ಯಾದಗಿರಿ: 56 ಜನರಲ್ಲಿ ಸೋಂಕು ದೃಢ


Team Udayavani, Jul 27, 2020, 12:55 PM IST

ಯಾದಗಿರಿ: 56 ಜನರಲ್ಲಿ ಸೋಂಕು ದೃಢ

ಯಾದಗಿರಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ತಲುಪಿದೆ. ರವಿವಾರ ಮತ್ತೆ 56 ಜನರಿಗೆ ಸೋಂಕು ದೃಢವಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 1988ಕ್ಕೆ ಏರಿಕೆಯಾಗಿದೆ.

ಶನಿವಾರವಷ್ಟೇ ಗುರುಮಠಕಲ್‌ ಪುರಸಭೆಯ ನಾಲ್ವರು ಸಿಬ್ಬಂದಿಗೆ ವಕ್ಕರಿಸಿದ್ದ ಕೋವಿಡ್ ರವಿವಾರ ಮತ್ತೆ ನಾಲ್ವರು ಐಎಲ್‌ಐ ಲಕ್ಷಣವಿರುವ 55 ವರ್ಷದ ಪುರುಷ ಪಿ-96994, 58 ವರ್ಷದ ಪುರುಷ ಪಿ-97028, 57 ವರ್ಷದ ಪುರುಷ ಪಿ-97457 ಹಾಗೂ 54 ವರ್ಷದ ಪುರುಷ ಪಿ-97662ರಲ್ಲಿ ಸೋಂಕು ಪತ್ತೆಯಾಗಿದೆ.

ಸಂಪರ್ಕ ಪತ್ತೆಯಾಗದ ಯಾದಗಿರಿ ತಾಲೂಕಿನ ಕಡೇಚೂರ ಪ್ರಾಥಮಿಕ ಆರೋಗ್ಯ ಕೇಂದ್ರದ 33 ವರ್ಷದ ಪುರುಷ ಪಿ-102241 ಸೋಂಕಿಗೆ ತುತ್ತಾಗಿದ್ದಾನೆ. ಜಿಲ್ಲೆಯಲ್ಲಿ ಒಟ್ಟು 12 ಐಎಲ್‌ಐ ಲಕ್ಷಣದ ಸೋಂಕಿತರು ಪತ್ತೆಯಾಗಿದ್ದಾರೆ. ಒಬ್ಬರು ಮಹಾರಾಷ್ಟ್ರದ ನಂಟು ಹೊಂದಿದ್ದರೆ ಉಳಿದವರ ಸೋಂಕಿತ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಯಾದಗಿರಿ ನಗರ ಮತ್ತು ಗ್ರಾಮೀಣ ಗುರುಮಠಕಲ್‌, ಶಹಾಪುರ ಹಾಗೂ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡಿದ್ದು 38 ಪುರುಷರು, 18 ಮಹಿಳೆಯರು ಕೊರೊನಾಗೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆ ಶನಿವಾರ 675 ಜನರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 600 ಜನರ ವರದಿ ನೆಗೆಟಿವ್‌ ಬಂದಿವೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,762 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,481 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 156 ಕಂಟೈನ್ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 178 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 63, ಸುರಪುರ 58 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 108 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ತಿಳಿಸಿದ್ದಾರೆ.

ರೋಗಿಗಳೊಂದಿಗೆ ಡಿಸಿ ಸಮಾಲೋಚನೆ : ಜಿಲ್ಲೆಯ ಬಂದಳ್ಳಿಯಲ್ಲಿರುವ ಏಕಲವ್ಯ ಕೋವಿಡ್‌ ಕೇರ್‌ ಆಸ್ಪತ್ರೆಗೆ ಡಿಸಿ ಎಂ.ಕೂರ್ಮಾರಾವ್‌ ರವಿವಾರ ಭೇಟಿ ನೀಡಿ, ರೋಗಿಗಳ ಜತೆ ಸಮಾಲೋಚನೆ ನಡೆಸಿದರು. ವೈದ್ಯರ ಹಾಜರಾತಿ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾ ಧಿಕಾರಿಗಳು, ರೋಗಿಗಳಿಗೆ ನೀಡಲಾಗುತ್ತಿರುವ ಉಪಹಾರ, ಊಟದ ಕುರಿತು ಹಾಗೂ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ಇತರರು ಇದ್ದರು.

ಟಾಪ್ ನ್ಯೂಸ್

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

30ಕ್ಕೆ ಗಡಿ ಹಳ್ಳಿ ಹಬ್ಬ, ಸಂಗೀತ ಸಂಜೆ ಕಾರ್ಯಕ್ರಮ

yadagiri news

ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ

26

ಪ್ರಶಸ್ತಿಯಿಂದ ಸಾಧಕನ ಜವಾಬ್ದಾರಿ ವೃದ್ದಿ

27

ದೇವಿಕೇರಾದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು

yadagiri news

ಮಧ್ಯವರ್ತಿಗಳಿಂದ ಮೋಸ ಹೋಗದಿರಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

8vote

ಕಾಂಗ್ರೆಸ್‌ ಪರ ಮಾಜಿ ಸಚಿವ ಮಹಾದೇವಪ ಮತಯಾಚನೆ

ದೀಪಗಳ ಉತ್ಸವಕ್ಕೆ ಚಾಲನೆ

ದೀಪಗಳ ಉತ್ಸವಕ್ಕೆ ಚಾಲನೆ

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

7——-

ಇಂಡಿಯಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದ ಎಚ್ಡಿಕೆ

ಹೆಲ್ತ್‌ ಕೇರ್

ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಿಂದ ಮಿತ್ರಾಕ್ಲಿಪ್‌ ಯಶಸ್ವಿ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.