ಯಕ್ಷಿಂತಿ ಗ್ರಾಮದ 200 ಮನೆ ಸ್ಥಳಾಂತರಿಸಲು ಮನವಿ

Team Udayavani, Aug 13, 2019, 2:25 PM IST

ಶಹಾಪುರ: ಯಕ್ಷಿಂತಿ ಮನೆಗಳು ಜಲಾವೃತವಾಗಿವೆ.

ಶಹಾಪುರ: ತಾಲೂಕಿನ ಯಕ್ಷಿಂತಿ ಗ್ರಾಮದ ಸುಮಾರು ಎರಡು ನೂರು ಮನೆಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪ್ರವಾಹ ಬಂದಾಗೊಮ್ಮೆ ಕೃಷ್ಣಾ ನದಿ ನೀರಿನಿಂದ ಇಲ್ಲಿನ ಜನರ ಸ್ಥಿತಿ ಅಧೋಗತಿಗೆ ತಲುಪುತ್ತದೆ. ಗ್ರಾಮಸ್ಥರ ಬದುಕು ತಹಬಂದಿಗೆ ಬರಲು ಕನಿಷ್ಠ ಐದಾರು ತಿಂಗಳು ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಜನರಿದ್ದಾರೆ. ಪ್ರಸ್ತುತ ಪ್ರವಾಹದಿಂದ ಯಕ್ಷಿಂತಿ ಗ್ರಾಮದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮನೆಗಳೆಲ್ಲ ಕೃಷ್ಣಾ ನೀರಿನಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಜಾನುವಾರುಗಳು ಅನಾಥವಾಗಿ ತಿರುಗುತ್ತಿವೆ. ಕೆಲವೊಬ್ಬರು ಯಕ್ಷಿಂತಿ ಗ್ರಾಮಸ್ಥರನ್ನು ಹತ್ತಿಗೂಡೂರ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳು ಮಾತ್ರ ಗ್ರಾಮದಲ್ಲಿ ಅನಾಥವಾಗಿವೆ.

ಕೆಲವೊಬ್ಬರು ಜಾನುವಾರುಗಳನ್ನು ಗ್ರಾಮದಲ್ಲಿ ಬಿಟ್ಟು ಹೊಡೆದಿದ್ದು, ಇನ್ನೂ ಕೆಲವರು ಹಸು, ಎಮ್ಮೆಗಳನ್ನು ಟ್ರ್ಯಾಕ್ಟರ್‌ನಲ್ಲಿ ಹೊತ್ತೂಯ್ದಿದ್ದಾರೆ. ಕೆಲವು ಗ್ರಾಮದಲ್ಲಿ ಸಂಚರಿಸುತ್ತಿವೆ. ಪ್ರಾಣಿಗಳು ಸಮರ್ಪಕ ಆಹಾರವಿಲ್ಲದೆ ತಮ್ಮ ಮಾಲೀಕರು ಇಲ್ಲದೆ ನರಳುತ್ತಿವೆ. ಗ್ರಾಮದಲ್ಲಿ ಕನಿಷ್ಠ 50 ಹಸು ಕರುಗಳಿದ್ದ, ಅವುಗಳನ್ನು ತಾಲೂಕು ಆಡಳಿತ ರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುಮಾರು 200 ಮನೆಗಳು ಜಲಾವೃತವಾಗಿದ್ದು, ಜನರು ಮನೆಗಳಿಗೆ ಕೀಲಿ ಹಾಕಿಕೊಂಡು ಗ್ರಾಮ ತೊರೆದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾದಗಿರಿ: ಕೌಶಲ್ಯ ಅಭಿವೃದ್ಧಿ ಇಲಾಖೆ ವೆಬ್‌ಸೈಟ್‌ ಮೂಲಕ ನೂತನ ತರಬೇತಿ ಹಾಗೂ ಕೌಶಲ್ಯಗಳ ಕುರಿತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮರ್ಪಕ ಮಾಹಿತಿ ನೀಡುವಂತೆ...

  • ಯಾದಗಿರಿ: ಪ್ರಸ್ತುತ ಜನಗಣತಿಗೂ ಮತ್ತು 2011ರಲ್ಲಿ ಮಾಡಿದ ಜನಗಣತಿಗೂ ತಾಳೆಹಾಕಿ ನೋಡಿದಲ್ಲಿ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ನಿಖರ ಮಾಹಿತಿ ಸಂಗ್ರಹಿಸಬೇಕು...

  • ಯಾದಗಿರಿ: ಬಸ್‌ ಪ್ರಯಾಣ ಮತ್ತು ಅನಿಲ ದರ ಏರಿಕೆ ವಿರೋಧಿಸಿ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐಸಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ...

  • ಸೈದಾಪುರ: ಪ್ರಗತಿಗಾಗಿ ಮತ ನೀಡಿದ ಗುರುಮಠಕಲ್‌ ಮತಕ್ಷೇತ್ರದ ಜನರ ನಿರೀಕ್ಷೆಯಂತೆ ಸಮಗ್ರ ಅಭಿವೃದ್ಧಿಯೇ ತಮ್ಮ ಗುರಿ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು. ಕಡೇಚೂರಿನಲ್ಲಿ...

  • ಶಹಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನ ದೋರನಹಳ್ಳಿ ಬೆಟ್ಟದ ಮಹಾಂತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಾನುವಾರು ಜಾತ್ರೆ ನಡೆಯುತ್ತಿದೆ. ಜಾನುವಾರು ಜಾತ್ರೆಯಲ್ಲಿ...

ಹೊಸ ಸೇರ್ಪಡೆ