ಸಾರ್ವಜನಿಕರಲ್ಲಿ ಆತಂಕ ಬೇಡ: ಡಿಸಿ


Team Udayavani, Jun 9, 2020, 7:58 AM IST

ಸಾರ್ವಜನಿಕರಲ್ಲಿ ಆತಂಕ ಬೇಡ: ಡಿಸಿ

ಯಾದಗಿರಿ: ನೋವೆಲ್‌ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರ ಗಂಟಲು ದ್ರವ ಮಾದರಿ ಸಂಗ್ರಹಿಸಿ ತ್ವರಿತಗತಿಯಲ್ಲಿ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಮುಂಬಯಿ, ಪುಣೆ, ಥಾಣೆಯಿಂದ ಜಿಲ್ಲೆಗೆ 15 ಸಾವಿರ ಜನ ವಲಸೆ ಕಾರ್ಮಿಕರು ವಾಪಸಾಗಿದ್ದಾರೆ. ಇವರಲ್ಲಿಯೇ ಹೆಚ್ಚಿನ ಕೋವಿಡ್ ಪಾಸಿಟಿವ್‌ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ತ್ವರಿತಗತಿಯಲ್ಲಿ ಕೋವಿಡ್ ಪಾಸಿಟಿವ್‌ ಪತ್ತೆಗೆ ನಿತ್ಯ ಸಾವಿರಕ್ಕಿಂತ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ ಮಾದರಿಗಳ ಪರೀಕ್ಷೆಗಾಗಿ ಬೆಂಗಳೂರಿನ ವಿವಿಧ ಲ್ಯಾಬ್‌ಗಳಲ್ಲಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಜಿಲ್ಲೆಯ ಪಾಸಿಟಿವ್‌ ಪ್ರಕರಣಗಳಲ್ಲಿ ಜೂ.7ರಂದು 23 ಜನ ಗುಣಮುಖ ಹೊಂದಿದ್ದು, ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರುವಂತೆ ತಿಳಿಸಲಾಗಿದೆ. ಜೂ. 8ರವರೆಗೆ ಒಟ್ಟು 93 ಜನ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.ವೈದ್ಯರು, ತಜ್ಞ ವೈದ್ಯರು, ಮೈಕ್ರೋ ಬಯಾಲಜಿಸ್ಟ್‌ ಇಚ್ಛಿತ ವೈದ್ಯರು ಸ್ವಇಚ್ಛೆಯಿಂದ ಸೇವೆ ಸಲ್ಲಿಸಲು ಮುಂದೆ ಬಂದಲ್ಲಿ ಮೊದಲು ತಮ್ಮನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಲ್ಲಿ ಐಎಲ್‌ಐ/ ಸ್ಯಾರಿ ರೋಗ ಲಕ್ಷಣ ಕಂಡುಬಂದಲ್ಲಿ ಅಂಥವರ ದತ್ತಾಂಶವನ್ನು ಕಡ್ಡಾಯವಾಗಿ ಕೆಪಿಎಂಇ ವೆಬ್‌ಪೋರ್ಟಲ್‌ನಲ್ಲಿ ನಮೂದಿಸಬೇಕು. ಇಲ್ಲವಾದಲ್ಲಿ ಕೆಪಿಎಂಇ ಅಧಿನಿಯಮದಂತೆ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಎಲ್ಲ ಚಿಲ್ಲರೆ ಔಷಧ  ವರ್ತಕರು ಜ್ವರ, ಕೆಮ್ಮು, ಅಲರ್ಜಿ, ಐಎಲ್‌ಐ/ ಸ್ಯಾರಿ ಪ್ರಕರಣಗಳಿಗೆ ಸಂಬಂಧಿಸಿದ ಔಷಧಗಳನ್ನು ಮಾರಾಟ ಮಾಡಿದ ವಿವರಗಳನ್ನು ಪ್ರತಿದಿನ ಎಂಟ್ರಿ ಮಾಡಲು ಸೂಚಿಸಲಾಗಿದೆ.

ಎಂಟ್ರಿ ಮಾಡದಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕೋವಿಡ್‌-19 ಹಾಗೂ ಡ್ರಗ್ಸ್‌ ಆ್ಯಂಡ್‌ ಕಾಸ್ಮೆಟಿಕ್ಸ್‌ ಆ್ಯಕ್ಟ್ ನಿಯಮಾವಳಿಗಳಂತೆ ಔಷಧ  ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೋವಿಡ್ ತಡೆಗಾಗಿ ಸರ್ಕಾರ ನಿರ್ದೇಶಿಸಿರುವ ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌ (ಎಸ್‌ಒಪಿ) ಅನುಸರಿಸಲಾಗುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಪ್ರತಿದಿನ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಹೋಂ ಕ್ವಾರಂಟೈನ್‌ನಲ್ಲೇ ಇರುವಂತೆ ತಿಳಿಯಪಡಿಸಲಾಗುತ್ತಿದೆ. ಹೊರಗಡೆ ತಿರುಗಾಡಿದಲ್ಲಿ ಅಂಥವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತಿದೆ. ಅಜೀಮ್‌ ಪ್ರೇಮ್‌ ಜಿ ಫೌಂಡೆಷನ್‌ ವತಿಯಿಂದ ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ ಇದ್ದರು.

ಟಾಪ್ ನ್ಯೂಸ್

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

thumb 6

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

20culture

ಮಠಗಳು ಸಂಸ್ಕಾರ ಕಲಿಸುವ ಶ್ರದ್ಧಾ ಕೇಂದ್ರ

19modi

ಮೋದಿ ಕನಸು ಸಾಕಾರಗೊಳಿಸೋಣ: ಬಾಬುರಾವ್‌ ಚಿಂಚನಸೂರು

18vachana

ಬದುಕಿಗೆ ವಚನ ದಾರಿದೀಪ: ಹಂದ್ರಾಳ

16case

ಕಳಪೆ ರಸಗೊಬ್ಬರ ನೀಡಿದರೆ ಕೇಸ್‌ ಹಾಕಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

mayor

ಎಸ್ಸೆಸ್ಸೆಂ ಹೇಳಿಕೆ ಹಾಸ್ಯಾಸ್ಪದ: ಮೇಯರ್‌

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

11

ಐಟಿ ಕ್ಷೇತ್ರ ಓಟದ ಕುದುರೆ ಇದ್ದಂತೆ : ಸಿದ್ದನಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.