PSI ಪರಶುರಾಮ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ: ಗೃಹ ಸಚಿವರಿಗೆ ಕಂದಕೂರು ಪತ್ರ
ಪರಶುರಾಮ ಅವರ ಪತ್ನಿ ಏಳು ತಿಂಗಳ ಗರ್ಭಿಣಿ... ನನ್ನ ಎರಡು ತಿಂಗಳ ಸಂಬಳ ಅವರ ಕುಟುಂಬಕ್ಕೆ ನೀಡುತ್ತೇನೆ
Team Udayavani, Aug 3, 2024, 8:41 PM IST
ಯಾದಗಿರಿ: ನಗರ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಅವರ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ ಹಾಗೂ ಪ್ರಭಾವಿಗಳ ಹೆಸರು ಕೇಳಿ ಬರುತ್ತಿದ್ದು, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ.
ಪಿಎಸ್.ಐ ಪರಶುರಾಮ ಅವರ ಪತ್ನಿ ಶ್ವೇತಾ ಅವರು ಏಳು ತಿಂಗಳ ಗರ್ಭಿಣಿಯಿದ್ದು, ಅವರ ಕುಟುಂಬ ನಿರ್ವಹಣೆಗೆ ‘ನನ್ನ ಎರಡು ತಿಂಗಳ ಶಾಸಕ ಸಂಬಳ’ ನೀಡುತ್ತೇನೆ ಹಾಗೂ ರಾಜ್ಯ ಸರ್ಕಾರವು ಸಹ ಮೃತ ಪಿಎಸ್ಐ ಕುಟುಂಬಕ್ಕೆ ನ್ಯಾಯ ಒದಗಿಸಿ ಆರ್ಥಿಕ ನೆರವು ಒದಗಿಸಬೇಕೆಂದು ಹೇಳಿದ್ದಾರೆ.
ನಗರ ಪೊಲೀಸ್ ಠಾಣೆಗೆ ಬಂದು ಇನ್ನು ಒಂದು ವರ್ಷವೂ ಪೂರ್ಣಗೊಂಡಿರಲಿಲ್ಲ, ಆಗಲೇ ಪಿಎಸ್ಐ ಪರಶುರಾಮ ಅವರಿಗೆ ವರ್ಗಾವಣೆಯಾಗಿದ್ದು, ಅವೈಜ್ಞಾನಿಕ ವರ್ಗಾವಣೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಗೃಹ ಇಲಾಖೆ ಹಾಗೂ ಇಲಾಖೆ ಮೇಲಾಧಿಕಾರಿಗಳು ಪಿಎಸ್ಐ ಪರಶುರಾಮ ಅವರ ಸಾವಿಗೆ ಹಾಗೂ ಅವರ ಪತ್ನಿ ಶ್ವೇತಾ ಅವರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕ ಕಂದಕೂರು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ: ತಾರಾನಾಥ ಗಟ್ಟಿ
Film Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ನಾಳೆ ತೆರೆಗೆ
Rahul Gandhi ಆಕಸ್ಮಿಕವಾಗಿ ಸಿಕ್ಕಿದರೆ ಓಡಿಹೋಗಲು ಆಗುತ್ತದೆಯೇ: ಪರಂ
Film Release: ಸೆ.13ರಂದು ರಾಜ್ಯಾದ್ಯಂತ “ಕಲ್ಜಿಗ’ ಕನ್ನಡ ಚಲನಚಿತ್ರ ತೆರೆಗೆ
ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.