ಮೊಸಳೆ ಬಾಯಿಗೆ ಸಿಕ್ಕ ಕುರಿಗಾಯಿ
Team Udayavani, Mar 14, 2021, 5:51 PM IST
ಶಹಾಪುರ: ಕುರಿಗಳಿಗೆ ನೀರು ಕುಡಿಸಲು ಕೃಷ್ಣಾ ನದಿ ತೀರಕ್ಕೆ ಇಳಿದ ಕುರಿಗಾಯಿಯನ್ನು ಮೊಸಳೆ ಹೊತ್ತೂಯ್ದ ಘಟನೆ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶಾರದಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಣ ಭೀಮಣ್ಣ (34) ಮೊಸಳೆಗೆ ಆಹಾರವಾದ ದುರ್ದೈವಿ. ಈತ ಕಳೆದ ಒಂದು ತಿಂಗಳ ಹಿಂದೆಯಷ್ಟೆ ಯಕ್ಷಿಂತಿ ಗ್ರಾಮ ಸಮೀಪ ಕೃಷ್ಣಾ ನದಿ ತೀರದ ಜಮೀನೊಂದರಲ್ಲಿ ಕುರಿ ಹಟ್ಟಿ ಹಾಕಿಕೊಂಡಿದ್ದ ಎನ್ನಲಾಗಿದೆ. ಅರಣ್ಯ ಇಲಾಖೆ ಭೀಮರಾಯನ ಗುಡಿ ವಲಯ ಅ ಧಿಕಾರಿ ಐ.ಬಿ. ಹೂಗಾರ ಸೇರಿದಂತೆ ಇತರರು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಕುರಿಗಾಯಿ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆಯಾದರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಥಳದಲ್ಲಿದ್ದ ಅ ಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದು ನದಿ ತೀರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ
ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್
ಉಪಚುನಾವಣೆ : ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ
ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್ ಪಂಡಿತ್ ಆರೋಪ
ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು