ತೀಸ್‌ ಹಜಾರಿ ಘಟನೆ ಖಂಡಿಸಿ ಪ್ರತಿಭಟನೆ

Team Udayavani, Nov 5, 2019, 6:01 PM IST

ಶಹಾಪುರ: ದೆಹಲಿ ತೀಸ್‌ ಹಜಾರಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಮಾರಾಮಾರಿ ಘಟನೆಗೆ ಪೊಲೀಸರೇ ಹೊಣೆಗಾರರು ಎಂದು ಆರೋಪಿಸಿ ಸೋಮವಾರ ಇಲ್ಲಿನ ವಕೀಲರ ಸಂಘದ ಸದಸ್ಯರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್‌. ರಾಂಪುರೆ, ಅನವಶ್ಯಕವಾಗಿ ವಕೀಲರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡನೀಯವಾಗಿದೆ. ವಕೀಲರ ಮೇಲೆ ಒಂದಿಲ್ಲ ಒಂದು ಕಾರಣದಿಂದ ಹಲ್ಲೆ ನಡೆಯುತ್ತಿದೆ. ಸಾರ್ವಜನಿಕರ ಹಕ್ಕು ರಕ್ಷಣೆ ಮತ್ತು ಸದಾ ಕಕ್ಷಿದಾರರ ಹಿತರಕ್ಷಿಸಲು ಯತ್ನಿಸುತ್ತಿರುವ ವಕೀಲರನ್ನು ಗುರಿಯಾಗಿಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ಸರಿಯಲ್ಲ ಎಂದರು. ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರಬೇಕು. ತಪ್ಪಿತಸ್ಥ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆಯನ್ನು ರೂಪಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ಸೈಯ್ಯದ್‌ ಇಬ್ರಾಹಿಂಸಾಬ್‌ ಜಮಾದಾರ, ಹಣಮಂತರಾಯ ಪಾಟೀಲ, ಮಲ್ಲಪ್ಪ ಪೂಜಾರಿ, ವಾಸುದೇವ ಕಟ್ಟಿಮನಿ, ಗುರುರಾಜ ದೇಶಪಾಂಡೆ, ನಾಗೇಂದ್ರ ಬಳಬಟ್ಟಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ, ಹಯ್ನಾಳಪ್ಪ ಹೊಸ್ಮನಿ, ಶರಬಣ್ಣ ರಸ್ತಾಪುರ, ಶಿವಶರಣಪ್ಪ ಹೊಸ್ಮನಿ, ಬಸಮ್ಮ ರಾಂಪುರೆ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅನೀಲ ಬಸೂದೆ ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿರುವ ಮುಂಡರಗಿ ಗ್ರಾಮದ ಎರಡು ಶಾಲೆ ಮಕ್ಕಳಿಗೆ ಬಯಲಲ್ಲೇ ಪಾಠ...

  • „ಚೆನ್ನಕೇಶವುಲು ಗೌಡ ಗುರುಮಠಕಲ್‌: ಬಡಾವಣೆಗಳ ನಿರ್ಮಾಣ, ಪರವಾನಗಿಗೆ ಸಂಬಂಧಿಸಿದಂತೆ ಪ್ರತಿ ಬಡಾವಣೆಯಲ್ಲಿಯೂ ಸಾರ್ವಜನಿಕ ಬಳಕೆಗೆ ಇಂತಿಷ್ಟು ವಿಸ್ತೀರ್ಣದ...

  • ಸುರಪುರ: ಪ್ರವಾಸೋದ್ಯಮ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ತಾಪಂ ಅಧ್ಯಕ್ಷೆ ಶಾರದಾ...

  • ಶಹಾಪುರ: ನಗರದ ಪೂರ್ವ ದಿಕ್ಕಿಗೊಂದು ಮತ್ತು ಪಶ್ಚಿಮ ದಿಕ್ಕಿಗೊಂದು ಎರಡು ಐತಿಹಾಸಿಕ ಅಗಸಿಗಳಿಲ್ಲಿವೆ. ಪಶ್ಚಿಮ ದಿಕ್ಕಿನ ದಿಗ್ಗಿ ಅಗಸಿಯನ್ನು ಈಗಾಗಲೇ ದುರಸ್ತಿಗೊಳಿಸಲಾಗಿದೆ....

  • „ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ಮಧ್ಯವರ್ತಿಗಳ ತಪ್ಪಿಸಲು ಹಾಗೂ ಯೋಜನೆ ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಸುರಪುರ ಶಾಸಕ ನರಸಿಂಹನಾಯಕ(ರಾಜುಗೌಡ) ಕ್ಷೇತ್ರದಲ್ಲಿ...

ಹೊಸ ಸೇರ್ಪಡೆ