Udayavni Special

ಅಂಬಾದೇವಿ ಜಾತ್ರೆ ರದ್ದಾದರೂ ಮುಕ್ತ ಪ್ರವೇಶ

ದರ್ಶನ ಪಡೆದ ಭಕ್ತರು ಎಂದಿನಂತೆ ಖರೀದಿಯತ್ತ ಮುಖ ಮಾಡಿದರು.

Team Udayavani, Jan 29, 2021, 6:40 PM IST

ಅಂಬಾದೇವಿ ಜಾತ್ರೆ ರದ್ದಾದರೂ ಮುಕ್ತ ಪ್ರವೇಶ

ಸಿಂಧನೂರು: ನಿಷೇಧದ ನಡುವೆಯೂ ಸಿದ್ಧಪರ್ವತದ ಐತಿಹಾಸಿಕ ಅಂಬಾದೇವಿ ಜಾತ್ರೆಗೆ ಭಕ್ತ ಸಮೂಹ ಹರಿದು ಬಂದಿದ್ದರಿಂದ ತಡೆಯುವುದು ಆಡಳಿತಕ್ಕೆ ಸವಾಲಾಯಿತು. ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ಗುರುವಾರ ಬೆಳಗ್ಗೆಯೇ ರಥೋತ್ಸವ ನಡೆಯಿತು. ಕೋವಿಡ್‌ ಹಿನ್ನೆಲೆಯಲ್ಲಿ ಜಾತ್ರೆಗೆ ಭಕ್ತರು ಆಗಮಿಸದಂತೆ ತಾಲೂಕಾಡಳಿತ ಮನವಿ ಮಾಡಿದರೂ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ರಥೋತ್ಸವದ ದಿನ ಬೆಳಗ್ಗೆಯಿಂದಲೇ ಅಂಬಾದೇವಿ ದರ್ಶನಕ್ಕೆ ಸಾಲುಗಟ್ಟಿ ನಿಂತರು. ಪೊಲೀಸ್‌ ಬಂದೋಬಸ್ತ್ ನಡುವೆ ಸರದಿಯಲ್ಲಿ ದೇವಸ್ಥಾನದೊಳಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ನಿಷೇಧದ ಹಿನ್ನೆಲೆಯಲ್ಲಿ ಕಾಯಿ ಸಮರ್ಪಿಸುವುದನ್ನು ತಡೆಯಲಾಗಿತ್ತು.

ಎಲ್ಲವೂ ಸುಸೂತ್ರ: ದೇವಸ್ಥಾನ ಸುತ್ತಲಿನ 1 ಕಿ.ಮೀ ವ್ಯಾಪ್ತಿಯ ಎಲ್ಲೆಡೆಯೂ ಭಕ್ತರ ದಟ್ಟಣೆ ಕಾಣಿಸಿತು. ಜಾತ್ರೆಯಲ್ಲಿ ಎಲ್ಲ ರೀತಿಯ ಅಂಗಡಿ ಹಾಕಲಾಗಿತ್ತು. ದೇವಿ
ದರ್ಶನ ಪಡೆದ ಭಕ್ತರು ಎಂದಿನಂತೆ ಖರೀದಿಯತ್ತ ಮುಖ ಮಾಡಿದರು. ಬುಧವಾರವೇ ಟ್ರಾಕ್ಟರ್‌, ಕ್ರೂಷರ್‌, ಕಾರುಗಳಲ್ಲಿ ಆಗಮಿಸಿದ್ದ ಭಕ್ತರು ದೇವಸ್ಥಾನ
ಹೊರಭಾಗದಲ್ಲಿ ಟೆಂಟ್‌ ಹೂಡಿದ್ದರು. ಬೆಳ್ಳಂಬೆಳಗ್ಗೆ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಬೆಳಗ್ಗೆ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ, ಮಧ್ಯಾಹ್ನದ ಬಳಿಕ ಜಾತ್ರೆ ಮಾಡಿದರು.

ಪ್ರವೇಶ ಭಾಗದಲ್ಲಿ ತಡೆ: ದೇವಸ್ಥಾನ ಪ್ರವೇಶಿಸುವ ಮಾರ್ಗದಲ್ಲಿ ಬ್ಯಾರಿಕೇಡ್‌ ಹಾಕಿ ಭಾರಿ ವಾಹನಗಳ ಪ್ರವೇಶ ತಡೆಯಲಾಯಿತು. ದ್ವಿಚಕ್ರ ವಾಹನ, ಕಾರು, ಟ್ರಾಕ್ಟರ್‌, ಕ್ರೂಷರ್‌ ಸೇರಿದಂತೆ ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಾರಿಯೂ ಕುರಿ ಬಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿತ್ತು. ಈ ಸಲ ಸರಳವಾಗಿಯೇ  ಭಕ್ತರು ದೇವಿ ಜಾತ್ರೆ ಆಚರಿಸಿದರು. ಅಕ್ಕಪಕ್ಕದ ತಾಲೂಕು, ಜಿಲ್ಲೆ ಸೇರಿದಂತೆ ತಾಲೂಕಿನ ನಾನಾ ಮೂಲೆಯಿಂದ ಭಕ್ತರು ಆಗಮಿಸಿದ್ದರು. ವಾರದ ಕಾಲ ನಡೆಯುವ ಜಾತ್ರೆಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ಮುನ್ಸೂಚನೆಯಿದೆ.

ಟಾಪ್ ನ್ಯೂಸ್

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

30ಕ್ಕೆ ಗಡಿ ಹಳ್ಳಿ ಹಬ್ಬ, ಸಂಗೀತ ಸಂಜೆ ಕಾರ್ಯಕ್ರಮ

yadagiri news

ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ

26

ಪ್ರಶಸ್ತಿಯಿಂದ ಸಾಧಕನ ಜವಾಬ್ದಾರಿ ವೃದ್ದಿ

27

ದೇವಿಕೇರಾದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು

yadagiri news

ಮಧ್ಯವರ್ತಿಗಳಿಂದ ಮೋಸ ಹೋಗದಿರಿ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.