ತೊಗರಿ ಖರೀದಿ ಕೇಂದ್ರ ಸ್ಥಗಿತ


Team Udayavani, Jan 13, 2018, 3:56 PM IST

yad-3.jpg

ಸುರಪುರ: ಹಸನಾಪುರದ ಎಪಿಎಂಸಿ ಪ್ರಾಂಗಣದಲ್ಲಿನ ತೋಗರಿ ಖರೀದ ಕೇಂದ್ರ ಸ್ಥಗಿತಗೊಂಡಿದ್ದು, ತೊಗರಿ ಮಾರಾಟಕ್ಕೆ ರೈತರು ಪರದಾಡುವಂತಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟಿಸಿದರು.

ಕಳೆದ ಮೂರು ದಿನಗಳಿಂದ ತೊಗರಿ ಖರೀದಿ ಕೇಂದ್ರದವರು ತೊಗರಿ ಖರೀದಿಗೆ ಮುಂದಾಗಲಿಲ್ಲ. ಖಾಲಿ ಚೀಲದ ನೆಪದಲ್ಲಿ ಖರೀದಿಯನ್ನ ಸ್ಥಗಿತಗೊಳಿಸಲಾಗಿದೆ. ಈ ಕುರಿತು ರೈತರು ಶುಕ್ರವಾರ ಆಕ್ಷಪವೆತ್ತಿ ಅಧಿಕಾರಿಗಳೂಂದಿಗೆ ವಾಗ್ವಾದ ನಡೆಸಿ ರಸ್ತೆ ತಡೆಯಿಂದ ಸಂಚಾರದಲ್ಲಿ ವ್ಯತೆಯ ಉಂಟಾಯಿತು.

ರೈತರ ರಸ್ತೆ ತಡೆಯಿಂದ ಪೋಲಿಸರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಕೈಬಿಡುವಂತೆ ತಿಳಿಸಿದರು. ಜಿಲ್ಲಾಧಿಕಾರಿ ಆಗಮಿಸಿ
ಸಮಸ್ಯೆ ನಿವಾರಣೆ ಮಾಡುವವರೆಗೆ ರಸ್ತೆ ತಡೆ ಕೈಬಿಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು. ಪೋಲಿಸ್‌ ಹಾಗೂ ರೈತರ ನಡುವೆ ಮಾತಿನ ಚಕಮುಕಿ ನಡೆಯಿತು. ಪಿಐ ಟಿ.ಆರ್‌. ರಾಘವೇಂದ್ರ ಸಂಧಾನ ನಡೆಸಿ ಪರಸ್ಥಿತಿ ತಿಳಿಗೊಳಿಸಿದರು. 

ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಣ್ಣ ಸಂತ್ಯಂಪೇಟ ಮಾತನಾಡಿ, ತೊಗರಿ ಖರೀದಿ ನೆಪದಲ್ಲಿ ಸರಕಾರಗಳು ರೈತರೊಂದಿಗೆ ಚಲ್ಲಾಟ ನಡೆಸಿವೆ. ಖಾಲಿ ಚೀಲದ ನೆಪಹೇಳಿ ಖರೀದಿ ಸ್ಥಗಿತಗೊಳಿಸಿರುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ಕಳೆದ ಮೂರು ದಿನಗಳಿಂದ ರೈತರು ತಮ್ಮ ತೊಗರಿ ಮಾರಾಟ ಮಾಡಲು ಕೇಂದ್ರದ ಬಳಿ ಹಗಲು ರಾತ್ರಿ ಮಲಗಿದ್ದಾರೆ. ಈ ಕುರಿತು ಸರಕಾರ ಮತ್ತು ಕೇಂದ್ರದ ಅಧಿಕಾರಿಗಳು ನಿರ್ಲಕ್ಷé ವಹಿಸಿರುವುದು ನಾಚಿಕೆಗೇಡು ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಗ್ರೇಡ್‌ 2 ತಹಶೀಲ್ದಾರ್‌ ಸೋಫಿಯಾ ಸುಲ್ತಾನ ಭೇಟಿ ನೀಡಿ ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ವರದಿ
ನೀಡಿ ನೋಂದಣಿ ದಿನಾಂಕ ವಿಸ್ತರಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ
ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ಪ್ರಮುಖರಾದ ಹಣಮಂತ್ರಾಯ ಮಡಿವಾಳರ್‌, ದೇವಿಂದ್ರಪ್ಪ ಪತ್ತಾರ, ಶಿವಪ್ಪ ಪಾಟೀಲ್‌, ದೇವಿಂದ್ರ ಪಾಟೀಲ್‌, ಹಣಮಗೌಡ ಪಾಟೀಲ್‌, ಮಾನಪ್ಪ ಹರಿಜನ್‌, ಯಂಕಪ್ಪ ದಾಸರ, ಚಂದ್ರು ಠಾಣಾಗುಂದಿ, ಈರಪ್ಪ, ಸಂಗಮೇಶ ಹೈಯಾಳ, ಬಸ್ಸಣ್ಣ ರಂಗಂಪೇಟ, ಶ್ರೀನಿವಾಸ ದೇವಾಪುರ, ಸಿದ್ರಾಮಪ್ಪ, ಅಮರನಾಥ ಹೈಯಾಳ, ಮಲ್ಲಪ್ಪ ದಿವಳಗುಡ್ಡ, ರಂಗನಾಥ ಗುತ್ತೆದಾರ, ರಮೇಶ, ಹಣಮಂತ್ರಾಯ, ರಾಘವೇಂದ್ರ, ವೆಂಕೋಬ, ವೆಂಕಟೇಶ ಕುಪಗಲ್‌ ಇದ್ದರು’

ಆನ್‌ಲೈನ್‌ ಬೆಳೆ ದೃಢೀಕರಣ ಬೇಡ: ಆನ್‌ಲೈನ್‌ ಬೆಳೆ ದೃಢೀಕರಣ ಕೈ ಬಿಡಲಾಗಿದೆ. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಗ್ರಾಮ ಲೆಕ್ಕಿಗರಿಂದ ಈ ಹಿಂದಿನಂತೆ ಕೈ ಬರಹದ ಬೆಳೆ ದೃಢೀಕರಣ ತಂದು ಖರೀದಿ ಕೇಂದ್ರದಲ್ಲಿ
ನೋಂದಾಯಿಸಿಕೊಳ್ಳಬೇಕು. 
 ಸೋಫಿಯಾ ಸುಲ್ತಾನ, ಗ್ರೇಡ್‌ 2 ತಹಶೀಲ್ದಾರ್‌ 

ರೈತರು ಆತಂಕ ಪಡಬೇಕಾಗಿಲ್ಲ
ಖಾಲಿ ಚೀಲಗಳ ಕೊರತೆಯಿಂದ ಕೇಂದ್ರಗಳಲ್ಲಿ ವ್ಯತೆಯಾಗಿತ್ತು. ಇಗಾಗಲೇ ಎಲ್ಲಾ ಕೇಂದ್ರಗಳಿಗೆ ಸಾಕಾಗುವಷ್ಟು ಖಾಲಿ ಚೀಲಗಳನ್ನು ಪೂರೈಸಲಾಗಿದೆ. ರೈತರು ಆತಂಕ ಪಡಬೇಕಾಗಿಲ್ಲ. ನೋಂದಣಿಗೆ ಜ. 14 ಕೊನೆ ದಿನವಾಗಿದೆ. ಕೈ ಬರಹದ ದೃಢೀಕರಣ ಪತ್ರ ಸ್ವೀಕರಿಸಿ ನೋಂದಣಿ ಮಾಡಿಕೊಳ್ಳುಲು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿದೆ.  
ರಂಗನಾತ ದೇಸಾಯಿ, ಮಾರುಕಟ್ಟೆ ಸಹಾಯಕ ನಿರ್ದೇಶಕ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.