ನೊಂದ ಹಿರಿಯ ಕಾಂಗ್ರೆಸ್ಸಿಗರು ಶೀಘ್ರ ಬಿಜೆಪಿಗೆ: ಮಾಲೀಕಯ್ಯ
Team Udayavani, Sep 20, 2018, 6:35 AM IST
ಯಾದಗಿರಿ: “ಆಪರೇಷನ್ ಕಮಲ’ಕ್ಕೆ ಬಿಜೆಪಿ ಕೈ ಹಾಕಿಲ್ಲ. ಕಾಂಗ್ರೆಸ್‌ನಲ್ಲಿನ ಹಿರಿಯರೇ ಸಾಕಷ್ಟು ತೊಂದರೆ ಅನುಭವಿಸಿ ಬಿಜೆಪಿ ಸೇರುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ. ಒಂದು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಮೈತ್ರಿ ಸರ್ಕಾರದ ಪತನ ಖಚಿತ. ಖರ್ಗೆ ಅವರನ್ನು ನಾನು ಮತ್ತು ಬಾಬೂರಾವ್ ಚಿಂಚನಸೂರ್ ಎರಡನೇ ಅಂಬೇಡ್ಕರ್ ಎಂದು ಕರೆಯುತ್ತಿದ್ದೆವು. ಆದರೆ, ಹಿರಿಯರಾಗಿ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯದೆ ಪುತ್ರ ವ್ಯಾಮೋಹ ತೋರಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಅಜಯಸಿಂಗ್ ಕೂಡ ತಂದೆ ಸ್ಥಾನದಲ್ಲಿ ಖರ್ಗೆ ಅವರನ್ನು ಕಂಡಿದ್ದರು. ಆದರೆ, ತಮ್ಮ ಪುತ್ರನಿಗೆ ಎಲ್ಲಿ ಅ ಧಿಕಾರ ಕೈ ತಪ್ಪುತ್ತದೋ ಎಂದು ಅವರನ್ನು ದೂರವಿಟ್ಟಿದ್ದಾರೆ ಎಂದರು.