371(ಜೆ) ಕಲಂನಿಂದ ಹೈ.ಕ ಪ್ರಗತಿ


Team Udayavani, Mar 1, 2019, 9:39 AM IST

yad-2.jpg

ಶಹಾಪುರ: ಹಿಂದುಳಿದ ಪ್ರದೇಶವೆನಿಸಿಕೊಂಡು ಮೂಲ ಸೌಕರ್ಯಗಳಿಂದ ನರಳುತ್ತಿದ್ದ ಹೈದ್ರಾಬಾದ್‌ ಕರ್ನಾಟಕ ಭಾಗದ ರೈತರು, ವಿದ್ಯಾವಂತ ಯುವಕರು ಮತ್ತು ಜನ ಸಾಮಾನ್ಯರಿಗೆ 371 (ಜೆ) ಕಲಂ ಜಾರಿಯಿಂದ ಹೆಚ್ಚು ಅನುಕೂಲವಾಗಿದೆ. ಅಲ್ಲದೆ ಪ್ರಗತಿಯತ್ತ ಸಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ತಾಲೂಕಿನ ಗೋಗಿ(ಕೆ) ಗ್ರಾಮದ ಸರ್ಕಾರಿ ಪ.ಪೂ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ 2 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಪ್ರಗತಿಗೆ ಅನುಕೂಲ: 371 (ಜೆ) ಜಾರಿಯಿಂದ ನಮ್ಮ ಕ್ಷೇತ್ರಗಳಿಗೆ ಪ್ರತಿ ವರ್ಷ 1500 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ವ್ಯವಸ್ಥೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಇದರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅಲ್ಲದೆ ವಿವಿಧ ಕಾಮಗಾರಿ ಇತರೆ ಸರ್ಕಾರಿ ನೌಕರಿ ಪಡೆಯಲು ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ ಎಂದರು. 

ಶೇ.8 ಮೀಸಲಾತಿ ಅನುಷ್ಠಾನ: ಶೈಕ್ಷಣಿಕ ಹಾಗೂ ಇತರೆ ನೌಕರಿ ಆಯ್ಕೆಗಳಲ್ಲಿ ಶೇ.8 ಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಅವಳಿ ಗ್ರಾಮಗಳಲ್ಲಿ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ 75 ಲಕ್ಷ. ರೂ. ಮಂಜೂರಿಯಾಗಿದ್ದು, ಅಲ್ಲದೆ ನಬಾರ್ಡ್‌ ಅನುದಾನದಲ್ಲಿ ನಾಗನಟಗಿ ಗೋಗಿ ದಿಗ್ಗಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ 90 ಲಕ್ಷ ರೂ. ಒದಗಿಸಲಾಗಿದೆ. ಕಾಲೇಜು ಕಾಂಪೌಂಡ್‌ ನಿರ್ಮಾಣಕ್ಕೆ 3.85 ಲಕ್ಷ, ಆಲ್ದಾಳ-ಜಮಖಂಡಿ ರಸ್ತೆಗೆ 2 ಕೋಟಿ, ನಗನೂರ, ಚಂದಾಪುರ, ಗೌಡಗೇರಿ, ಚಾಮನಾಳ, ಕೆಂಭಾವಿ ಸೇರಿದಂತೆ ಕೊಡಮನಳ್ಳಿ, ಸಿಂಗನಳ್ಳಿ ಮದ್ರಿಕಿ, ಗೋಗಿ ಗ್ರಾಮಗಳ ನಡುವಣ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. 7 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಗೋಗಿ ದರ್ಗಾದ ಸೈಯ್ಯದ್‌ ಇಸ್ಮಾಯಿಲ್‌ ಹುಸೇನಿ ಆಸೀಫ್‌ ಬಾಬಾ ಸಜ್ಜಾದೆ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಿಯಾನಬೇಗಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಂದಪ್ಪ ತಾಯಮಗೋಳ್‌, ಮಾಣಿಕರಡ್ಡಿ ಶಿರಡ್ಡಿ, ಗುರುನಾಥರಡ್ಡಿ ಗುತ್ತೇದಾರ ಇತರರಿದ್ದರು.

2 ಕೋಟಿಗೂ ಅಧಿಕ ವೆಚ್ಚ ದ ಕಾಮಗಾರಿಗೆ ಅಡಿಗಲ್ಲು
2018-19ನೇ ಸಾಲಿನ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲೆ ಮರು ನಿರ್ಮಾಣ ಯೋಜನೆಯಡಿ 47.25 ಲಕ್ಷ ಕಾಮಗಾರಿ, ಎಸ್‌ಡಿಪಿ ಯೋಜನೆಯಡಿ ಕೊಳವೆಬಾವಿ ನೀರು ಸರಬರಾಜು, 30 ಲಕ್ಷ ವೆಚ್ಚದ ಕುಡಿವ ನೀರಿನ ಪೈಪ್‌ಲೈನ್‌ ಕಾಮಗಾರಿ. ಗೋಗಿ(ಕೆ) ಯಿಂದ ಬಾಣಿತಿಹಾಳ ರಸ್ತೆ ಸುಧಾರಣೆಗೆ 50 ಲಕ್ಷ, ಸುವರ್ಣ ಗ್ರಾಮ ಯೋಜನೆಯಡಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 50 ಲಕ್ಷ , ಎಚ್‌ಕೆಆರ್‌ಡಿಬಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆ 4 ಕೊಠಡಿಗಳ ಕಟ್ಟಡಕ್ಕೆ 57 ಲಕ್ಷ ರೂ. ಕಾಮಗಾರಿಗಳಿಗೆ ಒಟ್ಟು 2 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಾಯಿತು.

ಟಾಪ್ ನ್ಯೂಸ್

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ :ದ.ಕ. ಡಿಎಚ್‌ಒ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20indresh

ಶಹಾಪುರಕ್ಕೆ ನ್ಯಾಯಮೂರ್ತಿ ಇಂದ್ರೀಶ್‌ ಭೇಟಿ

32kanakadas

ಕನಕದಾಸರ ಪುತ್ಥಳಿ ಲೋಕಾರ್ಪಣೆ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಕರ್ನಾಟಕ ಸಂಗೀತಕ್ಕೆ ಕನಕ ಕೊಡುಗೆ ಅಪಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

ಮಾ.17ರವರೆಗೆ ನೀರು ಹರಿಸಲು ನಿರ್ಧಾರ

26kasapa

ನೂತನ ಕಸಾಪ ಅಧ್ಯಕ್ಷರಿಗೆ ಸಚಿವ ಚವ್ಹಾಣ ಸನ್ಮಾನ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ :ದ.ಕ. ಡಿಎಚ್‌ಒ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.