ಮೂಲ ಸೌಕರ್ಯಗಳಿಗೆ ಆದ್ಯತೆ


Team Udayavani, Mar 6, 2019, 9:39 AM IST

yad-2.jpg

ಸುರಪುರ: ನೀರು ಶೌಚಾಲಯ ಸೇರಿದಂತೆ ನಗರದ ಜನತೆಗೆ ಮೂಲ ಸೌಕರ್ಯ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅನುಷ್ಠಾನ ಅಧಿಕಾರಿಗಳು ಕೈ ಜೋಡಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇ ಎಂದು ಶಾಸಕ ರಾಜುಗೌಡ ಹೇಳಿದರು.

ನಗರದಲ್ಲಿ ಸೋಮವಾರ ವಿವಿಧ ವಾರ್ಡಗಳಲ್ಲಿ 1 ಕೋಟಿ ವೆಚ್ಚದ 6 ನೂತನ ಕುಡಿಯುವ ಶುದ್ಧ ನೀರು ಘಟಕಗಳ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ. ನದಿಯಲ್ಲಿ ಸರಿಯಾಗಿ ನೀರಿಲ್ಲ. ಇರುವಷ್ಟು ನೀರನ್ನು ನಗರಸಭೆಯವರು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಜನತೆ ನೀರಿಗಾಗಿ ತತ್ತರಿಸುತ್ತಿದ್ದಾರೆ. ಜನರ ತಾಳ್ಮೆ ಪರೀಕ್ಷಿಸ ಬೇಡಿ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಇಂಜಿನಿಯರ್‌ ಹಣಮಂತಪ್ಪ ಅಂಬ್ಲಿ ಅವರಿಗೆ ಕಡಕ್ಕಾಗಿ ಎಚ್ಚರಿಕೆ ನೀಡಿದರು.

ನಗರದ ಜನತೆಗೆ ಶುದ್ಧ ನೀರು ಕೊಡಬೇಕು ಎನುವ ಉದ್ದೇಶದಿಂದ ಸಾಕಷ್ಟು ಪ್ರಯತ್ನ ಪಟ್ಟು ಅನುದಾನ ತಂದಿದ್ದೇನೆ. ಇದನ್ನು ವ್ಯರ್ಥ ಆಗಲಿಕ್ಕೆ ಬಿಡುವುದಿಲ್ಲ ಎಂದು ತಾಕೀತು ಮಾಡಿದರು.
 
ಇಲಾಖೆ ಎಇಇ ಹಣಮಂತಪ್ಪ ಅಂಬಲಿ ಮಾತನಾಡಿ, ಮುಂಜುಮದಾರಗಲ್ಲಿ ಕುಂಬಾರ ಪೇಟ. ಕೆಂಗೂರಿ ವೃತ್ತ, ತರಕಾರಿ ಮಾರುಕಟ್ಟೆ, ತಿಮ್ಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ರಂಗಂಪೇಟ ತರಕಾರಿ ಮಾರುಕಟ್ಟೆ 6 ಕಡೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. 

ನಗರಸಭೆ ಪೌರಾಯುಕ್ತ ಏಜಾಜ್‌ ಹುಸೇನ್‌, ತಾಪಂ ಅಧ್ಯಕ್ಷೆ ಅನುಸೂಬಾಯಿ ತಿರುಪತಿ ಚವ್ಹಾಣ, ಯಲ್ಲಪ್ಪ ಕುರುಕುಂದಿ, ಹನುಮಪ್ಪ ನಾಯಕ ತಾತಾ, ವೇಣುಮಾಧವ ನಾಯಕ ಮರಿಲಿಂಗಪ್ಪ ನಾಯಕ ಕರ್ನಾಳ, ಗ್ಯಾನಚಂದ ಜೈನ್‌, ಎಚ್‌.ಸಿ. ಪಾಟೀಲ, ದುರ್ಗಪ್ಪ ಗೋಗಿಕೇರಾ, ವಿಷ್ಣು ಗುತ್ತೇದಾರ್‌, ನರಸಿಂಹಕಾಂತ ಪಂಚಮಗಿರಿ, ಶಿವಕುಮಾರ ಕಟ್ಟಿಮನಿ, ಅಯ್ಯಣ್ಣ ಪೂಜಾರಿ, ಶಂಕರ ನಾಯಕ, ವಿರೂಪಾಕ್ಷಿ ಕರ್ನಾಳ, ಈಶ್ವರ ನಾಯಕ, ಶ್ರೀನಿವಾಸ ದರಬಾರಿ, ಬಸವರಾಜ ಕೊಡೇಕಲ್‌, ಮಲ್ಲೇಶಿ ಪಾಟೀಲ ನಾಗರಾಳ, ಭೀಮಾಶಂಕರ ಬಿಲ್ಲವ್‌ ಇದ್ದರು.

ಟಾಪ್ ನ್ಯೂಸ್

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21police

ಡಿವೈಎಸ್ಪಿ ದೇವರಾಜ ಅಧಿಕಾರ ಸ್ವಿಕಾರ

20bus

ಬಸ್‌ ಸೌಲಭ್ಯ ಕಲ್ಪಿಸಲು ಕಕ ಸಾರಿಗೆ ನಿಗಮಕ್ಕೆ ಮನವಿ

19lack

ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಭರವಸೆ

18covid

ಲಸಿಕಾಕರಣದಲ್ಲಿ ಭಾರತ ಐತಿಹಾಸಿಕ ಸಾಧನೆ

15mahatoshree

ಅನುಭಾವದ ಸಾಹಿತ್ಯಕ್ಕೆ ಮನ್ನಣೆ: ಮಾತೋಶ್ರೀ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಸಿಒಪಿ26 ಶೃಂಗ, ಏನು ಎತ್ತ?

ಸಿಒಪಿ26 ಶೃಂಗ, ಏನು ಎತ್ತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.