ಕರ್ನಾಟಕಕ್ಕೆ 8 ಹೊಸ ರೈಲ್ವೆ ಯೋಜನೆ


Team Udayavani, Aug 19, 2017, 4:11 PM IST

yadgir.jpg

ಯಾದಗಿರಿ: ರಾಜ್ಯದ ರೈಲ್ವೆ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಯುಪಿಎ ಸರ್ಕಾರ 2500 ಕೋಟಿ ರೂ. ನೀಡಿದರೆ ಎನ್‌ಡಿಎ ಸರ್ಕಾರ 3,177 ಕೋಟಿ ರೂ. ಅನುದಾನ ನೀಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭಾಕರ್‌ ಪ್ರಭು ಹೇಳಿದರು. ಯಾದಗಿರಿ ತಾಲೂಕಿನ ಗುರುಮಠಕಲ್‌ ಬಳಿಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆಗೆ ಚಾಲನೆ ಹಾಗೂ ವಾಡಿ ಬೈಪಾಸ್‌ ರೈಲ್ವೆ ಮಾರ್ಗ ನಿರ್ಮಾಣಕ್ಕೆ ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ರಿಮೋಟ್‌ ಲಿಂಕ್‌ ಮೂಲಕ ಸಚಿವರು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಷ್ಟ್ರದ ಚಿತ್ರಣ ಬದಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲೂ ಸಾಕಷ್ಟು
ಬದಲಾವಣೆ ತರಲಾಗಿದ್ದು, ಅತ್ಯಾಧುನಿಕ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ. ಕರ್ನಾಟಕದಲ್ಲಿ
ಎಂಟು ಹೊಸ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಯಾದಗಿರಿ ಜಿಲ್ಲೆಯಲ್ಲಿ ವಾರ್ಷಿಕ 600
ಬೋಗಿ ಫ್ರೇಮ್‌ ಉತ್ಪಾದನಾ ಸಾಮರ್ಥ್ಯದ ರೈಲ್ವೆ ಬೋಗಿ ಕಾರ್ಖಾನೆ ಉದ್ಘಾಟಿಸಲಾಗುತ್ತಿದ್ದು, ಯಾದಗಿರಿ ಜನತೆಗೆ ಇದು ಯಾದಗಾರ್‌ ದಿನ್‌ ಆಗಲಿದೆ. “ರೈಲ್ವೆ ಬಡೇ ದೇಶ ಬಡೇ’ ಎಂಬ ಉದ್ಘೋಷದೊಂದಿಗೆ ರೈಲ್ವೆ ಮಂತ್ರಾಲಯ ಕೆಲಸ ಮಾಡುತ್ತಿದೆ. ರೈಲ್ವೆ ಇಲಾಖೆಯಿಂದ ಜಾರ್ಖಂಡ್‌, ಬಿಹಾರ, ಕೇರಳ, ಚೆನ್ನೈ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸಿಲಾಗಿದೆ ಎಂದರು. ದೇಶದ ಜನ ಹೆಚ್ಚೆಚ್ಚು ತಂತ್ರಜ್ಞಾನ ಬಳಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡುತ್ತಿದ್ದಾರೆ. ಅದರಂತೆ ನವದೆಹಲಿಯಲ್ಲಿದ್ದುಕೊಂಡೇ ತಂತ್ರಜ್ಞಾನ
ಬಳಸಿಕೊಂಡು ಕರ್ನಾಟಕದ ವಿವಿಧ ರೈಲ್ವೆ ಕಾರ್ಯಗಳನ್ನು, ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ ಎಂದರು. ಇತ್ತ ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಯಚೂರು-ಯಾದಗಿರಿ ಸಂಸದ ಬಿ.ವಿ. ನಾಯಕ್‌ ಮಾತನಾಡಿ, ಈ ಹಿಂದಿನ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಹಾಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ರೈಲ್ವೆ ಬೋಗಿ ಕಾರ್ಖಾನೆ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು. ರಾಜ್ಯ ಸರಕಾರ ಬೋಗಿ ಉತ್ಪಾದನಾ ಕಾರ್ಖಾನೆಗಾಗಿ 150 ಎಕರೆ ಜಮೀನು ಉಚಿತವಾಗಿ ನೀಡಿದ್ದು, ಕೇಂದ್ರ ರೈಲ್ವೆ ಸಚಿವರು ಪ್ರಚಾರ ವಿಲ್ಲದೆ ರೈಲ್ವೆ ಇಲಾಖೆಯನ್ನು ಬಲಪಡಿಸುತ್ತಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಕಾರ್ಖಾನೆಗಾಗಿ ಜಮೀನು ಕಳೆದು ಕೊಂಡ ರೈತರ ಮಕ್ಕಳು ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ರೈಲ್ವೆ ಬೋಗಿ ಕಾರ್ಖಾನೆ ಉದ್ಘಾಟನೆಯಿಂದ ಹೈ. ಕ. ಭಾಗದ ಆರ್ಥಿಕ ಅಭಿವೃದ್ಧಿಯೊಂದಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಹೈ.ಕ. ಭಾಗದ ಜನ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ವಾಡಿ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆಗಳಿದ್ದು, ಆದಷ್ಟು ಬೇಗ ವಾಡಿ ನಿಲ್ದಾಣವನ್ನು ಆಧುನೀಕರಣಗೊಳಿಸಬೇಕೆಂದು ಅವರು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ್‌, ಜಿಲ್ಲಾ ಪಂಚಾಯತ್‌ ಸದಸ್ಯೆ ಶಶಿಕಲಾ ಕ್ಯಾತನಾಳ, ತಾಪಂ ಅಧ್ಯಕ್ಷ ಬಾಷು ಎಸ್‌. ರಾಡೋಡ, ಕಡೇಚೂರ ಗ್ರಾಪಂ ಅಧ್ಯಕ್ಷ ಭೀರಪ್ಪ, ಬಾಡಿಯಾಳ ಗ್ರಾಪಂ ಅಧ್ಯಕ್ಷೆ ಗೌರಮ್ಮ, ದಕ್ಷಿಣ ಮಧ್ಯೆ ರೈಲ್ವೆ ಮುಖ್ಯ ಮೆಕಾನಿಕಲ್‌ ಇಂಜಿನಿಯರ್‌ ಅರ್ಜುನ್‌ ಮುಂಡಿಯಾ, ನವದೆಹಲಿ ರೈಲ್ವೆ ಮಂಡಳಿ ಮೆಕಾನಿಕಲ್‌ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಘೋಷರಾಯ್‌ ವೇದಿಕೆಯಲ್ಲಿದ್ದರು. ದಕ್ಷಿಣ ಮಧ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಜಾನ್‌ ಥಾಮಸ್‌ ಸ್ವಾಗತಿಸಿದರು. ಗುಂತಕಲ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿಜಯ ಪಿ. ಸಿಂಗ್‌ ವಂದಿಸಿದರು.  

ಉದ್ಯೋಗ ನೀಡಲು ಆಗ್ರಹಿಸಿ ಸ್ಥಳೀಯರ ಧರಣಿ

ಯಾದಗಿರಿ: ರೈಲ್ವೆ ಬೋಗಿ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಕಡೇಚೂರು-ಬಾಡಿಯಾಳ ಗ್ರಾಮಸ್ಥರು ಧರಣಿ ನಡೆಸಿದರು. ಗುರುಮಠಕಲ್‌ ಮತಕ್ಷೇತ್ರದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ಕಾರ್ಖಾನೆ ಉದ್ಘಾಟನೆ ಹಾಗೂ ವಾಡಿ ಬೈಪಾಸ್‌ ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ಮುಗಿದ ನಂತರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರೈಲ್ವೆ ಬೋಗಿ ಕಾರ್ಖಾನೆಗಾಗಿ ರೈತರು ಭೂಮಿ ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಭಟನಾನಿರತರು ತಿಳಿಸಿದರು. ಭೂಮಿ ಕಳೆದು ಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಆಸರೆಯಾಗಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಸಂಸದ ಬಿ.ವಿ. ನಾಯಕ, ಅಮರನಾಥ ಪಾಟೀಲ, ಬಿ.ಜಿ. ಪಾಟೀಲ ಹಾಗೂ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ, ಉದ್ಯೋಗ ನೀಡುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಖಾಸೀಂಸಾಬ್‌, ಅಮೀರ್‌ ಅಲಿ, ಚಂದ್ರು, ಹಸನ್‌ ಅಲಿ, ಹುಸೇನಪ್ಪ ಇತರರು ಇದ್ದರು.

ಟಾಪ್ ನ್ಯೂಸ್

750

ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿದ ಪಾಕಿಸ್ತಾನ

dandeli news

ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನ: ಅಳಲು ತೋಡಿಕೊಳ್ಳುತ್ತಿರುವ ಸ್ಥಳೀಯರು

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

nikhil

ನಿಖಿಲಣ್ಣ ಶಾಸಕರಾಗುವುದು ಬೇಡ, ಸುಮಲತಾ ವಿರುದ್ಧ ಗೆಲ್ಲಲೇಬೇಕು

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

24aditi

ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಅದಿತಿ ಪ್ರಭುದೇವ: ಹೊಸ ಚಿತ್ರಕ್ಕೆ ಮುಹೂರ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21police

ಡಿವೈಎಸ್ಪಿ ದೇವರಾಜ ಅಧಿಕಾರ ಸ್ವಿಕಾರ

20bus

ಬಸ್‌ ಸೌಲಭ್ಯ ಕಲ್ಪಿಸಲು ಕಕ ಸಾರಿಗೆ ನಿಗಮಕ್ಕೆ ಮನವಿ

19lack

ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಭರವಸೆ

18covid

ಲಸಿಕಾಕರಣದಲ್ಲಿ ಭಾರತ ಐತಿಹಾಸಿಕ ಸಾಧನೆ

15mahatoshree

ಅನುಭಾವದ ಸಾಹಿತ್ಯಕ್ಕೆ ಮನ್ನಣೆ: ಮಾತೋಶ್ರೀ

MUST WATCH

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

ಹೊಸ ಸೇರ್ಪಡೆ

750

ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿದ ಪಾಕಿಸ್ತಾನ

dandeli news

ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನ: ಅಳಲು ತೋಡಿಕೊಳ್ಳುತ್ತಿರುವ ಸ್ಥಳೀಯರು

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.