ಮಾದರಿ-ಪಿಂಕ್‌ ಮತಗಟ್ಟೆಗೆ ಡಿಸಿ ಮಂಜುನಾಥ ಭೇಟಿ


Team Udayavani, May 13, 2018, 4:23 PM IST

yad-1.jpg

ಯಾದಗಿರಿ: ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ ಮಾದರಿ ಮತದಾನ ಕೇಂದ್ರ ಮತ್ತು ಸಖೀ (ಪಿಂಕ್‌) ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಂಜುನಾಥ ಜೆ. ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ನಗರದ ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್‌ ಕಚೇರಿ ಕಟ್ಟಡ (ಬಲಭಾಗ)ಸ್ಥಾಪಿಸಲಾಗಿದ್ದ ಮಾದರಿ ಮತಗಟ್ಟೆಯಲ್ಲಿ ಮತದಾರರ ಸಹಾಯ ಕೇಂದ್ರ, ಪ್ರಥಮ ಚಿಕಿತ್ಸಾ ಕೇಂದ್ರ, ಮತದಾರರ ನಿರೀಕ್ಷಣಾ ಕೊಠಡಿ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಪರಿಶೀಲಿಸಿದರು.

ಸುರಪುರ ಕ್ಷೇತ್ರದ ತಿಮ್ಮಾಪುರ ಬೀಚ್‌ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ (ಮಧ್ಯ ಭಾಗ), ಶಹಾಪುರದ ಖವಾಸಪುರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ (ಎಡಭಾಗ) ಹಾಗೂ ಗುರುಮಠಕಲ್‌ನ ಉಪ್ಪರಗಡ್ಡ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ (ಬಲಭಾಗ) ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4 ಮಾದರಿ ಮತದಾನ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು.

ನಂತರ ಯಾದಗಿರಿ ನಗರದ ಕೋಲಿವಾಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಬಲಭಾಗ) ಹಾಗೂ ಮಾರ್ಕೆಟ್‌ ರಸ್ತೆಯ ಮುಸ್ಲಿಂಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಬಲಭಾಗ) ಸ್ಥಾಪಿಸಲಾಗಿದ್ದ ಸಖೀ (ಪಿಂಕ್‌) ಮತಗಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲಿನ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಅವರಿಂದ ಒಟ್ಟು ಮತದಾರರ ಸಂಖ್ಯೆ ಹಾಗೂ ಶೇಕಡವಾರು ಮತದಾನದ ಮಾಹಿತಿ ಪಡೆದರು. ಪಿಂಕ್‌ ಬೂತ್‌ನ ಮಹಿಳಾ ಅಧಿಕಾರಿಗಳಾದ ಪಿಆರ್‌ಒ, ಎಪಿಆರ್‌ಒ, ಪೋಲಿಂಗ್‌ ಅಧಿಕಾರಿಗಳು ಸೇರಿದಂತೆ ಮಹಿಳಾ ಮತದಾರರು ಪಿಂಕ್‌ ಮತಗಟ್ಟೆ ಸ್ಥಾಪನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡರಂತೆ ಮಹಿಳಾ ಮತದಾರರು ಹೆಚ್ಚಾಗಿರುವ 8 ಕಡೆಗಳಲ್ಲಿ ಪಿಂಕ್‌ ಬೂತ್‌ ಸ್ಥಾಪಿಸಲಾಗಿದೆ. ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸಲು ಹಾಗೂ ಯಾವುದೇ ಭಯ, ಒತ್ತಡವಿಲ್ಲದೇ ಮುಕ್ತ ಮತದಾನಕ್ಕೆ ಅವಕಾಶ ನೀಡಲು ಚುನಾವಣಾ ಆಯೋಗ ಪಿಂಕ್‌ ಬೂತ್‌ ಸ್ಥಾಪಿಸಿದೆ.

ಈ ಮತಕೇಂದ್ರದ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮಹಿಳೆಯರೇ ಇದ್ದಾರೆ ಎಂದು ಅವರು ತಿಳಿಸಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್‌ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ ಹಾಗೂ ಅಧಿ ಕಾರಿಗಳು ಇದ್ದರು. 

ಚುನಾವಣಾ ವೀಕ್ಷಕರಿಂದ ಪರಿಶೀಲನೆ: ಸುರಪುರ ಮತ್ತು ಶಹಾಪುರ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಬೀರೇಂದ್ರ ಭೂಷಣ್‌, ಯಾದಗಿರಿ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಡಾ| ಶಕೀಲ್‌ ಪಿ. ಅಹ್ಮದ್‌, ಗುರುಮಠಕಲ್‌ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಕೆ.ಶಾರದಾ ದೇವಿ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪೊಲೀಸ್‌ ವೀಕ್ಷಕ ಎಚ್‌. ಹಿಮೇಂದ್ರನಾಥ್‌ ಅವರೂ ಜಿಲ್ಲೆಯ ಹಲವು ಮತಗಟ್ಟೆಗಳಿಗೆ ತೆರಳಿ ಪೊಲೀಸ್‌ ಬಂದೋಬಸ್ತ್ ವೀಕ್ಷಿಸಿದರು. 

ಟಾಪ್ ನ್ಯೂಸ್

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ : ಜಿಲ್ಲಾಧಿಕಾರಿ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ :ಉಡುಪಿ ಜಿಲ್ಲಾಧಿಕಾರಿ

ಕುಣಿಗಲ್: ಕೋಡಿ ಹಳ್ಳದ ನೀರಿನಲ್ಲಿ ಆಟವಾಡುತ್ತಲೇ ಕೊಚ್ಚಿಹೋದ ನಾಲ್ವರು

ಕುಣಿಗಲ್: ಕೋಡಿ ಹಳ್ಳದ ನೀರಿನಲ್ಲಿ ಆಟವಾಡುತ್ತಲೇ ಕೊಚ್ಚಿಹೋದ ನಾಲ್ವರು

cm

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಮುಖ್ಯಮಂತ್ರಿ

ಗುಡಿಬಂಡೆ: ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

ಗುಡಿಬಂಡೆ: ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

32kanakadas

ಕನಕದಾಸರ ಪುತ್ಥಳಿ ಲೋಕಾರ್ಪಣೆ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

26kasapa

ನೂತನ ಕಸಾಪ ಅಧ್ಯಕ್ಷರಿಗೆ ಸಚಿವ ಚವ್ಹಾಣ ಸನ್ಮಾನ

1-ssa

ಉಪ್ಪಿಟ್ಟಿನಲ್ಲಿ ಹಾವಿನ ಮರಿ! :50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸೇವಾ ಸಂಘ ಅಸ್ತಿತ್ವಕ್ಕೆ

ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸೇವಾ ಸಂಘ ಅಸ್ತಿತ್ವಕ್ಕೆ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ : ಜಿಲ್ಲಾಧಿಕಾರಿ

ಕೋವಿಡ್ ನ ಹೊಸ ರೂಪಾಂತರಿ ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ :ಉಡುಪಿ ಜಿಲ್ಲಾಧಿಕಾರಿ

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.