ಆತಿಥೇಯರ‌ ಮೇಲುಗೈ

ವಿಜಯಪುರದಲ್ಲಿ ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಚಾಲನೆ

Team Udayavani, Sep 15, 2019, 1:20 PM IST

15-Sepctember-14

ವಿಜಯಪುರ: ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಗುಡ್ಡಗಾಡು ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಶಾಸಕ ದೇವಾನಂದ ಚವ್ಹಾಣ ಚಾಲನೆ ನೀಡಿದರು.

ವಿಜಯಪುರ: ಸೈಕ್ಲಿಂಗ್‌ ತವರು ಎನಿಸಿಕೊಂಡಿರುವ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಮೊದಲ ದಿನ ಬಹುತೇಕ ಎಲ್ಲ ಸ್ಪರ್ಧೆಗಳಲ್ಲಿ ಆತಿಥೇಯ ವಿಜಯಪುರ ಮೆಲುಗೈ ಸಾಧಿಸಿದೆ. ವಿಜಯಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳು ಬಹುತೇಕ ಎಲ್ಲ ವಿಭಾಗಗಳಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಡುವ ಮೂಲಕ ಉತ್ತಮ ಆರಂಭ ಪಡೆದಿದ್ದಾರೆ.

14 ವರ್ಷದೊಳಗಿನ ಬಾಲಕರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರದ ಕ್ರೀಡಾ ವಸತಿ ನಿಲಯದ ಸಾಗರ ತೇರದಾಳ 09.57:26 ನಿಮಿಷದಲ್ಲಿ ನಿಗದಿತ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಇದೇ ಶಾಲೆಯ ರಾಘವೇಂದ್ರ ವಂದಾಲ 10.03:00 ನಿ. ಸಯಮದಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆೆ. ಬಾಗಲಕೋಟೆ ಜಿಲ್ಲೆಯ ಸಂಭಾಜಿ ಜಾಧವ 10.18:70 ನಿ. ಸಮಯದಲ್ಲಿ ಗುರಿ ಗೆರೆ ದಾಟಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

14 ವರ್ಷದೂಳಗಿನ ಬಾಲಕಿಯರ 2 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರದ ಕ್ರೀಡಾ ವಸತಿ ನಿಲಯದ ಅಕ್ಷತಾ ಬೂತನಾಳ 11.29:72 ನಿ. ಸಮಯದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಇದೇ ಕ್ರೀಡಾ ವಸತಿ ನಿಲಯದ ಪಾಯಲ್ ಚೌಹಾಣ 11.41:44 ನಿ. ಸಮಯದಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ, ಮೈಸೂರಿನ ಕೇರನ್‌ ಮಾರ್ಷಲ್ 12,39:28 ನಿ. ಸಮಯದಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನ ಪಡೆದರು.

16 ವರ್ಷದೊಳಗಿನ ಬಾಲಕರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರದ ಕ್ರೀಡಾ ವಸತಿ ನಿಲಯದ ಪ್ರತಾಪ ಪಡಚಿ 09.41:42 ನಿ. ಸಮಯದಲ್ಲಿ ಗುರಿ ತಲುಪಿ ಪ್ರಥಮ, ಮೈಸೂರಿನ ಚರೀತಗೌಡ 09.44:72 ನಿ. ದ್ವಿತೀಯ ಹಾಗೂ ವಿಜಯಪುರದ ಕ್ರೀಡಾ ವಸತಿ ನಿಲಯದ ಸಂಪತ್‌ ಪಾಸಮೇಲ 09.59:53 ನಿ. ಮೂರನೇ ಸ್ಥಾನ ಪಡೆದರು.

16 ವರ್ಷದೊಳಗಿನ ಬಾಲಕಿಯರ‌ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರದ ಕ್ರೀಡಾ ವಸತಿ ನಿಲಯದ ಅಕ್ಷತಾ ಬೂತನಾಳ 11.38:78 ನಿ. ಸಮಯದಲ್ಲಿ ಗುರಿ ಮುಟ್ಟಿ ಪ್ರಥಮ, ವಿಜಯಪುರದ ಕ್ರೀಡಾ ವಸತಿ ನಿಲಯದ ಪಾಯಲ್ ಚೌಹಾಣ 12.11:06 ನಿ. ಸಮಯದಲ್ಲಿ ಗುರಿ ತಲುಪಿ ಎರಡನೇ ಸ್ಥಾನ, ಬಾಗಲಕೋಟೆಯ ಭಾವನಾ ಪಾಟೀಲ 12.42:07 ನಿ. ಸಮಯದಲ್ಲಿ ಗುರಿ ಗೆರೆ ದಾಟಿ ಮೂರನೇ ಸ್ಥಾನ ಪಡೆದರು.

18 ವರ್ಷದೊಳಗಿನ ಬಾಲಕರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಎಡೋನಿಸ್‌ ಟಂಗಪು 19.45:28 ನಿ. ಸಮಯದಲ್ಲಿ ಗುರಿ ತಲುಪಿ ಮೊದಲ ಸ್ಥಾನ, ವಿಜಯಪುರ ಕ್ರೀಡಾ ವಸತಿ ನಿಲಯದ ಶ್ರೀಶೈಲ ವೀರಾಪುರ 20.04:99 ನಿ. ಸಮಯದಲ್ಲಿ ದ್ವಿತೀಯ ಹಾಗೂ ಸಂತೋಷ ವಿಜಯಪುರ 20.09:62 ನಿ. ಸಮಯದಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.

18 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿಯರು ಮೂರು ವಿಭಾಗದಲ್ಲಿ ಪಾರಮ್ಯ ಸಾಧಿಸಿದ್ದಾರೆ. ಸೌಮ್ಯ ಅಂತಾಪುರ 11.09:64 ನಿ. ಸಮಯದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕಾವೇರಿ ಮುರನಾಳ 11.24:78 ನಿ. ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ, ದಾನಮ್ಮ ಗುರವ 12.05:15 ನಿ. ಮೂರನೇ ಸ್ಥಾನ ಪಡೆದರು.

ಪುರುಷರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಎನ್‌.ಕಮಲರಾಜ್‌ 19.43:12 ನಿ. ಪ್ರಥಮ ಹಾಗೂ ವಿಜಯಪುರ ಕ್ರೀಡಾ ವಸತಿ ನಿಲಯದ ಶ್ರೀಶೈಲ ವೀರಾಪುರ 20.27:26 ನಿ. ದ್ವಿತೀಯ ಹಾಗೂ ವಿಜಯಪುರ ಕ್ರೀಡಾ ವಸತಿ ನಿಲಯದ ಸಂತೋಷ ವಿಜಾಪುರ 20.38:80 ನಿ. ಮೂರನೇ ಸ್ಥಾನ ಪಡೆದಿದ್ದಾರೆ.

ಮಹಿಳೆಯರ 1 ಲ್ಯಾಪ್‌ ವೈಯಕ್ತಿಕ ಟೈಂ ಟ್ರಯಲ್ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ಸೌಮ್ಯ ಅಂತಾಪುರ 11.14:16 ನಿ. ಮೊದಲು ಗುರಿ ಮುಟ್ಟಿ ಪ್ರಥಮ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲೆಯ ಸಾವಿತ್ರಿ ಹೆಬ್ಟಾಳಟ್ಟಿ 11.35:60 ನಿ. ಸಮಯದಲ್ಲಿ ಗುರಿ ಮುಟ್ಟಿ ದ್ವಿತೀಯ ಹಾಗೂ ವಿಜಯಪುರ ಕ್ರೀಡಾ ವಸತಿ ನಿಲಯದ ದಾನಮ್ಮ ಗುರವ 12.29:48 ನಿ. ಸಮಯದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

14 ವರ್ಷದೊಳಗಿನ ಬಾಲಕರ 1 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ಸಾಗರ ತೇರದಾಳ 10.23:60 ನಿ. ಗುರಿ ತಲುಪಿ ಪ್ರಥಮ, ಸಂಬೋಜಿ ಜಾಧವ 10.41:15 ನಿ. ದ್ವಿತೀಯ, ರಾಘವೇಂದ್ರ ವಂದಾಲ 10.53:00 ನಿ. ತೃತೀಯ ಸ್ಥಾನ ಪಡೆದರು.

14 ವರ್ಷದೊಳಗಿನ ಬಾಲಕಿಯರ 1 ಲ್ಯಾಪ್‌ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ವಿಜಯಪುರ ಕ್ರೀಡಾ ವಸತಿ ನಿಲಯದ ಅಕ್ಷತಾ ಬೂತನಾಳ 12.22:94 ನಿ. ಸಮಯದಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲೆಯ ಅನುಪಮಾ ಗುಳೇದ 12.31:27 ನಿ. ಸಮಯದಲ್ಲಿ ಎರಡನೇಯವರಾಗಿ ಗುರಿ ತಲುಪಿ ದ್ವಿತೀಯ ಸ್ಥಾನ ಹಾಗೂ ಮೈಸೂರಿನ ಕೇರನ್‌ ಮಾರ್ಷಲ್ 12.54:51 ನಿ. ಸಮಯದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.

16 ವರ್ಷದೊಳಗಿನ ಬಾಲಕರ 2 ಲ್ಯಾಪ್‌ ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ಮೈಸೂರಿನ ಚರಿತಗೌಡ 20.55:14 ನಿ. ಸಮಯದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ, ವಿಜಯಪುರ ಕ್ರೀಡಾ ವಸತಿ ನಿಲಯದ ಮಲ್ಲಿಕಾರ್ಜುನ ಯಾದವಾ 21.10:10 ನಿ. ಸಮಯದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಹಾಗೂ ಮೈಸೂರು ಜಿಲ್ಲೆಯಹಸ್ಮುಖ 21.15:70 ನಿ. ಸಮಯದಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು.

ಟಾಪ್ ನ್ಯೂಸ್

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್‌

ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್‌

ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ

ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಬಿಜೆಪಿ ಕೆಂಡ

ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಬಿಜೆಪಿ ಕೆಂಡ

ದುಬಾೖಯ ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಕಾಡು ಬೆಳೆದ ಎಂಜಿನಿಯರ್‌ 

ದುಬಾೖಯ ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಕಾಡು ಬೆಳೆದ ಎಂಜಿನಿಯರ್‌ 

ಭಾರತದಿಂದ ಗೋಧಿ ರಫ್ತು ನಿಷೇಧ : ವಿಶ್ವ ಆಹಾರ ಮಾರುಕಟ್ಟೆಯಲ್ಲಿ ತಲ್ಲಣ

ಭಾರತದಿಂದ ಗೋಧಿ ರಫ್ತು ನಿಷೇಧ : ವಿಶ್ವ ಆಹಾರ ಮಾರುಕಟ್ಟೆಯಲ್ಲಿ ತಲ್ಲಣ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಚುನಾವಣೆ ಬಳಿಕ ರಮೇಶರಿಗೆ ಒಳ್ಳೆಯದಾಗಲಿದೆ: ಬಾಲಚಂದ್ರ ಜಾರಕಿಹೊಳಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ಬಿಜೆಪಿ ನಾಯಕರಲ್ಲಿ ಭಿನ್ನಮತ ಇಲ್ಲ: ಪ್ರಹ್ಲಾದ ಜೋಷಿ

ss

ಶಿರಾಡಿಯಲ್ಲಿ ಸುರಂಗ ಮಾರ್ಗ ಅನುಷ್ಠಾನದ ಗುರಿ: ಪುತ್ತೂರಿನಲ್ಲಿ ಡಿ.ವಿ. ಸದಾನಂದ ಗೌಡ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್‌

ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್‌

ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ

ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಬಿಜೆಪಿ ಕೆಂಡ

ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಬಿಜೆಪಿ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.