Udayavni Special

ಗುಳೆ ಕಾರ್ಮಿಕರಿಗೆ ನರೇಗಾ ವರದಾನ

26.42 ಕೋಟಿ ಕೂಲಿ ಮತ್ತು 4.9 ಕೋಟಿ ಸಾಮಗ್ರಿ ಪಾವತಿಸಲಾಗಿದೆ.

Team Udayavani, May 22, 2021, 7:46 PM IST

Gule

ಸುರಪುರ: ಕೊರೊನಾ ಗ್ರಾಮೀಣ ಜನತೆಗೆ ಬದುಕಿನ ಪಾಠ ಕಲಿಸಿದೆ. ಹುಟ್ಟಿದೂರಲ್ಲಿಯೇ ದುಡಿದುಣ್ಣುವ ನೀತಿ ಹೇಳಿ ಕೊಟ್ಟಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿಯೇ ಕೆಲಸ ಸಿಗುತ್ತಿದ್ದು ಕಾರ್ಮಿಕರಿಗೆ ಇದು ವರದಾನವಾಗಿ ಪರಿಣಮಿಸಿದೆ. ಕೊವೀಡ್‌ 2ನೇ ಅಲೆ ಹಿನ್ನೆಲೆಯಲ್ಲಿ ಕರ್ಫ್ಯೂ ಆಗಿರುವುದರಿಂದ ಗುಳೆ ಹೋಗಿದ್ದ ಕಾರ್ಮಿಕರು ಮರಳಿ ಊರು ಸೇರಿದ್ದಾರೆ. ಇತ್ತ ಸರ್ಕಾರ ಕೂಡಾ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಖಾತ್ರಿ ಯೋಜನೆಯಡಿ ಕೆಲಸ ಕೈಗೆತ್ತಿಕೊಂಡಿದ್ದು ಪ್ರತಿ ಕಾರ್ಮಿಕ ಕುಟುಂಬಕ್ಕೆ ಗ್ರಾಮದಲ್ಲಿಯೇ ಕೆಲಸ ನೀಡುತ್ತಿದೆ. ತಾಲೂಕಿನ 23 ಗ್ರಾಪಂನಲ್ಲಿ ನರೇಗಾದಲ್ಲಿ ವಿವಿಧ ಕೆಲಸ ಕೈಗೆತ್ತಿಕೊಳ್ಳ ಲಾಗಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ವರ್ಷ 1156 ಜಾಬ್‌ ಕಾರ್ಡ್‌ ಹೆಚ್ಚಳವಾಗಿವೆ.

ಪ್ರಸಕ್ತ ಸಾಲಿನಲ್ಲಿ 42,076 ನೋಂದಾಯಿತ ಕುಟುಂಬಗಳು. ಆ ಪೈಕಿ 87,349 ಕೂಲಿಕಾರರಿದ್ದಾರೆ. ಪರಿಶಿಷ್ಟ ಜಾತಿ 4896, ಪರಿಶಿಷ್ಟ ಪಂಗಡ 5135, ಇತರೆ ಹಿಂದುಳಿದ 31452 ಕಾರ್ಮಿಕರಿದ್ದಾರೆ. ಈ ಪೈಕಿ 6824 ಕುಟುಂಬಗಳು ಕೆಲಸ ಕೇಳಿದ್ದವು. 6745 ಕುಟುಂಬಗಳಿಗೆ ಕೆಲಸಕ್ಕೆ ಬರಲು ಸೂಚಿಸಲಾಗಿತ್ತು.

3760 ಕುಟುಂಬಗಳು ಸೇರಿ 5763 ಜನ ಕಾರ್ಮಿಕರು ಯೋಜನೆಯಡಿ ಕೆಲಸ ನಿರ್ವಹಿಸಿದ್ದಾರೆ. ಯೋಜನೆಯಡಿ 45,112 ದಿನ ಕಾರ್ಮಿಕರಿಗೆ ಕೆಲಸ ನೀಡಲು ಮಾನವ ದಿನ ಸೃಷ್ಟಿಸಲಾಗಿದ್ದು ಏಪ್ರಿಲ್‌ ತಿಂಗಳಲ್ಲಿ ಕಾಮಗಾರಿ ಸಾಮಗ್ರಿ ಖರೀದಿಗೆ 9.91 ಲಕ್ಷ ಮತ್ತು 1.44 ಕೋಟಿ ಕೂಲಿ ಪಾವತಿಗೆ ಖರ್ಚು ಮಾಡಲಾಗಿದೆ.

ಕಳೆದ ಸಾಲಿನಲ್ಲಿ ಮಾರ್ಚ್‌ ಅಂತ್ಯದವರೆಗೆ ಪರಿಶಿಷ್ಟ ಜಾತಿ 4770, ಪರಿಶಿಷ್ಟ ಜನಾಂಗದ 4966, ತರೆ ಹಿಂದುಳಿದ 3964 ಸೇರಿ ಒಟ್ಟ 40,920 ಕುಟುಂಬಗಳು 85345 ಜನ ಕಾರ್ಮಿಕರು ಕೆಲಸಕ್ಕೆ ಹೆಸರು ನೋಂದಾಯಿಸಿದ್ದಾರೆ. 19041 ಕುಟುಂಬಗಳಿಗೆ ಕೆಲಸಕ್ಕೆ ಸೂಚಿಸಲಾಗಿತ್ತು. ಆದರೆ 33303 ಜನ ಕಾರ್ಮಿಕರು ಕೆಲಸ ಮಾಡಿದ್ದರು. 26.42 ಕೋಟಿ ಕೂಲಿ ಮತ್ತು 4.9 ಕೋಟಿ ಸಾಮಗ್ರಿ ಪಾವತಿಸಲಾಗಿದೆ.

ಶಾಲೆಗೆ ತಡೆಗೋಡೆ, ಶೌಚಾಲಯ ನಿರ್ಮಾಣ, ಅಡುಗೆ ಕೋಣೆ, ಸಸಿ ನೆಡುವುದು, ಮಣ್ಣು ಮತ್ತು ನೀರು ಸಂರಕ್ಷಣೆ, ಮಳೆ ನೀರಿನ ಸಂಗ್ರಹ ತೊಟ್ಟಿ, ರಸ್ತೆ ಸುಧಾರಣೆ, ನಾಲಾ ಹೂಳೆತ್ತುವುದು, ಕ್ಷೇತ್ರ ಬದು ನಿರ್ಮಾಣ, ಮಳೆ ನೀರು ಕೊಯ್ಲು, ಕೆರೆ ಹೂಳು ಎತ್ತುವುದು ಸೇರಿ ಇತರೆ ಕಾಮಗಾರಿ
ಕೈಗೆತ್ತಿಕೊಳ್ಳಲಾಗಿದೆ.

ಕಾರ್ಮಿಕರಿಗೆ ವರದಾನವಾದ ಯೋಜನೆ: ಗ್ರಾಪಂ ವ್ಯಾಪ್ತಿ ಆಯಾ ಗ್ರಾಮಗಳಲ್ಲಿಯೇ ಕೆಲಸ. ಮಧ್ಯ ವರ್ತಿಗಳ ಪಾಲುದಾರಿಕೆ ಇಲ್ಲ. ಕೂಲಿ ಹಣ ಕಾರ್ಮಿಕರ ಬ್ಯಾಂಕ್‌ ಖಾತೆಗೆ ನೇರ ಜಮಾ. ಕಳೆದ ವರ್ಷ ಪ್ರವಾಹ ಮತ್ತು ಅತಿವೃಷ್ಟಿ ಕಾರಣದಿಂದ 150 ಮಾನವ ದಿನ ಸೃಷ್ಟಿಸಿ 275 ರೂ. ಕೂಲಿ ನೀಡಲಾಗಿತ್ತು. ಈ ಬಾರಿ 100 ಮಾನವ ದಿನ ಸೃಷ್ಟಿಸಿದ್ದು 289 ರೂ. ಗೆ ಕೂಲಿ ಹೆಚ್ಚಿಸಲಾಗಿದೆ.ಒಟ್ಟಾರೆ ನರೇಗಾ ದುಡಿಯುವ ಕಾರ್ಮಿಕರಿಗೆ ವರದಾನವಾಗಿದೆ.

*ಸಿದ್ದಯ್ಯ ಪಾಟೀಲ್‌

ಟಾಪ್ ನ್ಯೂಸ್

\172.17.1.5ImageDirUdayavaniDaily17-06-21Daily_NewsHeather Knight

ವನಿತಾ ಟೆಸ್ಟ್‌ :ಭಾರತದೆದುರು ಇಂಗ್ಲೆಂಡ್‌ ಬ್ಯಾಟಿಂಗ್‌ ಮೇಲುಗೈ

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ED

ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚನೆ : ಮಹಾರಾಷ್ಟ್ರದ ಮಾಜಿ ಶಾಸಕ ಬಂಧನ

16-14

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

hಗ್ಗಹಜಕ

ಇಂದಿರಾ ಕ್ಯಾಂಟೀನ್‌ ಗೆ ಅನುದಾನವೇ ಇಲ್ಲ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

sdfghgfdsa

ದೇಶದ ಕೀರ್ತಿ ಆಗಸದೆತ್ತರಕ್ಕೆ ಹಾರಿಸಿದ ಮೋದಿ ಸರ್ಕಾರ

MUST WATCH

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

\172.17.1.5ImageDirUdayavaniDaily17-06-21Daily_NewsHeather Knight

ವನಿತಾ ಟೆಸ್ಟ್‌ :ಭಾರತದೆದುರು ಇಂಗ್ಲೆಂಡ್‌ ಬ್ಯಾಟಿಂಗ್‌ ಮೇಲುಗೈ

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

16-22

ಹುಲಿಕಲ್‌ ಘಾಟ್‌ ರಸ್ತೆ ಮಾರ್ಗಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.