ವರುಣನ ಅರ್ಭಟ: ಜನಜೀವನ ಅಸ್ತವ್ಯಸ್ತ


Team Udayavani, Oct 13, 2020, 5:06 PM IST

YG-TDY-1

ಸುರಪುರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಣಕಿಹಾಳ ಹತ್ತಿರದ ಸುಡಗಾಡು ಸಿದ್ದರ ಕಾಲೋನಿಗೆ ಮಳೆ ನೀರು ನುಗ್ಗಿದ್ದು ಸುಮಾರು 50 ರಿಂದ 60 ಮನೆಗಳು ಜಲಾವೃತವಾಗಿವೆ. ತಾಲೂಕಿನ ಕೆಲವೆಡೆ ಸಣ್ಣಪುಟ್ಟ ಸೇತುವೆಗಳು ಕೊಚ್ಚಿಹೋಗಿದ್ದು, ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ವಣಕಿಹಾಳ ಹತ್ತಿರದ ಸುಡಗಾಡು ಸಿದ್ದರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದ್ದು, ದವಸಧಾನ್ಯ, ಗೃಹ ಬಳಕೆ ವಸ್ತುಗಳು ನೀರು ಪಾಲಾಗಿವೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲಿನ ಸುಮಾರು 200 ಜನರು ಸಮೀಪದ ವಣಕಿಹಾಳ ಗ್ರಾಮದ ಗುಡಿ ಗುಂಡಾರ, ಸಮುದಾಯ ಭವನ ಹತ್ತಿರದ ಎಪಿಎಂಸಿ ಮಾರುಕಟ್ಟೆ ಗೋದಾಮು, ಡಾ| ಬಾಬಾ ಸಾಹೇಬರ ಅಂಬೇಡ್ಕರ್‌ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಇತರೆಡೆ ಆಶ್ರಯ ಪಡೆದಿದ್ದಾರೆ. ಈ ಹಿಂದೆ ಸರಕಾರ ಕೆರೆಯಲ್ಲಿಯೇ ಸುಡುಗಾಡ ಸಿದ್ದರಿಗಾಗಿ ಆಶ್ರಯ ಯೋಜನೆಯಡಿ 50 ರಿಂದ 60 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸಣ್ಣಮಳೆ ಬಂದರೆ ಸಾಕು ನೀರು ಸಂಗ್ರಹವಾಗಿ ಮನೆಗಳಿಗೆ ನೀರು ನುಗ್ಗುತ್ತದೆ. ಮಳೆಗಾಲದಲ್ಲಿ ತಾಲೂಕು ಆಡಳಿತ ಈ ಸಂದರ್ಭದಲ್ಲಿ ಒಂದಷ್ಟು ನೆರವು ನೀಡಿ ಕೈ ತೊಳೆದುಕೊಂಡು ಮರೆತು ಬಿಡುತ್ತಿದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವ ಗೋಜಿಗೆ ಹೋಗಿಲ್ಲ ಎಂದು ನಿವಾಸಿ ಗೋಪಾಲ ರಾಮಕೊಂಡಡಿ ಈರಪ್ಪ, ಮರೆಪ್ಪ ಸೇರಿದಂತೆ ಅನೇಕರು ದೂರಿದ್ದಾರೆ.

ಸಂಪರ್ಕ ಕಡಿತ: ಈ ಹಿಂದೆ ಕಿತ್ತುಹೋಗಿದ್ದ ಚಿಕನ್ನಳ್ಳಿ ಗ್ರಾಮದ ಸೇತುವೆಗೆ ಪೈಪ್‌, ಮರಂ ಹಾಕಿ ತಾತ್ಕಾಲಿಕ ದುರಸ್ತಿಗೊಳಿಸಲಾಗಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೇತುವೆ ಪುನಃ ಕಿತ್ತು ಹೋಗಿ ಸಂಪರ್ಕ ಕಡಿತಗೊಂಡಿದೆ. ರತ್ತಾಳ ಹತ್ತಿರದ ರಂಗಂಪೇಟೆ ಹಳ್ಳದ ಸೇತುವೆ ಮತ್ತು 3 ಕಡೆ ರಸ್ತೆ ಕಿತ್ತು ಹೋಗಿದ್ದು, ಗ್ರಾಮದಸಂಪರ್ಕ ಕಡಿತವಾಗಿದೆ. ಗ್ರಾಮಸ್ಥರು ದೇವಿಕೇರಿ ಸುತ್ತುವರಿದು ನಗರಕ್ಕೆ ಬರುತ್ತಿದ್ದಾರೆಸಿದ್ದಾಪುರ ಹತ್ತಿರದ ಸೇತುವೆ ತುಂಬಿ ಹರಿಯುತ್ತಿದ್ದು ಶೆಟ್ಟಿಕೇರಾ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ವಣಕಿಹಾಳ ಹತ್ತಿರದ ಸೇತುವೆ ಮೈದುಂಬಿ ಹರಿಯುತ್ತಿದ್ದು ಹೇಮನೂರ, ಹಾಲಗೇರಾ, ಶಖಾಪುರ ಗ್ರಾಮಗಳ Óಂಪರ್ಕ ಸ್ಥಗಿತವಾಗಿದೆ.

ದೇವಿಕೇರಾ ಗ್ರಾಮದ ಸೇತುವೆ ಅಪಾಯ ಮಟ್ಟ ತಲುಪಿದೆ. ನೀರಿನ ರಭಸಕ್ಕೆ ಸೇತುವೆ ಕಾಲಂಗಳು ಬಾಗಿವೆ. ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ರಸ್ತೆ ಸಂಚಾರ ಬಂದ್‌ ಮಾಡಲಾಗಿದ್ದು, ಗ್ರಾಮಸ್ಥರು ಕೃಷ್ಣಾಪುರ ಮಾರ್ಗದಿಂದ ನಗರಕ್ಕೆ ಬರುತ್ತಿದ್ದಾರೆ. ರಂಗಂಪೇಟ-ಸುರಪುರ ಮುಖ್ಯ ರಸ್ತೆ ಪಾದಚಾರಿ ಮತ್ತು ದ್ವಿಚಕ್ರ ಸವಾರರಿಗೆ ಭಯದ ವಾತಾವರಣ ನಿರ್ಮಾಣ ಮಾಡಿದೆ. ರಸ್ತೆ ಪಕ್ಕದ ಗುಡ್ಡದಲ್ಲಿರುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಜಾರಿ ಬೀಳುವ ಸ್ಥಿತಿಯಲಿದ್ದು, ಜನರಲ್ಲಿ ಭಯ ಮೂಡಿಸಿದೆ. ಸಣ್ಣ ಸಣ್ಣ ಕಲ್ಲುಗಳು ರಸ್ತೆಗೆ ಹರಿದುಬಂದಿದ್ದು ದ್ವಿಚಕ್ರ ವಾಹನಗಳು ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯಂತಾದ ಶಾಲಾ ಆವರಣ: ರಂಗಂಪೇಟೆಯ ಕನ್ಯಾ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ಸಂಗ್ರಹಗೊಂಡಿರುವ ನೀರು ಹೊರ ಹೋಗಲು ಮಾರ್ಗವೇ ಇಲ್ಲ. ಹೀಗಾಗಿ ಶಾಲಾ ಆವರಣ ಕೆರಯಂತಾಗಿದೆ.

ಖಾಸ್ಗೇತೇಶ್ವರ ನೃತ್ಯಾಲಯಕ್ಕೆ ನುಗ್ಗಿದ ನೀರು: ನಗರದ ಬಡಿಗೇರ ಭಾವಿ ಹತ್ತಿರದ ಖಾಸ್ಗೇತೇಶ್ವರ ಸಂಗೀತ ಮತ್ತು ನೃತ್ಯಾಲಯ ಶಾಲೆಗೆ ರಸ್ತೆ ನೀರು ನುಗ್ಗಿದ್ದು ಪೇಟಿ, ತಬಲಾ, ಗಿಟಾರ್‌, ಏಕತಾರಿ ಸೇರಿದಂತೆ ಸಂಗೀತ ಪರಿಕರಗಳು ಹಾಳಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಅನಿಲಕುಮಾರ ತಿಳಿಸಿದ್ದಾರೆ.

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21police

ಡಿವೈಎಸ್ಪಿ ದೇವರಾಜ ಅಧಿಕಾರ ಸ್ವಿಕಾರ

20bus

ಬಸ್‌ ಸೌಲಭ್ಯ ಕಲ್ಪಿಸಲು ಕಕ ಸಾರಿಗೆ ನಿಗಮಕ್ಕೆ ಮನವಿ

19lack

ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಭರವಸೆ

18covid

ಲಸಿಕಾಕರಣದಲ್ಲಿ ಭಾರತ ಐತಿಹಾಸಿಕ ಸಾಧನೆ

15mahatoshree

ಅನುಭಾವದ ಸಾಹಿತ್ಯಕ್ಕೆ ಮನ್ನಣೆ: ಮಾತೋಶ್ರೀ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.