ಗೋ ಶಾಲೆ ಸ್ಥಾಪನೆಗೆ ನಿಷ್ಕಾಳಜಿ

ವಡಗೇರಾ ವ್ಯಾಪ್ತಿಯಲ್ಲಿ ಹೆಚ್ಚಿದ ಮೇವಿನ ಸಮಸ್ಯೆ•ರೈತರಿಗೆ ಸಿಗುತ್ತಿಲ್ಲ ಸೂಕ್ತ ಸ್ಪಂದನೆ

Team Udayavani, May 17, 2019, 11:57 AM IST

17-MAY-12

ಯಾದಗಿರಿ: 2018ರ ನವೆಂಬರ್‌ ತಿಂಗಳಲ್ಲಿ ಮೇವು ಸಂಗ್ರಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌.

ಯಾದಗಿರಿ: ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿದ್ದು, ಜಾನುವಾರುಗಳಿಗೆ ತಿನ್ನಲು ಮೇವು ಸಿಗದೇ ತಿಪ್ಪೆಗಳಲ್ಲಿನ ತ್ಯಾಜ್ಯ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಗೋಶಾಲೆ ತೆರೆಯಲು ಮುಂದಾಗುತ್ತಿಲ್ಲ.

ಸಮರ್ಪಕ ನೀರು ಮತ್ತು ಮೇವು ಸಿಗದ ಕಾರಣ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕನಿಷ್ಟ ಹೋಬಳಿಗೊಂದರಂತೆ ಮೇವು ಬ್ಯಾಂಕ್‌ ತೆರೆದು ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕಿದ್ದ ಜಿಲ್ಲಾಡಳಿತ ನಾಮಕಾವಾಸ್ತೆ ಎನ್ನುವಂತೆ ಮೇವು ಬ್ಯಾಂಕ್‌ ತೆರೆದು ಕೈ ತೊಳೆದುಕೊಂಡಿದೆ ಎಂಬುದು ರೈತರ ಆರೋಪ.

168 ಮೆಟ್ರಿಕ್‌ ಟನ್‌ ಮೇವು ಸಂಗ್ರಹ: ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನೆಲೆ ನವೆಂಬರ್‌ ತಿಂಗಳಿನಲ್ಲಿಯೇ ಜಿಲ್ಲಾಡಳಿತ ಭತ್ತದ ಹುಲ್ಲು ಸಂಗ್ರಹಿಸಲು ಕ್ರಮವಹಿಸಿ, ಸುಮಾರು 168 ಮೆಟ್ರಿಕ್‌ ಟನ್‌ ಮೇವು ಬೇಲ್ ಮಾಡಿಸಿ ಸಂಗ್ರಹಿಸಿದೆ. ಅಲ್ಲದೇ ಜೋಳದ ಕಣಿಕಿಗೆ ರೈತರಿಂದ ಬೇಡಿಕೆ ಇರುವುದರಿಂದ ಶಹಾಪುರ ಪಶು ಆಸ್ಪತ್ರೆ ಆವರಣ ಮತ್ತು ಕೆಂಭಾವಿ ಎಪಿಎಂಸಿಯಲ್ಲಿ 50 ಮೆಟ್ರಿಕ್‌ ಟನ್‌ ಜೋಳದ ಕಣಿಕಿ ಕೂಡ ಸಂಗ್ರಹಿಸಲಾಗಿದೆ.

7 ಕಡೆ ಮೇವು ಬ್ಯಾಂಕ್‌: ಯಾದಗಿರಿ ತಾಲೂಕಿನಲ್ಲಿ ಯಾದಗಿರಿ ಎಪಿಎಂಸಿ ಆವರಣ, ಗುರುಮಠಕಲ್ ಎಪಿಎಂಸಿ ಆವರಣ, ಶಹಾಪುರ ತಾಲೂಕಿನಲ್ಲಿ ಶಹಾಪುರ ಪಶು ಆಸ್ಪತ್ರೆ ಆವರಣ, ದೋರನಹಳ್ಳಿ ಪಶುವೈದ್ಯಕೀಯ ಡಿಪ್ಲೋಮಾ ಪಾಲಿಟೆಕ್ನಿಕ್‌ ಕಾಲೇಜು, ಸುರಪುರ ತಾಲೂಕಿನಲ್ಲಿ ಸುರಪುರ ಎಪಿಎಂಸಿ ಆವರಣ, ಹುಣಸಗಿ ಯುಕೆಪಿ ಕ್ಯಾಂಪ್‌ ಆವರಣ ಹಾಗೂ ಕೆಂಭಾವಿ ಎಪಿಎಂಸಿ ಆವರಣಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ.

ಹೆಚ್ಚಿನ ಮೇವು ಬ್ಯಾಂಕ್‌ ಸ್ಥಾಪಿಸಿ: ವಡಗೇರಾ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪನೆಯಾಗಿಲ್ಲ. ತಾಲೂಕು ಕೇಂದ್ರ ಘೋಷಣೆಯಾದರೂ ಯಾವುದಕ್ಕೂ ಲೆಕ್ಕಕ್ಕಿಲ್ಲದಂತಾಗಿದೆ. ಈ ಭಾಗದ ರೈತರು ಮೇವು ತರಲು ದೋರನಹಳ್ಳಿಗೆ ತೆರಳಬೇಕಾದರೂ ತುಂಬಾ ದೂರ ಕ್ರಮಿಸಬೇಕಾಗುತ್ತದೆ. ಹಾಗಾಗಿ ಹೋಬಳಿ ಕೇಂದ್ರಕ್ಕೆ ಒಂದರಂತೆ ಮೇವು ಬ್ಯಾಂಕ್‌ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಬರದಿಂದ ಜಾನುವಾರುಗಳಿಗೆ ಸರಿಯಾಗಿ ಮೇವು ಸಿಗದೇ ಕಾಗದಗಳನ್ನು ತಿನ್ನುತ್ತಿವೆ. ಸಮರ್ಪಕ ನೀರು, ಮೇವಿನ ವ್ಯವಸ್ಥೆಯೂ ಇಲ್ಲ. ಗೋ ಶಾಲೆಯ ಮಾತು ಮೊದಲೇ ಇಲ್ಲ. ರೈತರಿಗೆ ಅನುಕೂಲವಾಗುವಂತೆ ಮೇವು ಬ್ಯಾಂಕ್‌ ಕೂಡ ಸ್ಥಾಪಿಸಿಲ್ಲ. ವಡಗೇರಾ ಭಾಗದ ರೈತರಿಗೆ ಮೇವು ತರುವುದಕ್ಕೆ ಕಷ್ಟವಾಗಿದೆ.
ನಿಂಗಣ್ಣ ಜಡಿ, ರೈತ ಮುಖಂಡ

ಈಗಾಗಲೇ 168 ಮೆಟ್ರಿಕ್‌ ಟನ್‌ ಮೇವು ಸಂಗ್ರಹಿಸಿ, 7 ಕಡೆ ಮೇವು ಬ್ಯಾಂಕ್‌ ಸ್ಥಾಪಿಸಿ ಅನುಕೂಲ ಮಾಡಲಾಗಿದೆ. ಈವೆರೆಗೆ 6 ಮೆಟ್ರಿಕ್‌ ಟನ್‌ ಮೇವು ವಿತರಣೆಯಾಗಿದೆ. ಈ ಹಿಂದೆಯಷ್ಟೇ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ಸದ್ಯಕ್ಕೆ ಯಾವುದೇ ರೋಗದ ಭೀತಿಯಿಲ್ಲ. ಮಳೆಗಾಲದಲ್ಲಿ ರೋಗ ಬರುವ ಸಾಧ್ಯತೆಗಳಿರುತ್ತದೆ.
ಡಾ| ಶರಣಭೂಪಾಲರೆಡ್ಡಿ,
ಪಶು ಸಂಗೋಪನಾ ಇಲಾಖೆ, ಉಪನಿರ್ದೇಶಕ

ಅನೀಲ ಬಸೂದೆ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.