ಪ್ರವಾಹ ಇಳಿಮುಖ; ವಿಷ ಜಂತುಗಳ ಕಾಟ ಶುರು


Team Udayavani, Oct 17, 2020, 5:31 PM IST

yg-tdy-1

ಯಾದಗಿರಿ: ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿಯಲ್ಲಿ ಕೊಂಚ ಪ್ರವಾಹದ ನೀರು ಇಳಿಕೆಯಾಗಿದ್ದು ಇದೀಗ ವಿಷ ಜಂತುಗಳ ಕಾಟ ಜನರನ್ನು ಕಾಡುತ್ತಿದೆ.

ಸನ್ನತಿ ಬ್ಯಾರೇಜ್‌ನಿಂದ 3 ಲಕ್ಷ ಕ್ಯೂಸೆಕ್‌ ಗೂ ಹೆಚ್ಚು ನೀರು ಹರಿಸಿದ್ದರಿಂದ ನದಿ ಪಾತ್ರದ ಹುರಸಗುಂಡಗಿಯಲ್ಲಿ ಮನೆಗಳೆಲ್ಲಾ ಜಲಾವೃತಗೊಂಡು ಗ್ರಾಮಸ್ಥರು ಪರದಾಡುವಂತಾಗಿತ್ತು. ಪ್ರವಾಹಕ್ಕೆ ತುತ್ತಾಗುತ್ತಿರುವುದರಿಂದ ಗ್ರಾಮಸ್ಥರನ್ನು ಹೊಸ ಗ್ರಾಮಕ್ಕೆ ಸರ್ಕಾರ ಸುಮಾರು ವರ್ಷಗಳ ಹಿಂದೆಯೇ ಸ್ಥಳಾಂತರಗೊಳಿಸಿದರೂ ಗ್ರಾಮದಶೇ.75ರಷ್ಟು ಜನರು ಹಳೆ ಗ್ರಾಮದಲ್ಲಿಯೇ ವಾಸವಾಗಿದ್ದು, ಪ್ರವಾಹಕ್ಕೆ ಸಿಲುಕುವಂತಾಗಿದೆ.

ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆಹಿನ್ನೆಲೆ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆಜಿಲ್ಲಾಡಳಿತ ಸ್ಥಳಾಂತರಿಸಿದ್ದು, ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಹೊಸ ಗ್ರಾಮಕ್ಕೆ ತೆರಳಲು ಮುಂದಾಗುತ್ತಿಲ್ಲ ಎನ್ನಲಾಗಿದೆ. ಇದೀಗ ಪ್ರವಾಹ ಸ್ವಲ್ಪ ಇಳಿಕೆಯಾಗಿದ್ದು ನೀರಿನಲ್ಲಿದ್ದ ವಿಷಜಂತುಗಳು ಮನೆಯಲ್ಲಿ ಸೇರುತ್ತಿರುವುದು ಎಲ್ಲಿ ವಾಸಿಸುವುದು ಎನ್ನುವುದು ತೋಚದಂತಾಗಿದೆ ಎಂದು ಜನರು ಅಳಲು ತೋಡಿಕೊಂಡರು. ಪ್ರವಾಹದಿಂದ ಬಾಣಂತಿಗೆ ಸೂಕ್ತ ಆರೈಕೆ ಮಾಡಲು ಆಗದೇ ಕಷ್ಟಕ್ಕೆ ಸಿಲುಕಿರುವ ಕುಟುಂಬವೊಂದು ಹಳೆ ಬಸ್‌ ತಂಗುದಾಣದಲ್ಲಿಯೇ ಮಂಚ ಹಾಕಿ ವ್ಯವಸ್ಥೆ ಮಾಡಿಕೊಂಡಿದ್ದು ಕಂಡು ಬಂತು. ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಗ್ರಾಮದಲ್ಲಿ ಸಾರಿಗೆ ಬಸ್‌ ನಿಲ್ಲಿಸಲಾಗಿದೆ.

ಸೂಕ್ತ ಪರಿಹಾರ ಸಿಕ್ಕಿಲ್ಲ: ಮಳೆಗಾಲದಲ್ಲಿ ಪ್ರತಿ ವರ್ಷ ಭೀಮಾ ನದಿಯಿಂದ ಪ್ರವಾಹ ಎದುರಿಸುತ್ತಿರುವ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಜನರು ಸಮಸ್ಯೆ ಅರಿತು ಜಿಲ್ಲಾಡಳಿತ ಗ್ರಾಮವನ್ನು ಸ್ಥಳಾಂತರಗೊಳಿಸಿದೆ. ಆದರೆ, ಸ್ಥಳಾಂತರಗೊಂಡ ಕೆಲವು ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಕಂದಾಯ ಸಚಿವ ಆರ್‌ ಅಶೋಕ ಅವರಿಗೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಆರೋಪಿಸಿದರು. ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ನಂತರ ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಂದರ್ಭದಲ್ಲಿ ಸಚಿವರ ಮುಂದೆಜನರು ತಮ್ಮ ಅಳಲು ತೋಡಿಕೊಂಡರು. ಈ ಕುರಿತು ಜಿಲ್ಲಾಧಿಕಾರಿ, ಶಾಸಕರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಸಚಿವರು ಹೇಳಿದರು.

ಸ್ಥಳಾಂತರವಾಗುವ ಕುಟುಂಬಗಳಿಗೆ ಉಚಿತ ನಿವೇಶನ ನೀಡುವ ಜೊತೆಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು. ಸರ್ಕಾರ ನಿಗದಿ ಪಡಿಸಿದ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.

 

-ಅನೀಲ ಬಸೂದೆ

ಟಾಪ್ ನ್ಯೂಸ್

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

30ಕ್ಕೆ ಗಡಿ ಹಳ್ಳಿ ಹಬ್ಬ, ಸಂಗೀತ ಸಂಜೆ ಕಾರ್ಯಕ್ರಮ

yadagiri news

ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ

26

ಪ್ರಶಸ್ತಿಯಿಂದ ಸಾಧಕನ ಜವಾಬ್ದಾರಿ ವೃದ್ದಿ

27

ದೇವಿಕೇರಾದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು

yadagiri news

ಮಧ್ಯವರ್ತಿಗಳಿಂದ ಮೋಸ ಹೋಗದಿರಿ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

4

200 ಕೋಟಿ ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪನೆ ಯೋಜನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಂದ ಪ್ರಶಸ್ತಿ ಪ್ರದಾನ

ಟಿವಿಎಸ್‌ ಮೋಟಾರ್ಸ್‌ಗೆ ಗ್ರೀನ್‌ ಎನರ್ಜಿ ಅವಾರ್ಡ್‌

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

3

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.