ವಕೀಲರ ವಿರುದ್ಧ ನೀಡಿದ ದೂರು ಕೈಬಿಡಲು ಆಗ್ರಹ
Team Udayavani, Jul 5, 2017, 11:13 AM IST
ಶಹಾಪುರ: ರಾಯಚೂರ ಜಿಲ್ಲೆಯ ದೇವದುರ್ಗದಲ್ಲಿ ಹಿರಿಯ ವಕೀಲರೊಬ್ಬರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಇಲ್ಲಿನ ವಕೀಲರು ಮಂಗಳವಾರ ಕಲಾಪ ಬಹಿಷ್ಕರಿಸಿ ನ್ಯಾಯಾಲಯ ಎದುರು ಪ್ರತಿಭಟನೆ ನಡೆಸಿದರು.
ದೇವದುರ್ಗ ತಾಲೂಕಿನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ವಕೀಲರ ಮೇಲೆ ಹಲ್ಲೆ ನಡೆಸಿರುವುದು. ಅಲ್ಲದೆ ಅವರ ಮೇಲೆ ಸುಳ್ಳು ದೂರು ದಾಖಲಿಸಿರುವುದು ಸರಿಯಲ್ಲ. ಪೊಲೀಸರು ಕೂಡಲೇ ಪರಾಮರ್ಶಿಸಿ
ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿರಿಯ ವಕೀಲರ ವಿರುದ್ಧ ನೀಡಿದ ದೂರು ಕೈಬಿಡಬೇಕು ಎಂದು ವಕೀಲರು ಆಗ್ರಹಿಸಿದರು.
ಒಬ್ಬ ವಕೀಲ ತನ್ನ ಕಕ್ಷಿದಾರರ ರಕ್ಷಣೆಗಾಗಿ ಅವರಿಗೆ ನ್ಯಾಯ ಒದಗಿಸುವುದಕ್ಕಾಗಿ ಶ್ರಮವಹಿಸುವುದು ಆತನ ಕರ್ತವ್ಯ. ಕೆಲವರು ವಕೀಲರ ಬಗ್ಗೆ ಅಸಡ್ಡೆ ಅಗೌರವ ತೋರುವುದು ಅವರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಮರೇಶ ದೇಸಾಯಿ,
ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಉಪಾಧ್ಯಕ್ಷ ಗುರು ದೇಶಪಾಂಡೆ, ಹಿರಿಯ ವಕೀಲರಾದ ಸಿ.ಟಿ.ದೇಸಾಯಿ, ಕೆ.ನಯೀಮಸಾಬ, ಮಲ್ಕಪ್ಪ, ಗೋಪಾಲ ವಕೀಲರು, ವಿಶ್ವನಾಥರಡ್ಡಿ ಪಾಟೀಲ್, ಸಾಲೋಮನ್ ಆಲೆಡ್, ಎ.ಎಸ್
.ನಾಯಕ ಸೇರಿದಂತೆ ಸಂತೋಷ ಸತ್ಯಂಪೇಟೆ, ಬಸಮ್ಮ ರಾಂಪೂರೆ, ಸಂತೋಷ ದೇಶಮುಖ, ಸತ್ಯಮ್ಮ, ವಿಶ್ವನಾಥ ಫಿರಂಗಿ, ಎಲ್.ಎಸ್. ಕುಲಕರ್ಣಿ, ಉಮೇಶ ಕುಲಕರ್ಣಿ, ಸಜ್ಜನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ