ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ
Team Udayavani, Apr 1, 2021, 7:10 PM IST
ಯಾದಗಿರಿ: ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ವೀರಮಾರುತಿ ದೇವಸ್ಥಾನ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಪಾದಯಾತ್ರೆ ಆರಂಭಿಸಲಾಯಿತು.
ಗ್ರಾಮದ ಪಾದಯಾತ್ರಿಗಳ ಭಕ್ತರ ತಂಡ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಪಾದಯಾತ್ರಿಗಳ ತಂಡವನ್ನು ಬೀಳ್ಕೊಟ್ಟರು. ಪಾದಯಾತ್ರೆ ತಂಡ ಗ್ರಾಮದಿಂದ ಹೊರಟು ಬಲಕಲ್, ಚಟ್ನಳ್ಳಿ, ಇಬ್ರಾಹಿಂಪುರ, ಶಿರವಾಳ, ಅಣಬಿ, ಹೊಸೂರು, ಆಂದೋಲಾ, ಗೂಡೂರ, ಕಟ್ಟಿಸಂಗಾವಿ, ಫರತಾಬಾದ ನಂದಿಕೂರ, ಕೊಟೂರ(ಡಿ) ಮಾರ್ಗವಾಗಿ ಕಲಬುರಗಿಗೆ ಏ.2ರಂದು ಬೆಳಗ್ಗೆ ಶರಣಬಸವೇಶ್ವರ ದೇವಸ್ಥಾನಕ್ಕೆ
ತಲುಪಲಿದ್ದಾರೆ. ಗ್ರಾಮದ ಮುಖ್ಯ ಶಿಕ್ಷಕ ಶರಣಬಸ್ಸಪ್ಪ ನಾಸಿ ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ.
ಗ್ರಾಮದ ವೇ. ಮೂ. ಕುಮಾರಸ್ವಾಮಿ ಚರ್ತುಚಾರ್ಯಮಠ, ವಿಶ್ವನಾಥಸ್ವಾಮಿ ಚರ್ತುಚಾರ್ಯಮಠ ಹಾಗೂ ಗ್ರಾಮದ ಪ್ರಮುಖರು ಪಾದಯಾತ್ರಿಗಳಿಗೆ ಬೀಳ್ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು