Udayavni Special

ಕೋವಿಡ್ ಗೆದ್ದ 80 ವರ್ಷದ ಅಜ್ಜಿ


Team Udayavani, Jun 12, 2021, 11:15 AM IST

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

ಸುರಪುರ: ಕೋವಿಡ್‌ ಸೋಂಕು ತಗುಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 80 ವಯಸ್ಸಿನ ವೃದ್ಧೆಯೊಬ್ಬಳು ಸೋಂಕಿನಿಂದ ಗುಣಮುಖಳಾಗಿ ಕೋವಿಡ್ ವಿರುದ್ಧ ಗೆದ್ದು ಶುಕ್ರವಾರ ಮನೆ ಸೇರಿದ್ದಾಳೆ.

ಸುರಪುರ ಕ್ಷೇತ್ರ ವ್ಯಾಪ್ತಿಯ ಕೊಡೇಕಲ್‌ ಗ್ರಾಮದ ಲಕ್ಷ್ಮೀಬಾಯಿ ಯಲ್ಲಪ್ಪ ಜಿರಾಳ ವೃದ್ಧೆಗೆ ಮೇ 30ರಂದು ಕೋವಿಡ್‌ ಸೋಂಕು ದೃಢಪಟ್ಟಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ 9 ದಿನಗಳ ನಿರಂತರ ಚಿಕಿತ್ಸೆ ಪ್ರಯತ್ನದ ಫಲವಾಗಿ ವೃದ್ಧೆ ಇದೀಗ ಗುಣಮುಖಳಾಗಿದ್ದಾಳೆ.

ವೃದ್ಧೆಯ ಆರೋಗ್ಯದಲ್ಲಿ ದಿನೇ ದಿನೆ ಚೇತರಿಕೆ ಕಂಡು ಬರುತ್ತಿರುವುದು ಕಂಡು ಆಸ್ಪತ್ರೆ ವೈದ್ಯರಲ್ಲಿ ಉತ್ಸಾಹ ಮೂಡಿಸಿತ್ತು. ಕಳೆದೆರಡು ದಿನಗಳಿಂದ ಆಕೆ ಸಂಪೂರ್ಣ ಗುಣಮುಖಳಾಗಿದ್ದು, ವೈದ್ಯ ಮತ್ತು ಸಿಬ್ಬಂದಿಯಲ್ಲಿ ಸಾರ್ಥಕ ಭಾವ ಮೂಡಿದೆ.

ಕೋವಿಡ್‌ 2ನೇ ಅಲೆ ಇಡೀ ದೇಶವನ್ನೇ ನಡುಗಿಸಿತು. ಪ್ರತಿದಿನ ಪಾಸಿಟಿವ್‌ ಕೇಸ್‌ಗಳು ಹೆಚ್ಚಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅನೇಕ ರೋಗಿಗಳು ಗುಣಮಮುಖರಾಗಿ ಮನೆ ಸೇರಿದ್ದಾರೆ. ಈಗ 80ರ ವಯಸ್ಸಿನ ವೃದ್ಧೆ ಹೆಮ್ಮಾರಿ ಜಯಿಸಿರುವುದು ಎಲ್ಲರಿಗೂ ಖುಷಿ ತಂದಿದೆ.

ಅಜ್ಜಿ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಶಫಿ ಉಜ್ಜಮಾ, ಡಾ| ಓಂಪ್ರಕಾಶ ಅಂಬೂರೆ, ಡಾ| ಹರ್ಷವರ್ಧನ ರಫಗಾರ್‌, ಆಯುಷ್‌ ವೈದ್ಯಾಧಿಕಾರಿಗಳು, ಸ್ಟಾಫ್‌ ನರ್ಸ್‌, ಗ್ರೂಪ್‌ ಡಿ ಇತರೆ ಆರೋಗ್ಯ ಸಿಬ್ಬಂದಿಗಳ ಸಹಕಾರ ಸ್ಮರಣೀಯ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ಆರ್‌.ವಿ. ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಎರಡು ತಿಂಗಳಲ್ಲಿ 264 ಪಾಸಿಟಿವ್‌ ಕೇಸ್‌ ಬಂದಿದ್ದು, ಈ ಪೈಕಿ 153 ಜನರು ಗುಣಮುಖರಾಗಿದ್ದಾರೆ. 69 ಜನರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಕೋವಿಡ್‌ ಸೆಂಟರ್‌ನಲ್ಲಿ 131 ಪಾಸಿಟಿವ್‌ ಕೇಸ್‌ಗಳ ಪೈಕಿ 120 ಗುಣಮುಖರಾಗಿದ್ದು 11 ಜನರನ್ನು ಬೇರೆಡೆ ರೆಫರ್‌ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್‌ ಮತ್ತು ಲಸಿಕೆಗೆ ಕೊರತೆ ಬಾರದಂತೆ 24 ಗಂಟೆಗಳ ಕಾಲ ಆರೋಗ್ಯ ಸಿಬ್ಬಂದಿ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. -ಡಾ| ಆರ್‌.ವಿ. ನಾಯಕ,-ತಾಲೂಕು ಆರೋಗ್ಯಾಧಿಕಾರಿ, ಸುರಪುರ

ಟಾಪ್ ನ್ಯೂಸ್

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

fgdfgergr

ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆ

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ

ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

Untitled-8888

ಸಿಎಂ ಆಗಿ ಬಿಎಸ್‌ವೈ ಅವರೇ ಮುಂದುವರೆಯಲಿ : ಯಾದಗಿರಿಯಲ್ಲಿ ಮಠಾಧೀಶರ ಒತ್ತಾಯ

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

MUST WATCH

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

ಹೊಸ ಸೇರ್ಪಡೆ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.