ಶರಣರ ವಿಚಾರಧಾರೆ ಬದುಕಿಗೆ ಸ್ಫೂರ್ತಿ


Team Udayavani, Dec 28, 2020, 4:26 PM IST

ಶರಣರ ವಿಚಾರಧಾರೆ ಬದುಕಿಗೆ ಸ್ಫೂರ್ತಿ

ಶಹಾಪುರ: ವೈಜ್ಞಾನಿಕ ವಿಚಾರಧಾರೆ ಹೊಂದಿದ ಶರಣ ಸಾಹಿತ್ಯ, ಶರಣ ಸಂಸ್ಕೃತಿಯ ಪ್ರತೀಕವಾದ ಕಾಯಕ,ನಿಷ್ಠೆ ಹಾಗೂ ಬಸವಾದಿ ಶರಣರ ತತ್ವಾದರ್ಶಗಳೇ ನನ್ನ ಬದುಕಿಗೆ ಸ್ಫೂರ್ತಿ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.

ನಗರದ ಕುಂಬಾರ ಓಣಿಯ ಕಾಯಕ ನಿಲಯದಲ್ಲಿ ಸಗರದ ಕಲಾ ನಿಕೇತನ ಟ್ರಸ್ಟ್‌ ವತಿಯಿಂದಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.ಬರೀ ಶರಣರ ಅನುಯಾಯಿ ಎಂದು ಮಾತಿಗೆ ಭಾಷಣದಲ್ಲಿ ಅಂದರೆ ಸಾಲದು. ಬದುಕಿನಲ್ಲಿ ಅದರಂತೆ ನಡೆದುಕೊಳ್ಳಬೇಕು. ಅಂದಾಗ ಮಾತ್ರಶರಣರಿಗೆ ಗೌರವ ಸಲ್ಲಿಸದಂತಾಗಲಿದೆ. ಬದುಕು ಸಹ ಸುಂದರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ,ಶಿವಣ್ಣ ಇಜೇರಿ ನೇರಾನೇರ ಮಾತನಾಡುವವ್ಯಕ್ತಿತ್ವ ಹೊಂದಿದವರು. ನಿಷ್ಟುರವಾದಿ. ಇದ್ದದ್ದನ್ನುಇದ್ದ ಹಾಗೇ ಹೇಳುವ ವ್ಯಕ್ತಿ. ಶರಣರ ನಡೆ-ನುಡಿ ಮೈಗೂಡಿಸಿಕೊಂಡು ಬೆಳೆದವರು. ಕಳೆದ 40ವರ್ಷದಿಂದ ಒಂದೇ ಅಂಗಡಿಯಲ್ಲಿ ಗುಮಾಸ್ತನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ. ಕಾಯಕದಲ್ಲಿ ಅವರಿಗಿರುವ ನಂಬಿಕೆ ವಿಶ್ವಾಸವೇ ಅವರನ್ನು ಇಲ್ಲಿವರೆಗೆ ತಂದಿದೆ ಎಂದರು.

ಹಿರಿಯ ಸಾಹಿತಿ ಡಾ| ಅಬ್ದುಲ್‌ ಕರೀಂ ಕನ್ಯಾಕೋಳೂರ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಉಪನ್ಯಾಸಕರಾದ ಡಾ|ರವೀಂದ್ರನಾಥ ಹೊಸ್ಮನಿ, ವಿಮರ್ಶಕರಾದ ಸಿ.ಎಸ್‌.ಭೀಮರಾಯ, ಪ್ರಾಂಶುಪಾಲ ಮಲ್ಲಿಕಾರ್ಜುನಆವಂಟಿ, ಶಿಕ್ಷಕ ಹಾಗೂ ಸಾಹಿತಿ ಪಂಚಾಕ್ಷರಯ್ಯಹಿರೇಮಠ ಅವರು ಕೇಳಿದ ಪ್ರಶ್ನೆಗಳಿಗೆ ಶಿವಣ್ಣಇಜೇರಿ ಅವರು ಸಮರ್ಪಕವಾಗಿ ಉತ್ತರಿಸಿದರು. ಈ ಸಂದರ್ಭದಲ್ಲಿ ಡಾ| ಗೋವಿಂದರಾಜ ಆಲ್ದಾಳ, ಕಲಾ ನಿಕೇತನ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಸಿನ್ನೂರ ಉಪಸ್ಥಿತರಿದ್ದರು. ಶಿವಪ್ರಸಾದ್‌ ಕರದಳ್ಳಿ ನಿರೂಪಿಸಿದರು. ಮಲ್ಲಿಕಾರ್ಜುನ ಸಜ್ಜನ್‌ ಸ್ವಾಗತಿಸಿದರು. ಮಹಾಂತೇಶ ಗಿಂಡಿ ವಂದಿಸಿದರು.

ಸಹಕಾರ ಸಂಘದ ವಾರ್ಷಿಕ ಸಭೆ  :

ಸುರಪುರ: ಶೇರುದಾರ ಸದಸ್ಯರು ಮತ್ತು ಸಾಲಗಾರರು ಸಹಕಾರಿ ಸಂಘಕ್ಕೆ ಶಕ್ತಿ. ಅವರು ತೆಗೆದುಕೊಂಡಿರುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಸಂಘಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ ಎಂದು ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ವಗ್ಗರ್‌ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಪಿಯು ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದಜೀವನಜ್ಯೋತಿ ಸಹಕಾರ ಸಂಘದಮೂರನೇ ವಾರ್ಷಿಕ ಮಹಾಸಭೆಯಲ್ಲಿಅವರು ಮಾತನಾಡಿ, ಕೆಲವೇ ಸದಸ್ಯರಸಹಕಾರದೊಂದಿಗೆ ಆರಂಭಿಸಿದ ಸಂಘ ಇಂದು 2,69,835 ಶೇರು ಬಂಡವಾಳಹೊಂದಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 1,74,950 ಆವರ್ತ ಠೇವಣಿಯೊಂದಿಗೆ ಪ್ರಸಕ್ತ ಸಾಲಿನಲ್ಲಿ 64,432 ನಿವ್ವಳ ಲಾಭ ಗಳಿಸಿದೆ. ಜನರ ವಿಶ್ವಾಸ ಗಳಿಸಿ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಸಾಗುವ ಮೂಲಕಬೃಹತ್ತಾಗಿ ಬೆಳೆಯುತ್ತಿರುವುದು ನೆಮ್ಮದಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಪನ್ಯಾಸಕ ವಿಜಯಕುಮಾರ ಬಣಗಾರ ಮತ್ತು ಕಾನೂನು ಸಲಹೆಗಾರ ಬಿ.ಕೆ. ದೇಸಾಯಿ ಮಾತನಾಡಿ, ಶ್ರಮಿಕರು ಮತ್ತು ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರಸ್ಥರಿಗೆಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಸಂಘತನ್ನ ಧ್ಯೇಯೋದ್ದೇಶದೊಂದಿಗೆ ಮುನ್ನಡೆಸಾಗುತ್ತಿರುವುದು ಸಂತಸ ತಂದಿದೆ. ಸಹಕಾರಿವಲಯದಲ್ಲಿ ಸಾಕಷ್ಟು ಸೌಲಭ್ಯಗಳಿಗೆ ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವೆಕಟೇಶ ಅಮ್ಮಾಪುರ ಮಾತನಾಡಿದರು. ನಿರ್ದೇಶಕ ಶಶಿಕುಮಾರ ಲಕ್ಕಿಮಾರಸಂಘದ ವಾರ್ಷಿಕ ವರದಿ ವಾಚನ ಮಾಡಿ ಅನುಮೋದನೆ ಪಡೆದರು. ನಿರ್ದೇಶಕರಾದಲಿಂಗಪ್ಪ ಹೂಗಾರ, ಮಲ್ಲಪ್ಪ ಕರೇಗಾರ, ಸುರೇಶ ಯಾದಗಿರಿ, ನಾಗಪ್ಪ ದೊಡ್ಮನಿ, ಶಿವರಾಜ ಜಯಶ್ರೀ ವೇದಿಕೆಯಲ್ಲಿದ್ದರು. ವಿಶ್ವರಾಧ್ಯ ಯಾದಗಿರಿ ಸ್ವಾಗತಿಸಿದರು. ದೇವಿಂದ್ರಪ್ಪ ದೇಶಪಾಂಡೆ ನಿರೂಪಿಸಿದರು. ಮಲ್ಲಪ್ಪ ಕರೇಗಾರ ವಂದಿಸಿದರು.

ಟಾಪ್ ನ್ಯೂಸ್

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

20-protest

ರೌಡಿ ಶೀಟರ್‌ ಬಂಧನಕ್ಕೆ ಆಗ್ರಹ

16-child

ಬಾಲ್ಯ ವಿವಾಹ-ದೇವದಾಸಿ ಪದ್ದತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಲು ನ್ಯಾ| ಬಿ. ವೀರಪ್ಪ ಸಲಹೆ

12-clean

ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ

10-water

ಗಿರಿನಗರ ಜನರಿಗೆ ಕುಡಿಯಲು ಚರಂಡಿ ನೀರೇ ಗತಿ!

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.