ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ ಡಿಸಿ

ನಿಷೇಧಿತ ಪ್ಲಾಸ್ಟಿಕ್‌ ಬಳಸಿದಲ್ಲಿ ಕಾನೂನು ಕ್ರಮಸ್ವಚ್ಛತೆಗೆ ಆದ್ಯತೆ ನೀಡಲು ನಾಗರಿಕರಿಗೆ ಮನವಿ

Team Udayavani, Sep 29, 2019, 11:51 AM IST

ವಿಜಯಪುರ: ಮಹಾತ್ಮ ಗಾಂ ಧೀಜಿ ಅವರ 150ನೇ ಜನ್ಮ ದಿನೋತ್ಸವದ ಗೌರವಾರ್ಥವಾಗಿ ಪ್ಲಾಸ್ಟಿಕ್‌ ಮುಕ್ತ ವಿಜಯಪುರ ನಿರ್ಮಾಣದ ಅಂಗವಾಗಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಮ್ಮ ಕಚೇರಿ ಆವರಣದಲ್ಲಿ ಸ್ವಯಂ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುವ ಮೂಲಕ ಸಾರ್ವಜನಿಕರಿಗೆ ಪ್ಲಾಸ್ಟಿಕ್‌ ಬಳಕೆಯಿಂದ ವಿಮುಖರಾಗಲು ಮನವಿ ಮಾಡಿದರು.

ಶನಿವಾರ ಬೆಳಗ್ಗೆ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಪ್ಲಾಸ್ಟಿಕ್‌ ಮುಕ್ತ, ಕಸ ಮುಕ್ತ ಹಾಗೂ ಸ್ವಚ್ಛ ವಿಜಯಪುರ ನಿರ್ಮಾಣದ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ಪ್ಲಾಸ್ಟಿಕ್‌ ಕಸ ಸಂಗ್ರಹ ಶ್ರಮದಾನ ಕಾರ್ಯಕ್ರಮಕ್ಕೆ ಸ್ವಯಂ ಪ್ಲಾಸ್ಟಿಕ್‌ ಕಸ ಸಂಗ್ರಹಿಸಿ ಇತರರಿಗೆ ಮಾದರಿಯಾದರು.

ಜಿಲ್ಲಾಧಿಕಾರಿ ಕಚೇರಿ ಆವರಣ, ನ್ಯಾಯವಾದಿಗಳ ಸಂಘದ ಕಚೇರಿ ಹಿಂಭಾಗ, ಜಿಲ್ಲಾಧಿಕಾರಿ ಕಚೇರಿ ವಾಹನಗಳ ಪಾರ್ಕಿಂಗ್‌, ಆನಂದ ಮಹಲ್‌, ನಗರದ ಬಸ್‌ ನಿಲ್ದಾಣಗಳಲ್ಲಿ ಜಿಲ್ಲಾ ಧಿಕಾರಿ ಪಾಟೀಲ ಅವರೇ ಮುಂಚೂಣಿಯಲ್ಲಿ ನಿಂತು ಪ್ಲಾಸ್ಟಿಕ್‌ ಕಸ ಸಂಗ್ರಹಕ್ಕೆ ಮುಂದಾಗಿದ್ದರು.

ಜಿಲ್ಲಾಧಿಕಾರಿಗಳೊಂದಿಗೆ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶಟ್ಟಿ, ಅಭಿಯಂತರ ಜಗದೀಶ ಸೇರಿದಂತೆ ಪಾಲಿಕೆಯ ಮತ್ತು ವಿವಿಧ ಇಲಾಖೆಯ ಸಿಬ್ಬಂ ದಿ, ಪೌರ ಕಾರ್ಮಿಕರೊಂದಿಗೆ ನಿರಂತರ 4 ಗಂಟೆಗಳ ಕಾಲ ಪ್ಲಾಸ್ಟಿಕ್‌ ಕಸ ಸಂಗ್ರಹಿಸಿದರು. ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ವಾಹನಗಳ ಪಾರ್ಕಿಂಗ್‌ ಹತ್ತಿರದ ಸ್ಥಳ ಖಾಲಿ ಇರುವುದರಿಂದ ಮಲೀನವಾಗುತ್ತಿದ್ದು, ಈ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಆವರಣ ಸಮತಟ್ಟು ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಅವರಿಗೆ ಸಲಹೆ ನೀಡಿದರು.

ಪಾಲಿಕೆಯು ಸ್ಥಾಪಿಸಿರುವ ಪೇ ಆ್ಯಂಡ್‌ ಯುಸ್‌ ಶೌಚಾಲಯದ ಸ್ವತ್ಛತೆ ಮತ್ತು ಶುಲ್ಕದ ಬಗ್ಗೆ ಪರಿಶೀಲನೆ ನಡೆಸಿದ ಅವರು ಗಗನ್‌ ಮಹಲ್‌ ವ್ಯಾಪ್ತಿಯಲ್ಲಿ ವಿವಿಧ ಮಾರಾಟಗಾರರು ನಿಯಮಾವಳಿ ಅನ್ವಯ ಬಳಸಬೇಕಾದ ಪ್ಲಾಸ್ಟಿಕ್‌ ಹೊರತುಪಡಿಸಿ ಇತರೆ ಪ್ಲಾಸ್ಟಿಕ್‌ ಬಳಸದಿರಲು ಸೂಚಿಸಿದರು.

ಆನಂದ ಮಹಲ್‌ ಇಂಟರ್‌ಪೆಟೇಷನ್‌ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಮುನ್ನ ಕಟ್ಟಡದಲ್ಲಿ ಪ್ರವೇಶ ಹಾಗೂ ಒಳ ಪ್ರವೇಶ ಮತ್ತು ಹೊರ ಪ್ರವೇಶಕ್ಕೆ ಮಾರ್ಗಸೂಚಿ, ಆಂತರಿಕ ಸ್ವತ್ಛತೆ, ಮೇಲ್ಛಾವಣಿ ಮೇಲೆ ಬೆಳದ ಸಣ್ಣ ಪುಟ್ಟ ಸಸಿಗಳ ಕಟಾವಿಗೆ ಹಾಗೂ ಅಲ್ಲಿನ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ಸಹ ನೀಡಿದರು.

ಆನಂದ ಮಹಲ್‌ ಹತ್ತಿರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಚರ್ಚಿಸಿ ಕಸ ಮುಕ್ತ ಹಾಗೂ ಪ್ಲಾಸ್ಟಿಕ್‌ ಮುಕ್ತ ವಿಜಯಪುರ ನಿರ್ಮಾಣದ ಅಂಗವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ನಗರದ ವಿವಿಧ ವೃತ್ತಗಳಲ್ಲಿ ಹಾಗೂ ಆಯಾ ಕಟ್ಟಿನ ಸ್ಥಳಗಳಲ್ಲಿ ನಿಯಮ ಬಾಹಿರವಾಗಿ ಆಳವಡಿಸಿರುವ ಪ್ಲೆಕ್ಸ್‌ಗಳ ತೆರವುಗೊಳಿಸುವ ಕುರಿತು ಮಾಹಿತಿ ನೀಡಿದರು.

ನಂತರ ನಗರದ ಬಸ್‌ ನಿಲ್ದಾಣದಲ್ಲಿ ಬೇಕರಿಗಳಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್‌ಗಳ ಬಗ್ಗೆ ಪರಿಶೀಲಿಸಿದ ಅವರು, ನಿಷೇಧಿತ ಪ್ಲಾಸ್ಟಿಕ್‌ ಬಳಸಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ವ್ಯಾಪಾರಿ ಲೈಸೆನ್ಸ್‌ , ಆಹಾರ ಲೈಸೆನ್ಸ್‌ ರದ್ದತಿಯಂಥ ಕಠಿಣ ಕ್ರಮ ಲೈಗೊಳ್ಳುವುದಾಗಿ ಎಚ್ಚರಿಸಿದರು.

ತಾಪಂ ಇಒ ಬಿ.ಎಸ್‌. ರಾಠೊಡ, ಸಮಾಜ ಸೇವಕ ಪೀಟರ್‌ ಅಲೆಗ್ಸ್ಯಾಂಡರ್‌ ಸೇರಿದಂತೆ ಇತರರು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ ಅಭಿಯಾನದಲ್ಲಿ ಕೈ ಜೋಡಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ