ಸ್ಕೌಟ್ಸ್‌ ಶಿಸ್ತಿನ ಸಂಸ್ಥೆ: ದುಪ್ಪಲ್ಲಿ

Team Udayavani, Feb 23, 2018, 4:51 PM IST

ಯಾದಗಿರಿ: ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಸ್ತು ಬದ್ಧಸ್ಥೆಯಾಗಿದ್ದು, ಮಕ್ಕಳಲ್ಲಿ ದೇಶಪ್ರೇಮ, ನಾಯಕತ್ವ ಗುಣ, ಶಿಸ್ತು ಮತ್ತು ಮಾನವೀಯ ಮೌಲ್ಯ ಬೆಳೆಸುತ್ತದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪ ದುಪ್ಪಲ್ಲಿ ಹೇಳಿದರು.

ನಗರದ ಸ್ಟೇಷನ್‌ ಬಜಾರ ಪ್ರೌಢಶಾಲೆಯಲ್ಲಿ ಸ್ಕೌಟ್ಸ್‌ ಸಂಸ್ಥಾಪಕ ಲಾರ್ಡ್‌ ಬೇಡನ್‌ ಪೋವೆಲ್‌ ಅವರ ಜನ್ಮದಿನ ಅಂಗವಾಗಿ ಆಚರಿಸಲಾಗುವ ಚಿಂತನೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಮಕ್ಕಳಲ್ಲಿ ಶಿಸ್ತು ಸಂಯಮ ಎಲ್ಲವನ್ನು ಕಲಿಸಿಕೊಡಬೇಕೆಂದಿದ್ದರೆ, ಮಕ್ಕಳಿಗೆ ಸ್ಕೌಟ್ಸ್‌ ನಂತಹ ಇನ್ನಷ್ಟು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಸ್ಕೌಟ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ಮಸಲಿಂಗಪ್ಪ ನಾಯಕ ಹುಲಕಲ್‌, ಚಿಂತನ ದಿನದ ಮಹತ್ವ ಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಿಕೊಟ್ಟರು. ಸ್ಕೌಟ್ಸ್‌ ಜಿಲ್ಲಾ ಮುಖ್ಯ ಆಯುಕ್ತ ಡಿ.ಎಂ. ಹೊಸಮನಿ ಜಿಲ್ಲಾ ಗೈಡ್ಸ್‌ ಆಯುಕ್ತೆ ನಾಗರತ್ನಾ ಮೂರ್ತಿ ಅನಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಮೇಲೆ ಜಿಲ್ಲಾ ಉಪಾಧ್ಯಕ್ಷ ಅನಿಲ್‌ ಕುಮಾರ, ಪ್ರಭಾರಿ ಮುಖ್ಯಗುರು ವಿವೇಕಾನಂದ, ಉರ್ದು ಮುಖ್ಯ ಗುರು ಮುಷ್ತಾಕ್‌ ಅಹ್ಮದ್‌, ರಾಜ್ಯ ಪ್ರತಿನಿಧಿ ಸಂಗೀತಾ ಹಪ್ಪಳ, ಬಸವರಾಜ ಇದ್ದರು. 

ಮಹಾತ್ಮಾ ಗಾಂಧಿ, ಡಾನ್‌ ಬಾಸ್ಕೊ ಸೇರಿದಂತೆ ವಿವಿಧ ಶಾಲೆಯ 100 ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಭಾಗವಹಿಸಿದ್ದರು. ಸ್ಕೌಟ್ಸ್‌ ಗೈಡ್ಸ್‌ ಮಕ್ಕಳು ಸಾಮೂಹಿಕ ಪ್ರಾರ್ಥನೆ ಗೈದರು. ಜಹೀರ್‌ ಹುಸೇನ್‌ ಸ್ವಾಗತಿಸಿದರು. ತಾಲೂಕು ಸ್ಕೌಟ್ಸ್‌ ಅಧ್ಯಕ್ಷ ಬಸರೆಡ್ಡಿ ನಿರೂಪಿಸಿದರು. ಸ್ಕೌಟ್ಸ್‌ ಮಾಸ್ಟರ್‌ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾದಗಿರಿ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು, ಅಧಿಕಾರಿಗಳು, ವೈದ್ಯರು, ಸರ್ವರು ಬದ್ಧತೆಯಿಂದ ತನು, ಮನದಿಂದ ದುಡಿಯೋಣ. ಈ ಮೂಲಕ ಯಾದಗಿರಿ ಜಿಲ್ಲೆಯನ್ನು...

  • ಯಾದಗಿರಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಂದ ಮಹತ್ವದ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವದ ಉಳಿವು ಮತ್ತು ರಾಷ್ಟ್ರದ ಭದ್ರತೆಗೆ 18 ವರ್ಷ ತುಂಬಿದ...

  • ಶಹಾಪುರ: ಕೃಷಿಕರ ಜೀವನಮಟ್ಟ ಸುಧಾರಿಸದ ಹೊರತು ಅಭಿವೃದ್ಧಿಗೆ ಅರ್ಥವಿಲ್ಲ. ಕೃಷಿಕರ ಶ್ರಮವಿದ್ದಲ್ಲಿ ಮಾತ್ರ ನಮ್ಮೆಲ್ಲರ ಹೊಟ್ಟೆ ತುಂಬಲು ಸಾಧ್ಯವಿದೆ. ಕೃಷಿಕರು...

  • ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರಾಜ್ಯವ್ಯಾಪಿ ಕಾರ್ಯ ನಿರ್ವಹಿಸುತ್ತಿದೆ. ಸಾಲ ಕೊಡುವುದೇ ಇದರ ಉದ್ದೇಶವಲ್ಲ. ಇದೊಂದು ಕಿರುಸಾಲ...

  • ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಫೆ.1ರಂದು ಬೆಳಗ್ಗೆ 11ಕ್ಕೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ...

ಹೊಸ ಸೇರ್ಪಡೆ