ಬೀದಿ ಬದಿ ವ್ಯಾಪಾರಿಗಳಿಗೆ ಸಾಲ


Team Udayavani, Nov 6, 2020, 7:25 PM IST

yg-tdy-1

ಯಾದಗಿರಿ: ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಯೋಜನೆಯಡಿ ಅರ್ಹರನ್ನು ಗುರುತಿಸಿ ಸಾಲ ಸೌಲಭ್ಯ ಒದಗಿಸುವಂತೆ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಆರ್‌ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಆತ್ಮನಿರ್ಭರ ನಿಧಿ ಯೋಜನೆ ಅನುಷ್ಠಾನ ಕುರಿತು ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ, ಅವರ ಸಣ್ಣ ಸಣ್ಣ ವಹಿವಾಟುಗಳಿಗೆ ಅನುಕೂಲವಾಗುವಂತೆ ಆತ್ಮ ನಿರ್ಭರ ಯೋಜನೆಯಡಿ 10 ಸಾವಿರ ರೂ. ಕಿರು ಸಾಲಸೌಲಭ್ಯ ನೀಡಲಾಗುತ್ತಿದೆ, ನಗರಸಭೆ ಅಥವಾ ನಗರ ಸ್ಥಳೀಯ ಸಂಸ್ಥೆಗಳು ಅರ್ಹ ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಪರಿಶೀಲಿಸಿ, ಸಾಲ ಸೌಲಭ್ಯ ನೀಡಲು ಬ್ಯಾಂಕುಗಳಿಗೆ ಸಲ್ಲಿಸಬೇಕು. ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ಅವರು ವಹಿವಾಟು ನಡೆಸುವ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಸಾಲ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟು 2,092 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ. ಅವರಲ್ಲಿ 227 ಮಂದಿಗೆ ಸಾಲ ಸೌಲಭ್ಯ ಮಂಜೂರಾಗಿದೆ. ಉಳಿದ 1267 ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ಸಾಲ ಸೌಲಭ್ಯ ನೀಡಲು ಆನ್‌ಲೈನ್‌ ಮೂಲಕ ಅವರ ಅರ್ಜಿ ಅಪ್‌ಡೇಟ್‌ ಮಾಡಬೇಕು, ಅವರ ಅರ್ಜಿನಿಯಮಾನುಸಾರವಾಗಿ ಪರಿಶೀಲಿಸಿ ಮುಂದಿನ 7 ದಿನದೊಳಗೆ ಸಾಲ ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು. ಯಾವುದಾದರೂ ತಾಂತ್ರಿಕ ತೊಂದರೆ ಎದುರಾದಲ್ಲಿ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅದನ್ನು ಬಗೆಹರಿಸಬೇಕು. ಅರ್ಜಿಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಅದನ್ನು ವಾಪಸ್‌ ಪಡೆದು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಸಂಬಂಧಿ ಸಿದ ಬ್ಯಾಂಕುಗಳು ಕೂಡಲೇ ಅರ್ಹರಿಗೆ ಸಾಲ ಸೌಲಭ್ಯ ಒದಗಿಸಬೇಕು.ಮುಂದಿನ ಜಿಲ್ಲಾ ಮಟ್ಟದ ಬ್ಯಾಂಕರ್ ಸಮಿತಿ ಸಭೆಯಲ್ಲಿ ಈ ವಿಷಯದ ಪ್ರಗತಿ ಕುರಿತು ಚರ್ಚಿಸಲಾಗುವುದು. ಫಲಾನುಭವಿಗಳು ಪಡೆದ ಸಾಲ ಸೌಲಭ್ಯ ನಿಯಮಿತವಾಗಿ ಹಿಂತಿರುಗಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-f

227ನೇ ಬಾರಿಗೆ ನಾಮಪತ್ರ ಸಲ್ಲಿಸಿದ ಎಲೆಕ್ಷನ್ ಕಿಂಗ್ ! ; ಗೆಲ್ತಾರಾ?

ಬಡತನ, ಹಸಿವಿನಿಂದ ಪಾರಾಗಲು ಅಫ್ಘಾನಿಸ್ತಾನದಲ್ಲಿ ಮಕ್ಕಳು ಹಾಗೂ ದೇಹದ ಅಂಗಾಂಗಗಳ ಮಾರಾಟ!

ಬಡತನ, ಹಸಿವಿನಿಂದ ಪಾರಾಗಲು ಅಫ್ಘಾನಿಸ್ತಾನದಲ್ಲಿ ಮಕ್ಕಳು ಹಾಗೂ ದೇಹದ ಅಂಗಾಂಗಗಳ ಮಾರಾಟ!

Shriramulu

ಕಾಂಗ್ರೆಸ್ ಕಿರಿಕ್ ಪಾರ್ಟಿ; ನಾಯಕರ ಹೇಳಿಕೆ ಸುಳ್ಳಿನ ಕಂತೆ : ಶ್ರೀರಾಮುಲು

ashleigh barty

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕಪ್ ಗೆದ್ದು ಇತಿಹಾಸ ಬರೆದ ಮಾಜಿ ಕ್ರಿಕೆಟರ್ ಆಶ್ಲಿ ಬಾರ್ಟಿ

1-qqqwewq

ಗೆಲುವಿನ ಅಂತರದ ಸಮರ : ಪ್ರತಾಪ್ ಸಿಂಹಗೆ ಧ್ರುವನಾರಾಯಣ್ ತಿರುಗೇಟು

film Chamber of Commerce requests 100% exemption for movie theater

ಸಿನಿಮಾ ಥಿಯೇಟರ್‌ಗೂ 100% ವಿನಾಯಿತಿ ನೀಡುವಂತೆ ವಾಣಿಜ್ಯ ಮಂಡಳಿ ಮನವಿ

shaheen shah afridi

ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17unteach

ಅಸ್ಪೃಶ್ಯತೆ ನಿವಾರಣೆಗೆ ಪಣತೊಡಿ

16sports

ಆರೋಗ್ಯಕರ ಜೀವನಕ್ಕೆ ಕ್ರೀಡೆ ಅಗತ್ಯ

15covid

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ

14water

ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

11childrens

ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಅಗತ್ಯ: ಮಲ್ಲಿಕಾರ್ಜುನ

MUST WATCH

udayavani youtube

ಹುಣಸೂರು : ದುಷ್ಕರ್ಮಿಗಳ ಗುಂಡೇಟಿಗೆ ಜೀವಬಿಟ್ಟ 20 ವರ್ಷದ ಹೆಣ್ಣಾನೆ

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

ಹೊಸ ಸೇರ್ಪಡೆ

ಅನಧಿಕೃತ ಲೇಔಟ್‌ ತೆರವು ಕಾರ್ಯಾಚರಣೆ

ಅನಧಿಕೃತ ಲೇಔಟ್‌ ತೆರವು ಕಾರ್ಯಾಚರಣೆ

ಕುಂದುತ್ತಿದೆ ಧಾರವಾಡ ಕೃಷಿ ವಿವಿ ವರ್ಚಸ್ಸು

ಕುಂದುತ್ತಿದೆ ಧಾರವಾಡ ಕೃಷಿ ವಿವಿ ವರ್ಚಸ್ಸು

1-f

227ನೇ ಬಾರಿಗೆ ನಾಮಪತ್ರ ಸಲ್ಲಿಸಿದ ಎಲೆಕ್ಷನ್ ಕಿಂಗ್ ! ; ಗೆಲ್ತಾರಾ?

22lyaout

ಲೇಔಟ್‌-ನಿವೇಶನ ಬಗ್ಗೆ ಎಚ್ಚರ ವಹಿಸಿ: ಅಮರೇಗೌಡ

ರಸಗೊಬ್ಬರ ದರ ಏರಿಕೆ ಖಂಡಿಸಿ  ಭತ್ತದ ಗದ್ದೆಯಲ್ಲಿ ಗೊಬ್ಬರದ ಚೀಲವಿಟ್ಟು ರೈತರ ಪ್ರತಿಭಟನೆ

ರಸಗೊಬ್ಬರ ದರ ಏರಿಕೆ ಖಂಡಿಸಿ  ಭತ್ತದ ಗದ್ದೆಯಲ್ಲಿ ಗೊಬ್ಬರದ ಚೀಲವಿಟ್ಟು ರೈತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.