ಶರಣರ ಬದುಕು ದಾರಿದೀಪ

ಶಿವ ಭಕ್ತರು ಶ್ರಾವಣ ಮಾಸಕ್ಕೆ ವ್ರತ ನಿಯಮ ಸೀಮಿತಗೊಳಿಸಬೇಡಿ

Team Udayavani, Aug 14, 2019, 1:33 PM IST

ಯಾದಗಿರಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಸಂತ್ರಸ್ತರಿಗೆ ದೇಣಿಗೆ ನೀಡಿ ಉದ್ಘಾಟಿಸಿದರು.

ಯಾದಗಿರಿ: ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಸಮಾನತೆ ತತ್ವ ಸಾರಿ ಮನುಕುಲಕ್ಕೆ ಧರ್ಮ ಸಂಸ್ಕಾರ ನೀಡಿದ ಶಿವ ಶರಣರ ವಿಶಾಲ ಧೋರಣೆಗಳು ಜನ ಪ್ರಜ್ಞೆಗೆ ಜ್ಞಾನದ ದೀಪವನ್ನು ಬೆಳಗಿದವು ಎಂದು ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪವಿತ್ರ ಶ್ರಾವಣ ಮಾಸದ ಎರಡನೆಯ ಸೋಮವಾರ ತಾಲೂಕು ವೀರಶೈವ ಸಮಾಜ, ಜಿಲ್ಲಾ ಶರಣರ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ನಡೆದ ಶ್ರಾವಣ ಮಾಸದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಕ್ತಿಗೆ ಭಕ್ತಿಮಾರ್ಗವನ್ನು ಶಿವಶರಣರು ತೋರಿದರು. ಭಕ್ತಿಯ ಸಾಧನದಿಂದ ಮನ ಅರಳುತ್ತದೆ. ಜೀವ-ದೇವ ಪರಸ್ಪರ ಕೂಡಿದಾಗ ಜೀವನ್ಮುಕ್ತಿಯನ್ನು ಪಡೆಯುತ್ತದೆ. ಶಿವಭಕ್ತರು ಶ್ರಾವಣ ಮಾಸಕ್ಕೆ ವ್ರತ ನಿಯಮಗಳನ್ನು ಸೀಮಿತಗೊಳಿಸದೆ ಅದನ್ನು ವರ್ಷಪೂರ್ತಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ವೆಂಕಟೇಶ ಕಲಕಂಭ, ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಅನನ್ಯವಾದ ಪ್ರಕಾರ. ಆಧ್ಯಾತ್ಮ ಸಾಧಕರು ತಮ್ಮ ಅನುಭವದ ಸತ್ಯಾನ್ವೇಷಣೆಯ ಮೂಲಕ ಸೃಷ್ಟಿಸಿದ ಸಾಹಿತ್ಯ ಸತ್ಯ ಧರ್ಮ ನೀತಿ ಸಹಕಾರ ಸಹಬಾಳ್ವೆಯ ಪ್ರತೀಕವನ್ನು ವಚನ ಸಾಹಿತ್ಯದಲ್ಲಿ ಅಡಗಿದೆ. ಶರಣರು ಮಾನವಕುಲದ ಘನತೆಯನ್ನು ವಿಶ್ವಕ್ಕೆ ಸಾರಿದ್ದಾರೆ. ಅವರಲ್ಲಿ ಮುದನೂರಿನ ಕನ್ನಡದ ಮೊದಲ ವಚನಕಾರ ದೇವರ ದಾಸಿಮಯ್ಯನವರು ರಾಮನಾಥ ಅಂಕಿತನಾಮದಿಂದ ವಚನ ರಚಿಸಿ ಅನುಭವಗಳನ್ನೇ ಆಧ್ಯಾತ್ಮಿಕ ರೂಪದಲ್ಲಿ ಕಂಡುಕೊಂಡ ಮಹಾ ಶಿವಶರಣೆನೆಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ವೀರಶೈವ ಸಮಾಜದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಕಾಯಕ ದಾಸೋಹ ದಾನಗಳ ಮೂಲಕ ಸಮಾಜದ ಸಾಮರಸ್ಯವನ್ನು ತರಲು ಶ್ರಮಿಸಿದ ಶರಣರ ನಡೆಯಂತೆ ನಮ್ಮ ಜೀವನ ರೂಪಿಸಿಕೊಳ್ಳಬೇಕು. ವರುಣನ ಅಬ್ಬರಕ್ಕೆ ನಮ್ಮ ಜಿಲ್ಲೆಯಲ್ಲಿ ನೆರೆ ಹಾವಳಿ ಸೃಷ್ಟಿಯಾಗಿದೆ. ನೂರಾರು ಕುಟುಂಬಗಳು ಸೇರಿದಂತೆ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಜನಸಾಮಾನ್ಯರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿರುವ ನೆರೆ ಸಂತ್ರಸ್ತರಿಗೆ ತಮ್ಮಿಂದಾದ ನೆರವು ನೀಡಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ರೊಟರಿಯನ್‌ ಕ್ಲಬ್‌ ಅಧ್ಯಕ್ಷ ಸೋಮನಾಥ ಜೈನ್‌ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಹನುಮಾನದಾಸ ಮಾತನಾಡಿದರು.

ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಆರ್‌.ಮಹಾದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ, ಬಸವರಾಜಪ್ಪ ಸಜ್ಜನ್‌, ಸುಭಾಷ್‌ ಆಯಾರಕರ್‌, ರಾಜು ಹೆಂದೆ, ಶರಣಪ್ಪ ಗುಳಗಿ, ಬಲವಂತರಾಯ ಮಾಲಿಪಾಟೀಲ, ನೂರಂದಪ್ಪ ಲೇವುಡಿ, ನಾಗಪ್ಪ ಸಜ್ಜನ್‌, ಬಸವರಾಜಪ್ಪ ಹಾವೇರಿ, ಲಕ್ಷ್ಮೀ ನಾರಾಯಣ ಗುಂಡಾನೂರ ಸೇರಿದಂತೆ ಇತರರು ಭಾಗವಹಿಸಿದ್ದರು. ನೀಲಕಂಠ ಶೀಲವಂತ ಸ್ವಾಗತಿಸಿದರು. ಬಸವರಾಜ ಮೋಟ್ನಳ್ಳಿ ಅಭಿನಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ