Udayavni Special

ಆರೇ ತಿಂಗಳಲ್ಲಿ ಕಿತ್ತೋದ ರಸ್ತೆ; 70 ಲಕ್ಷ ರೂ. ವೆಚ್ಚದ ಕಾಮಗಾರಿ


Team Udayavani, Jul 31, 2020, 7:30 AM IST

ಆರೇ ತಿಂಗಳಲ್ಲಿ ಕಿತ್ತೋದ ರಸ್ತೆ; 70 ಲಕ್ಷ ರೂ. ವೆಚ್ಚದ ಕಾಮಗಾರಿ

ದೇವದುರ್ಗ: ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್‌ ರಸ್ತೆ ಆರೇಳು ತಿಂಗಳಲ್ಲೇ ಕಿತ್ತು ಹೋಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ 70 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. 3.5 ಕಿಮೀ ರಸ್ತೆಗೆ ಲಕ್ಷಾಂತರ ರೂ. ಅನುದಾನ ಕಳಪೆ ಗುಣಮಟ್ಟದ ಕಾಮಗಾರಿ ಹಣ ಇದೀಗ ಪೋಲಾಗಿದೆ. ಎಲ್ಲೆಂದರಲ್ಲಿ ರಸ್ತೆ ಕಿತ್ತು ಹೋಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಎನಿಸಿದೆ. ಅಲ್ಲಲ್ಲಿ ಬಿದ್ದ ತೆಗ್ಗುಗಳಲ್ಲಿ ಎದ್ದುಬಿದ್ದು ಸಂಚಾರ ಮಾಡಬೇಕಾದಂತ ಸಂಕಷ್ಟ ಗ್ರಾಮಸ್ಥರಿಗೆ ಎದುರಾಗಿದೆ.

ಅಧಿಕಾರಿಗಳು ಮೌನ: ಕಳೆದ ಎರಡು ತಿಂಗಳ ಹಿಂದೆ ಕಳಪೆ ರಸ್ತೆ ಕಾಮಗಾರಿ ಎಲ್ಲೆಂದರಲ್ಲಿ ಕಿತ್ತು ಹೋದ ಹಿನ್ನೆಲೆ ಡಿ.ಕರಡಿಗುಡ್ಡ ಗ್ರಾಮಸ್ಥರೇ ರಸ್ತೆಗಿಳಿದು ಹೋರಾಟ ಕೈಗೊಂಡಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮಸ್ಥರ ಮಧ್ಯೆ ವಾಗ್ಧಾನ ನಡೆದಿತ್ತು. ಅಧಿಕಾರಿ ಎದುರಲ್ಲೇ ಕಳಪೆ ರಸ್ತೆ ಕೈಯಿಂದ ರಸ್ತೆ ಕಿತ್ತು ತೋರಿಸಿದ ಪ್ರಸಂಗ ಜರುಗಿತು. ಇಷ್ಟರಲೇ ಅವಾಂತರ
ಎದುರಾದರೂ ಮೇಲಧಿ ಕಾರಿಗಳು ಕ್ರಮವಹಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ.

ಶಾಸಕರ ಪರಿಶ್ರಮ: ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಪಡಿಸಲು ಸರಕಾರ ಮಟ್ಟದಲ್ಲಿ ಹಗಲು ರಾತ್ರಿ ಎನ್ನದೇ ಶಾಸಕರು ಪರಿಶ್ರಮ ಪಟ್ಟು ಅನುದಾನ ತರಲಾಗುತ್ತಿದೆ. ಟೆಂಡರ್‌ ಪಡೆದ ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ಮಾಡುವುದರಿಂದ ಮಾದರಿ ತಾಲೂಕು ಅಭಿವೃದ್ಧಿಗೆ ಕಪ್ಪುಚುಕ್ಕಿ ಎಂಬಂತಾಗಿದೆ.

ಮೂರುವರೆ ಕಿಮೀ 70 ಲಕ್ಷ: ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ  ಮೂರುವರೆ ಕಿಮೀ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ.ಅನುದಾನ ಮಂಜೂರಾಗಿದೆ. ಆರೇಳು ವರ್ಷಗಳ ಕಾಲ ಗುಣಮಟ್ಟದ ರಸ್ತೆ ನಿರ್ಮಿಸಲು ಗುತ್ತೆದಾರರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಳಪೆ ಗುಣಮಟ್ಟದ ರಸ್ತೆ ಆರೇಳು ತಿಂಗಳಲೇ ಕಿತ್ತು ಹೋಗಿದೆ. ಒಂದು ವರ್ಷ ಅವಧಿ ನಿರ್ವಹಣೆ ಜವಾಬ್ದಾರಿ ಅಲ್ಲಲ್ಲಿ ಕಿತ್ತುರುವ ರಸ್ತೆಗೆ ಡಾಂಬರ್‌ ಹಾಕದೇ ಬಿಟ್ಟಿರುವ ಹಿನ್ನೆಲೆ ಗ್ರಾಮಸ್ಥರು ಎದ್ದುಬಿದ್ದು ಸಂಚಾರ ಮಾಡಬೇಕಾದಂತ ಸಂಕಷ್ಟ ಬಂದೊದಗಿದೆ.

ಗ್ರಾಮಸ್ಥರು ಆಗ್ರಹ: ಡಿ.ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಗ್ರಾಪಂ ಅಧಿ ಕಾರಿಗಳು ಕೂಡಲೇ ಗಮನಹರಿಸಬೇಕು. ಬಿದ್ದಿರುವ ಗುಂಡಿಗಳಲ್ಲಿ ಮರಂ ಹಾಕಿ. ರಸ್ತೆಗೆ ಬಾಗಿರುವ ಜಾಲಿಗಿಡಗಳು ದುರಸ್ತಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ರಂಗಪ್ಪ, ಬಸವರಾಜ ಆಗ್ರಹಿಸಿದರು.

ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತಿದ್ದು, ಗಮನಕ್ಕಿದೆ. ಡಾಂಬರ್‌ ಹಾಕಿ ದುರಸ್ತಿ ಮಾಡಿಸುವಂತೆ ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ರಂಗಪ್ಪ ರಾಮದುರ್ಗ, ಪ್ರಭಾರಿ ಎಇಇ.

ದೇವದುರ್ಗ: ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತು ಹೋಗಿದೆ.

ನಾಗರಾಜ ತೇಲ್ಕರ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಳವಿಗೆ ಬಂದು ಮಹಿಳೆ ಕಿವಿ ಕತ್ತರಿಸಿದ ಖದೀಮರು

ಕಳವಿಗೆ ಬಂದು ಮಹಿಳೆಯ ಕಿವಿ ಕತ್ತರಿಸಿದ ಖದೀಮರು

IPL

IPL 2020: ಪಂಜಾಬ್-ಡೆಲ್ಲಿ ಫೈಟ್: ರಾಹುಲ್ ಪಡೆಗೆ 5 ವಿಕೆಟ್ ಗಳ ಗೆಲುವು

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

true-caller

ಕೋವಿಡ್ ಕಾಲದಲ್ಲಿ True caller ಬಳಕೆದಾರರ ಸಂಖ್ಯೆ ದ್ವಿಗುಣ: ಕಾರಣವೇನು ?

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yg-tdy-1

ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಸಮಿತಿ ಸಭೆ

4 ಲಕ್ಷ ಕ್ಯೂಸೆಕ್ ಗೆ ಏರಿದ ಒಳಹರಿವು: ಭೀಮಾ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ

4 ಲಕ್ಷ ಕ್ಯೂಸೆಕ್ ಗೆ ಏರಿದ ಒಳಹರಿವು: ಭೀಮಾ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹ ಭೀತಿ

yg-tdy-1

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಗಡುವು

yg-tdy-1

ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್‌ ಹರಿವು ಸಾಧ್ಯತೆ

yg-tdy-1

ಪ್ರವಾಹ ಇಳಿಮುಖ; ವಿಷ ಜಂತುಗಳ ಕಾಟ ಶುರು

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಕಳವಿಗೆ ಬಂದು ಮಹಿಳೆ ಕಿವಿ ಕತ್ತರಿಸಿದ ಖದೀಮರು

ಕಳವಿಗೆ ಬಂದು ಮಹಿಳೆಯ ಕಿವಿ ಕತ್ತರಿಸಿದ ಖದೀಮರು

IPL

IPL 2020: ಪಂಜಾಬ್-ಡೆಲ್ಲಿ ಫೈಟ್: ರಾಹುಲ್ ಪಡೆಗೆ 5 ವಿಕೆಟ್ ಗಳ ಗೆಲುವು

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.