ಗಾಂಧಿ ಭೇಟಿಯಿಂದ ತೊರವಿ ಅಸ್ಪೃಶ್ಯ ಮುಕ್ತ

ಸೌಹಾರ್ದಯುತ ಬದುಕು ಸಾಗಿಸಲು ಸಲಹೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

Team Udayavani, Oct 4, 2019, 1:23 PM IST

ವಿಜಯಪುರ: ಮಹಾತ್ಮ ಗಾಂ ಧೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ವಿಜಯಪುರ ಜಿಲ್ಲೆಯ ತೊರವಿ ಗ್ರಾಮಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ ನಿವಾರಣೆಗೆ ಚಾಲನೆ ನೀಡಿದ್ದರಿಂದ ಈ ಗ್ರಾಮ ಅಸ್ಪೃಶ್ಯತೆ ಮುಕ್ತಿಗೊಂಡಿದೆ. ಹೀಗಾಗಿ ನೀವೆಲ್ಲ ಪುಣ್ಯದ ನೆಲದಲ್ಲಿ ಜೀವಿಸುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಬಣ್ಣಿಸಿದರು.

ತೊರವಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀಜಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರು ತೊರವಿ ಗ್ರಾಮಕ್ಕೆ ಕೇವಲ ಭೇಟಿ ನೀಡಿರಲಿಲ್ಲ, ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಗೂ ಕಂಕಣ ಕಟ್ಟಿದ್ದರು. ಅದರ ಫ‌ಲವಾಗಿ ತೊರವಿ 85 ವರ್ಷಗಳ ಹಿಂದೆಯೇ ಗಾಂಧೀಜಿ ಅವರು ತೊರವಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ಸಂಗತಿ ಎಂದರು.

ಜಿಲ್ಲೆಗೆ ಭೇಟಿ ನೀಡಿದ್ದ ಗಾಂಧೀಜಿ ಅವರು ಅಸ್ಪೃಶ್ಯತೆ ನಿವಾರಣೆ ಜಾಗೃತಿಗಾಗಿ ಜಿಲ್ಲೆಯ ಬೇರೆ ಗ್ರಾಮಕ್ಕೆ ಹೋಗದೇ ತೊರವಿ ಗ್ರಾಮಕ್ಕೆ ಭೇಟಿ ನೀಡಿರುವುದು ಈ ಗ್ರಾಮಕ್ಕೆ ಸಂದ ಗೌರವ. ಅರ್ಧ ಶತಮಾನಾಕ್ಕೂ ಮುನ್ನವೇ ತೊರವಿ ಎಂಬ ಪುಟ್ಟ ಗ್ರಾಮದಲ್ಲಿ ಹಿರಿಯರು ಅಸ್ಪೃಶ್ಯತೆ ನಿರ್ಮೂಲನೆಗೆ ಹೋರಾಡಿದ್ದರು ಎಂಬುದು ನಿಜಕ್ಕೂ ಅನುಕರಣೀಯ ಎಂದರು.

ಮಹಾತ್ಮರು ನಡೆದಾಡಿದ ಹಾಗೂ ತೊರವಿ ನರಸಿಂಹ ದೇವರು ಹಾಗೂ ಮಹಾಲಕ್ಷ್ಮೀ ದೇವರು ನೆಲೆಸಿರುವ ಈ ಪುಣ್ಯಭೂಮಿಯಲ್ಲಿ ಗ್ರಾಮಸ್ಥರು ಸೌಹಾರ್ದಯುತವಾಗಿ ಬಾಳಬೇಕು. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದಲ್ಲಿ ಬಗೆಹರಿಸಿಕೊಂಡು ಗ್ರಾಮವನ್ನು ಮಾದರಿಯಾಗಿ ರೂಪಿಸುವ ಹೊಣೆ ನಿಭಾಯಿಸಬೇಕು. ಪ್ರತಿ ಕುಟುಂಬದ ಪ್ರತಿ ಮಗುವಿಗೂ ಶಿಕ್ಷಣ ಕೊಡಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದರು.

ಜಿಪಂ ಸಿಇಒ ವಿಕಾಸ ಸುರಳಕರ ಮಾತನಾಡಿ, ಮಹಾತ್ಮ ಗಾಂಧಿಧೀಜಿ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ್ದರು. ಅಂತಹ ಮಹಾನ್‌ ನಾಯಕರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದಯುತ ಬದುಕು ಸಾಗಿಸಬೇಕು.

ಮಕ್ಕಳು ಶಿಕ್ಷಣವಂತರಾದಲ್ಲಿ ಇಂತಹ ಅನಿಷ್ಠ ಪದ್ಧತಿಗಳಿಂದ ದೂರ ಉಳಿಯಲು ಸಾಧ್ಯವಿದೆ. ಅದರಂತೆ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಲ್ಲಿ ಇಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಸಾಧ್ಯವಿದೆ ಎಂದರು.

ಉಪನ್ಯಾಸ ನೀಡಿದ ನಿಲೇಶ ಬೇನಾಳ, ಜಿಲ್ಲೆಗೆ ನಾಲ್ಕು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ 1934ರ ಮೇ 8ರಂದು ತೊರವಿ ಗ್ರಾಮಕ್ಕೆ ಭೇಟಿ ನೀಡಿ ಈ ಗ್ರಾಮವೂ ಸೇರಿದಂತೆ 11 ಬಾರಿ ಅಸ್ಪೃಶ್ಯತೆ ನಿವಾರಣೆ ಯಾತ್ರೆ ಕೈಗೊಂಡಿದ್ದರು. ದೇಶಕ್ಕೆ ಸ್ವಾತಂತ್ರ್ಯ
ಸಿಗದಿದ್ದರೂ ಸರಿ ಸಮಾಜದಲ್ಲಿ ಅಸ್ಪೃಶ್ಯತೆ ಅನಿಷ್ಠ ಪದ್ಧತಿ ಇರಬಾರದರು ಎಂದರು.

ಗ್ರಾಮದ ಮುಖಂಡ ಅಡಿವೆಪ್ಪ ಸಾಲಗಲ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಡಳಿತ ತೊರವಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿರ್ಮೂಲನಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ತೊರವಿ ಗ್ರಾಪಂ ಅಧ್ಯಕ್ಷ ಅನಿಲ ಜಗತಾಪ, ಉಪಾಧ್ಯಕ್ಷೆ ಪಾರ್ವತಿ ಬಬಲಾದಿ, ನಾಗರಾಜ ಲಂಬು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್‌ ನದಾಫ್‌, ತಾಪಂ ಇಒ ಬಿ.ಎಸ್‌. ರಾಠೊಡ, ಬಿಇಒ ಆರೀಫ್ ಬಿರಾದಾರ, ತಾಲೂಕು ವೈದ್ಯಾಧಿ ಕಾರಿ ಡಾ| ಕವಿತಾ, ಆರೋಗ್ಯ ಇಲಾಖೆ ರಾಜೇಶ್ವರಿ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ