ನೀಲಕಂಠರಾಯನ ಗಡ್ಡಿಗೆ ಸೇತುವೆ ಭಾಗ್ಯ ಬಾಲಪ್ಪ ಎಂ.ಕುಪ್ಪಿ

Team Udayavani, Sep 12, 2017, 3:51 PM IST

ಕಕ್ಕೇರಾ: ಪ್ರತಿವರ್ಷ ಪ್ರವಾಹ ಎದುರಿಸುವ ಕೃಷ್ಣಾನದಿ ತೀರದ ನೀಲಕಂಠರಾಯನಗಡ್ಡಿಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಸೋಮವಾರ ಭೇಟಿ ನೀಡಿದ್ದರಿಂದ ಅಲ್ಲಿನ ಗ್ರಾಮಸ್ಥರಿಗೆ ಅಂತೂ ಸೇತುವೆ ಭಾಗ್ಯ ಒದಗಿ ಬರಲಿದೆ ಎಂಬ ಆತ್ಮ ವಿಶ್ವಾಸ ಮೂಡಿದೆ. 

ಹೌದು, ಇಲ್ಲಿಯವರೆಗೂ ಯಾವುದೇ ಜಿಲ್ಲಾಧಿಕಾರಿ ಕಲ್ಲುಬಂಡಿಗಳಿಂದ ಕೂಡಿದ ಕೃಷ್ಣಾನದಿ ದಾಟಿ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. 

ದೃಢವಾದ ಮನಸ್ಸಿನೊಂದಿಗೆ ನದಿಯಲ್ಲಿ ಕಲ್ಲುಬಂಡೆ ಮುಳ್ಳು ನಡುವೆ ನಡೆದು ಎದುರಿಸಿ ಗಡ್ಡಿಗೆ ಭೇಟಿ ನೀಡಿದ ಪ್ರಥಮ
ಜಿಲ್ಲಾಧಿಕಾರಿ ಎಂದು ನಾಗರಿಕರಿಂದ ಅಭಿಪ್ರಾಯ ವ್ಯಕ್ತಗೊಂಡವು.

ಪ್ರತಿವರ್ಷ ಭಾರಿ ಪ್ರವಾಹ ಉಂಟಾಗುತಿತ್ತು. ಈ ಹಿಂದಿನ ಜಿಲ್ಲಾಧಿಕಾರಿಗಳು ಪ್ರವಾಹ ಬಂದಾಗೊಮ್ಮೆ ಕೃಷ್ಣಾನದಿ ದಂಡೆಯಲ್ಲಿಯೇ ನಿಂತು ವೀಕ್ಷಿಸಿ ಹೋಗಿದ್ದರು. ಆದರೆ ಅವರಿಂದ ಭೇಟಿ ನೀಡಲು ಸಾಧ್ಯ ಆಗಿರಲಿಲ್ಲ. 2016ರಲ್ಲಿ ಸುರಪುರ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಬೋಟ್‌ ಮೂಲಕ ಗಡ್ಡಿಗೆ ಭೇಟಿ ನೀಡಿದ್ದು ಸ್ಮರಿಸಬಹುದು. ಸದ್ಯ ಈಗಿನ ಜಿಲ್ಲಾಧಿಕಾರಿ ಮಂಜುನಾಥ ಕೃಷ್ಣಾನದಿ ದಾಟಿ ಗ್ರಾಮಕ್ಕೆ ಭೇಟಿ ನೀಡಿರುವುದು ಜನರಲ್ಲಿ ತಂತಸ ತಂದಿದೆ.

ಕಲ್ಲು ಮುಳ್ಳು ಲೆಕ್ಕಿಸದೆ ಜಿಲ್ಲಾಧಿಕಾರಿ ಹುಮಸ್ಸಿನೊಂದಿಗೆ 3 ಕಿ.ಮೀ ದೂರದ ಗಡ್ಡಿಗೆ ಹೆಜ್ಜೆ ಹಾಕಿದರು. ಆದರೆ ಸುಸ್ತಾಗಿರುವುದು ಕಂಡು ಬರಲಿಲ್ಲ. ಹೀಗಾಗಿ ಇದು ನನಗೆ ಹೊಸ ಅನುಭವ ಎಂಬ ಮಾತು ಅವರಲ್ಲಿ ಕೇಳಿದವು.

ಗ್ರಾಮಸ್ಥರೊಂದಿಗೆ ಚರ್ಚೆ: ಜಿಲ್ಲಾಧಿಕಾರಿ ಆಗಮನಕ್ಕಾಗಿ ಕಾಯುತ್ತಿದ್ದ ಜನರೊಂದಿಗೆ ಸೌಕರ್ಯ ಪರಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಕುಡಿವ ನೀರಿಲ್ಲ ಪ್ರವಾಹ ಬಂದರೆ ಈಜುಕಾಯಿ ಹಾಕಿಕೊಂಡು ನದಿ ದಾಟಬೇಕು. ಈ ಹಿಂದೇ ನದಿಯಲ್ಲಿ ನಾಲ್ಕು ಜನ ಕೊಚ್ಚಿಕೊಂಡು ಹೋದರು. ಈ ಎಲ್ಲಾ ಸಮಸ್ಯೆ ಮನಗಂಡರೂ ಯಾವುದೇ ಅಧಿಕಾರಿ ನಮಗೆ ಶಾಶ್ವತ ಪರಿಹಾರ ನೀಡಿಲ್ಲ ಎಂದು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಗ್ರಾಮಸ್ಥರು ಬಿಚ್ಚಿಟ್ಟರು. ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲಾಗುವುದು. ಯಾವುದಕ್ಕೂ ಚಿಂತಿಸುವುದು ಬೇಡ. ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಶಾಲಾ ಮಕ್ಕಳ ಸ್ಥಿತಿಗತಿ ವಿಚಾರಿಸಿದರು. 

ಸೇತುವೆ ನಿರ್ಮಿಸಲು ಶೀಘ್ರ ಟೆಂಡರ್‌
ಕಕ್ಕೇರಾ: ಕೃಷ್ಣಾನದಿ ಪ್ರವಾಹ ಎದುರಿಸುವ ನೀಲಕಂಠರಾಯನಗಡ್ಡಿಗೆ ಸೇತುವೆ ನಿರ್ಮಿಸಲು ಇದೇ ತಿಂಗಳೊಳಗೆ ಅತೀ ಶೀಘ್ರವಾಗಿ 1.74 ಕೋಟಿ ರೂ. ವೆಚ್ಚದ ಟೆಂಡರ್‌ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಂಜುನಾಥ ಸ್ಪಷ್ಟಪಡಿಸಿದರು. ಕೃಷ್ಣಾನದಿ ತೀರ ನೀಲಕಂಠರಾಯನಗಡ್ಡಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ
ಅವರು ಮಾತನಾಡಿದರು.

ಕೆಲವು ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಿರಬಹುದು. ಆದರೆ ಪ್ರಥಮ ಭಾರಿಗೆ ನಾನು ಜಿಲ್ಲಾಧಿಕಾರಿಯಾಗಿ ಭೇಟಿ ನೀಡಿದ್ದೇನೆ. ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನಲ್ಲಿ ಜನರಿಗೆ ಶಾಶ್ವತ ಸೇತುವೆ ಕಾಮಗಾರಿ ಕಲ್ಪಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು. ಹಳೆ ಪಟ್ಟಿದಾರರ ಹೆಸರಿಗೆ ಜಮೀನು ಇರುವುದರಿಂದ ಎಸ್‌ಸಿಪಿ/ಎಸ್‌ಟಿಪಿ ಯೋಜನೆಡಿಯಲ್ಲಿ ರೈತರ ಜಮೀನುಗಳಿಗೆ ನೀರಾವರಿ ಹಾಗೂ ಬೆಳೆಸಾಲ ಸೇರಿದಂತೆ ವಿವಿಧ ಯೋಜನೆ ಕಲ್ಪಿಸಲು ಸಾಧ್ಯವಾಗಿಲ್ಲ. ಸದ್ಯ ನೂತನ ಸದಸ್ಯರ ಹೆಸರಿಗೆ ಜಮೀನು ಪಟ್ಟಿದಾರರನ್ನಾಗಿಸಲು ತಹಶೀಲ್ದಾರರಿಗೆ ಸೂಚಿಸಲಾಗಿದೆ. ನಂತರ ಸೌಕರ್ಯ ಒದಗಿಸಲಾಗುತ್ತದೆ ಎಂದರು. ಶಾಶ್ವತ ಕುಡಿವ ನೀರು ವಿದ್ಯುತ್‌ ಆಶ್ರಯ ಮನೆಗಳು ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಅತೀ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಯಾವುದಕ್ಕೂ ಅನುಮಾನ ಬೇಡ ಎಂದು ತಿಳಿಸಿದರು. ಈಗಾಗಲೇ ಇಲ್ಲಿನ ಜನರಿಗೆ ಆರೋಗ್ಯದ ತಪಾಸಣೆ ಜಿಲ್ಲಾ ವೈದಾಧಿಕಾರಿಗಳಿಂದ ಮಾಡಲಾಗಿದೆ. ಯಾವುದಕ್ಕೂ ವಾರದಲ್ಲಿ ಒಮ್ಮೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ದಶರತ ಆರೇಶಂಕರ, ಪುರಸಭೆ ಸದಸ್ಯರಾದ ರಾಜು ಹವಾಲ್ದಾರ, ಶರಣಕುಮಾರ ಸೊಲ್ಲಾಪುರ, ಬಸಯ್ಯಸ್ವಾಮಿ, ತಹಶೀಲ್ದಾರ ಸುರೇಶ ಅಂಕಲಗಿ, ಉಪತಹಶೀಲ್ದಾರ ರೇವಪ್ಪ ತೆಗ್ಗಿನಮನಿ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ, ವೈದ್ಯಾಧಿಕಾರಿ ಡಾ| ವಿಠ್ಠಲ್‌ ಪೂಜಾರಿ, ಶಿವಪ್ಪ ಸೇರಿದಂತೆ ಎಚ್‌ಕೆಆರ್‌ಡಿಬಿ ಅಧಿಕಾರಿಗಳು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಗುರುಮಠಕಲ್‌: ವಿದ್ಯಾ ಮಂದಿರಕ್ಕೆ ಕೈ ಮುಗಿದು ಒಳಗೆ ಬನ್ನಿ ಎನ್ನುವ ಘೋಷಣೆ ಬದಲು ಇಲ್ಲಿನ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶಾಲೆಯೊಳಗೆ ದಿನನಿತ್ಯ ಬರುವ...

  • ಯಾದಗಿರಿ: ಜಿಲ್ಲಾದ್ಯಂತ ಸೆ. 25ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಯಶಸ್ವಿಯಾಗಲು ಜಂತುಹುಳು ನಾಶಕ ಅಲ್ಬೆಂಡ್‌ಜೋಲ್ ಮಾತ್ರೆಗಳ...

  • ಯಾದಗಿರಿ: ಕ್ರೀಡಾ ಚಟುವಟಿಕೆಗಳು ಜೀವನದ ಬಹುಮುಖ್ಯ ಭಾಗವಾಗಿದೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ...

  • ಯಾದಗಿರಿ: ಜಿಲ್ಲೆಯ ಕವಡಿಮಟ್ಟಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ...

  • ಗುರುಮಠಕಲ್: ಗರ್ಭಿಣಿಯರು, ಬಾಣಂತಿಯರು ಪ್ರತಿದಿನ ಊಟದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ...

ಹೊಸ ಸೇರ್ಪಡೆ