Udayavni Special

ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಬನ್ನಿ

ಹತ್ತಿ ಬೆಳೆ ದಲ್ಲಾಳಿಗಳ ಪಾಲಾಗುತ್ತಿದ್ದರೂ ಆರಂಭವಾಗದ ಖರೀದಿ ಕೇಂದ್ರ

Team Udayavani, Nov 8, 2020, 6:48 PM IST

ಸಂಕಷ್ಟ ಕಾಲದಲ್ಲಿ  ರೈತರ ನೆರವಿಗೆ ಬನ್ನಿ

ಯಾದಗಿರಿ: ಜಿಲ್ಲೆಯ ತೀವ್ರ ನೆರೆ ಮತ್ತು ಪ್ರವಾಹದಿಂದ ತತ್ತರಿಸಿರುವ ರೈತಾಪಿ ವರ್ಗಅಲ್ಪಸ್ಪಲ್ಪ ಕೈಗೆ ಬಂದ ಹತ್ತಿ ಬೆಳೆಯನ್ನು ಮಾರಾಟ ಮಾಡಲು ಮುಂದಾಗಿದ್ದು,ಈವರೆಗೆ ಹತ್ತಿ ಖರೀದಿ ಕೇಂದ್ರಗಳು ಆರಂಭಗೊಳ್ಳದಿರುವುದು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1.52 ಲಕ್ಷ ಹೆಕ್ಟೇರ್‌ ಹತ್ತಿ ಬಿತ್ತನೆಯಾಗಿದ್ದು, ಪ್ರತಿ ಹೆಕ್ಟೇರ್‌ಗೆ ಹತ್ತಿ ಇಳುವರಿ 6ರಿಂದ 7 ಕ್ವಿಂಟಲ್‌ ಬರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಯಾದಗಿರಿ, ಶಹಾಪುರ ಹಾಗೂ ವಡಗೇರಾ ತಾಲೂಕು ವ್ಯಾಪ್ತಿಯಲ್ಲಿ ಹತ್ತಿ ಕಟಾವು ಕಾರ್ಯ ಆರಂಭಗೊಂಡಿದೆ. ಜಿಲ್ಲಾಡಳಿತ ಕಳೆದ ವಾರವಷ್ಟೇ ಹತ್ತಿ ಖರೀದಿ ಕೇಂದ್ರ ಆರಂಭಕ್ಕೆ ಸಭೆ ನಡೆಸಿ ತಯಾರಿ ಮಾಡಿಕೊಳ್ಳುತ್ತಿದೆ ಹೊರತು ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರು ತಮ್ಮ ಬೆಳೆಯನ್ನು ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ತೆರೆದಿರುವ ಅನಧಿಕೃತ ಮಾರಾಟಗಾರರಿಗೆ ಅನಿವಾರ್ಯವಾಗಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದ ಬೆಂಬಲ ಬೆಲೆಗಿಂತ ಕಡಿಮೆ ಮೊತ್ತದಲ್ಲಿ ರೈತರಿಂದ ಬೇಕಾಬಿಟ್ಟಿ 4500 ಸಾವಿರದಿಂದ 4700 ರೂಪಾಯಿಯಂತೆ ದಲ್ಲಾಳಿಗಳು ಖರೀದಿಸುತ್ತಿದ್ದು, ಅದರಲ್ಲಿಯೂ ಕ್ವಿಂಟಲ್‌ಗೆ ಕೆಲ ಕೆಜಿಯಷ್ಟು ಹಮಾಲರು ಇತರರು ತೆಗೆಯುವುದುಇನ್ನಷ್ಟು ನಷ್ಟವನ್ನುಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 5 ಹತ್ತಿ ಖರೀದಿ ಕೇಂದ್ರಗಳನ್ನು ತೆರೆದು 4783 ರೈತರಿಂದ 242235 ಲಕ್ಷ ಕ್ವಿಂಟಲ್‌ ಹತ್ತಿಯನ್ನು ಪ್ರತಿ ಕ್ವಿಂಟಲ್‌ಗೆ 5550 ರೂ. ರಂತೆ ಖರೀದಿಸಲಾಗಿತ್ತು. ರೈತರು ಹತ್ತಿ ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದರೂ ಇನ್ನೂ ಖರೀದಿ ಕೇಂದ್ರಗಳು ಆರಂಭವಾಗದಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಜಿಲ್ಲಾಡಳಿತ ತ್ವರಿತವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಕ್ರಮವಹಿಸಬೇಕು ಎಂದು ರೈತ ಮುಖಂಡ ಚನ್ನಾರೆಡ್ಡಿ ಪಾಟೀಲ್‌ ಆಗ್ರಹಿಸಿದ್ದಾರೆ.

ಖರೀದಿ ಆರಂಭದ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖರೀದಿಗೆ ಆದೇಶ ಬಂದ ನಂತರ ಹತ್ತಿ ಖರೀದಿ ಆರಂಭಿಸಲಾಗುವುದು.-ಭೀಮರಾಯ ಕಲ್ಲೂರ,ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ

ಜಿಲ್ಲೆಯಲ್ಲಿ ಪ್ರವಾಹದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ರೈತರಿಗೆ ಸಮರ್ಪಕ ಬೆಲೆ ದೊರೆಯಲು ತ್ವರಿತಗತಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಿತ್ತು. ಈಗಾಗಲೇ ರೈತರು ಹೊರಗಡೆ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಬೆಲೆಯೂ ಸಿಗದೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. -ಬಸರೆಡ್ಡಿಗೌಡ ಮಾಲಿ ಪಾಟೀಲ್‌ ಅನಪುರ, ಜಿಪಂ ಸದಸ್ಯ

 

-ಅನೀಲ ಬಸೂದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

siddaramiah

ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ: ಸಿದ್ದರಾಮಯ್ಯ ಆಕ್ರೋಶ

ಚಿಕ್ಕಮಗಳೂರು : ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಚಿಕ್ಕಮಗಳೂರು : ಬಾಬಬುಡನ್ ಗಿರಿಯಲ್ಲಿ ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ : ಸತೀಶ್ ಜಾರಕಿಹೊಳಿ

ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ : ಸತೀಶ್ ಜಾರಕಿಹೊಳಿ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರು ಪರಾರಿ

ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರ ತಂಡ ಪರಾರಿ

E-SIM-CARD

ಇ-ಸಿಮ್ ಕಾರ್ಡ್: ಏನಿದು ? ಇದರ ಬಳಕೆ ಮತ್ತು ವಿಶೇಷತೆಗಳ ಮಾಹಿತಿ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YG-TDY-1

ಪ್ರವಾಹಕ್ಕೆ 77 ಸಾವಿರ ಹೆಕ್ಟೇರ್‌ ಬೆಳೆಹಾನಿ

ಬೆಳೆ ಹಾನಿ ರೈತರ ವಿವರ ದಾಖಲಿಸಲು ವಾರದ ಗಡುವು

ಬೆಳೆ ಹಾನಿ ರೈತರ ವಿವರ ದಾಖಲಿಸಲು ವಾರದ ಗಡುವು

ಸಮಾಜಮುಖೀ ಕಾರ್ಯ ಮುಂದುವರಿಯಲಿ

ಸಮಾಜಮುಖೀ ಕಾರ್ಯ ಮುಂದುವರಿಯಲಿ

ಆಗ್ರೋ ಕೇಂದ್ರ ಮೇಲೆ ಕೃಷಿ ಅಧಿಕಾರಿಗಳ ದಾಳಿ

ಆಗ್ರೋ ಕೇಂದ್ರ ಮೇಲೆ ಕೃಷಿ ಅಧಿಕಾರಿಗಳ ದಾಳಿ

ಹತ್ತಿ ಖರೀದಿ ಕೇಂದ್ರ ತ್ವರಿತ ಆರಂಭ

ಹತ್ತಿ ಖರೀದಿ ಕೇಂದ್ರ ತ್ವರಿತ ಆರಂಭ

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

siddaramiah

ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ: ಸಿದ್ದರಾಮಯ್ಯ ಆಕ್ರೋಶ

ಕೋವಿಡ್‌ ಪರೀಕ್ಷಾ ವರದಿ ಸಕಾಲಕ್ಕೆ ನೀಡಿ

ಕೋವಿಡ್‌ ಪರೀಕ್ಷಾ ವರದಿ ಸಕಾಲಕ್ಕೆ ನೀಡಿ

ಪ್ರಚಾರವಿಲ್ಲದೇ ತಾಲೂಕಿನ ಕೆರೆಗಳ ಹರಾಜು: ಆಕ್ರೋಶ

ಪ್ರಚಾರವಿಲ್ಲದೇ ತಾಲೂಕಿನ ಕೆರೆಗಳ ಹರಾಜು: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.