
ಅಧಿಕ ಮತಗಳಿಂದ ಕಾಂಗ್ರೆಸ್ ಗೆಲ್ಲಿಸಿ: ಬಯ್ನಾಪುರ
Team Udayavani, Dec 7, 2021, 5:01 PM IST

ನಾಗರಹಾಳ: ರಾಯಚೂರು- ಕೊಪ್ಪಳ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ನಾಪುರ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಶಾಸಕ ಅಮರೇಗೌಡ ಬಯ್ನಾಪುರ ಮನವಿ ಮಾಡಿದರು.
ಸಮೀಪದ ಯರದಿಹಾಳ ಗ್ರಾಮದ ಖಾಸಗಿ ತೋಟವೊಂದರಲ್ಲಿ ನಡೆದ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರು ಭಾರಿ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಸಹೋದರ ಮಗನಾದ ಶರಣಗೌಡ ಬಯ್ನಾಪುರ ಅವರನ್ನು ಗೆಲ್ಲಿಸಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಹೂಲಗೇರಿ, ಕಾಂಗ್ರೆಸ್ ಮುಖಂಡರಾದ ಚನ್ನವೀರಪ್ಪ ಪಾಗಾದ, ಹನಮಂತಪ್ಪ ಕಂದಗಲ್, ರುದ್ರಗೌಡ ತುರಡಗಿ, ಶರಣಬಸವ ಮೇಟಿ, ಆದೇಶ ನಾಯಕ, ಗ್ಯಾನನಗೌಡ, ರಘುವೀರ, ರಮೇಶಕುಮಾರ ಗುತ್ತೇದಾರ ಸೇರಿದಂತೆ ಸುತ್ತಲಿನ ಆಮದಿಹಾಳ, ಬನ್ನಿಗೋಳ, ಉಪ್ಪಾರನಂದಿಹಾಳ, ನಾಗರಹಾಳ, ಹಲಕಾವಟಗಿ ಗ್ರಾಮಗಳ ಕೆಲ ಗ್ರಾಪಂ ಸದಸ್ಯರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri; ಟೆಂಡರ್ ವಿಳಂಬ ಸಲ್ಲದು: ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಎಚ್ಚರಿಕೆ

Yadgir ; 150 ಕೆಜಿ ಶ್ರೀಗಂಧ ಸಹಿತ ಆರೋಪಿ ಬಂಧನ: ಓರ್ವ ಆರೋಪಿ ಪರಾರಿ

ISIS ಉಗ್ರನಿಗೆ ಯಾದಗಿರಿ ನಂಟು..? ಉಗ್ರ ಸಂಘಟನೆಯೊಂದಿಗೆ ಶಹಾಪುರ ಯುವಕನ ಸಂಪರ್ಕ

Brutal; 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಂದ ಮಲತಾಯಿ!

Chandrayaan 3 :ನವಜಾತ ಶಿಶುಗಳಿಗೆ ವಿಕ್ರಂ, ಪ್ರಗ್ಯಾನ್ ಹೆಸರು!