ಪಿಒಪಿ ಬಳಕೆಗೆ ಮೂರ್ತಿ ತಯಾರಕರ ಒಲವು

Team Udayavani, Sep 8, 2018, 3:58 PM IST

ಯಾದಗಿರಿ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮೂರ್ತಿ ತಯಾರಿಸುವಿಕೆಯನ್ನು ನಿಷೇಧಿಸಿಲಾಗಿದ್ದರೂ ತಯಾರಕರು ಮಾತ್ರ ಪಿಒಪಿ ಬಳಕೆಯಿಂದ ಹಿಂದಕ್ಕೆ ಸರಿದಿಲ್ಲ. ಯಾಕೆ ಹೀಗೆ ಎಂದು ಮೂರ್ತಿ ತಯಾರಿಕೆ ಮಾಡುವರನ್ನು ಪ್ರಶ್ನಿಸಿದರೆ, ಶೇ. 70ರಷ್ಟು ಮಣ್ಣಿನ ಅಂಶದ ಜೊತೆಗೆ ಪಿಒಪಿ ಬಳಕೆ ಅನಿವಾರ್ಯವಾಗಿದೆ. ಆದ್ದರಿಂದ ಬಳಸುತ್ತಿದ್ದೇವೆ. ಮುಂದಿನ ವರ್ಷ ಸಂಪೂರ್ಣ ಮಣ್ಣಿನಲ್ಲೇ ಗಣಪತಿ ಮೂರ್ತಿ ತಯಾರಿಕೆಗೆ ಪ್ರಯತ್ನಿಸುತ್ತೇವೆ ಎನ್ನುತ್ತಿದ್ದಾರೆ. 

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಾದ ವಿಗ್ರಹಗಳು ನೀರಿನಲ್ಲಿ ಬೇಗನೇ ಕರಗುವುದಿಲ್ಲ. ಇದರಿಂದ ನೀರಿನ ಗುಣಮಟ್ಟ ಹಾಳಾಗಿ ನಾಗರಿಕರು, ಪ್ರಾಣಿಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ವಿಗ್ರಹ ತಯಾರಿಕೆ, ಮಾರಾಟವನ್ನು ನಿಷೇಧಿಸಿದೆ. ಆದರೆ ಈ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎನ್ನುವಂತೆ ಭಾಸವಾಗುತ್ತಿದೆ.

ಈ ಬಾರಿ ಸೊಲ್ಲಾಪುರದ ಗಣೇಶ ವಿಗ್ರಹ ತಯಾರಕರೊಬ್ಬರು ಮುಂಬೈ ಮಣ್ಣಿನಿಂದ ತಯಾರಿಸಿದ, ಹಾನಿಕಾರಕವಲ್ಲದ ಬಣ್ಣ ಹಚ್ಚಿರುವ ಗಣೇಶ ಮೂರ್ತಿಗಳನ್ನು ಯಾದಗಿರಿಗೆ ಮಾರಾಟಕ್ಕೆ ತಂದಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ ಎದುರಿನ ಕಟ್ಟಡ ಹಾಗೂ ನಗರದ ಹೊಸ್ಸಳ್ಳಿ ಕ್ರಾಸ್‌ ಹತ್ತಿರ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿರಿಸಲಾಗಿದೆ. 

ಜಿಲ್ಲೆಯ ವಿವಿಧೆಡೆ ಪರಿಸರ ಜಾಗೃತಿ ಮೂಡಿಸದಿರುವುದು ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ತಡೆಯಿಲ್ಲದಂತಾಗಿದೆ. ಪ್ರಮುಖವಾಗಿ ಪಿಒಪಿ ಮೂರ್ತಿಗಳು ಕಡಿಮೆ ತೂಕ ಮತ್ತು ಕಡಿಮೆ ಬೆಲೆಗೆ ದೊರೆಯುವುದರಿಂದ ಹೆಚ್ಚಿನ ಜನರು
ಖರೀದಿಸುತ್ತಿದ್ದಾರೆ. 

ಕಡಿಮೆ ತೂಕದ ವಿಗ್ರಹವನ್ನು 2ರಿಂದ 3 ಜನ ಅಡೆತಡೆ ಇಲ್ಲದೆ ಎತ್ತಲು ಸಾಧ್ಯವಾಗುತ್ತದೆ. ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಹೆಚ್ಚಿನ ತೂಕ ಹೊಂದಿರುವುದರಿಂದ ವಿಗ್ರಹ ವಿಸರ್ಜನೆ ವೇಳೆ ಸಾಕಷ್ಟು ಜನರು ಬೇಕಾಗುತ್ತದೆ. ಹೀಗಾಗಿ
ಅನಿವಾರ್ಯವಾಗಿ ಪಿಒಪಿ ವಿಗ್ರಹಗಳನ್ನೇ ಅವಲಂಬಿಸುವಂತೆ ಆಗಿದೆ ಎನ್ನುತ್ತಾರೆ ಗಣೇಶ ಪ್ರತಿಷ್ಠಾಪನೆ ಮಂಡಳಿ ಪ್ರಮುಖರು. 

ಪ್ರಸಕ್ತ ವರ್ಷ ಯಾದಗಿರಿಯಲ್ಲಿ ಮುಂಬೈ ಮಣ್ಣಿನಿಂದ ತಯಾರಿಸಿರುವ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದು, ಪಿಒಪಿ ವಿಗ್ರಹಗಳನ್ನು ತಯಾರಿಸುವುದನ್ನು ಕೈ ಬಿಟ್ಟಿದ್ದೇವೆ. ಈ ಮೂರ್ತಿಗಳು ಹೆಚ್ಚಿನ ತೂಕದ್ದಾಗಿವೆ. ನೀರಿನಲ್ಲಿ ವಿಸರ್ಜಿಸಿದ ಬಳಿಕ ಒಂದು ವಾರದಲ್ಲಿ ಕರಗುತ್ತವೆ.
 ರವಿ ಕುಂಬಾರ, ಖಜೂರಿ, ವಿಗ್ರಹ ತಯಾರಕರು.

ಪರಿಸರ ಮಾಲಿನ್ಯವಾಗದಂತ ಮೂರ್ತಿಗಳ ಪ್ರತಿಷ್ಠಾಪನೆಗೆ ನಗರದಲ್ಲಿ ಜಾಗೃತಿ ಮೂಡಿಸಲಾಗಿದೆ. ಪಿಒಪಿ ಬಳಕೆ ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲವಾದರೂ ಇಂತಹ ವಿಗ್ರಹಗಳ ವಿಸರ್ಜನೆಗೆ ದೊಡ್ಡ ಕೆರೆಯ ಹತ್ತಿರ ಪ್ರತ್ಯೇಕ ಕೃತಕ ಹೊಂಡ ನಿರ್ಮಿಸುತ್ತಿದ್ದೇವೆ.
 ಸಂಗಪ್ಪ ಉಪಾಸೆ, ಪೌರಾಯುಕ್ತ ನಗರಸಭೆ

 ಅನೀಲ ಬಸೂದೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳೂ ಇದೀಗ ಕೋವಿಡ್ 19 ಭೀತಿಯಿಂದಾಗಿ...

  • ಯಾದಗಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದ ಮೊದಲು ಅನಗತ್ಯವಾಗಿ ತಿರುಗುತ್ತಿದ್ದ...

  • ಯಾದಗಿರಿ: ಕೋವಿಡ್ 19 ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರೀಕ್ಷೆ ಮಾಡಲು ಸಂಗ್ರಹಿಸಿದ ಒಟ್ಟು 3 ವ್ಯಕ್ತಿಗಳ ಮಾದರಿಗಳಲ್ಲಿ 2 ನೆಗೆಟಿವ್‌ ಫಲಿತಾಂಶ ಬಂದಿವೆ...

  • ಹುಣಸಗಿ: ಕೊರೊನಾ ವೈರಸ್‌ಗೆ ನಿಯಂತ್ರಣಕ್ಕೆ ಮನೆಯಿಂದ ಹೊರಗೆ ಬಾರದೆ ಮುಂಜಾಗ್ರತೆ ಪಾಲಿಸುವುದೇ ದೊಡ್ಡ ಔಷಧಿಯಾಗಿದೆ ಎಂದು ಪಿಎಸ್‌ಐ ಜನಗೌಡ ಹೇಳಿದರು. ಪಟ್ಟಣದ...

  • ಶಹಾಪುರ: ಸಗರ ನಾಡಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ತಾಲೂಕಿನ ಬಲಭೀಮೇಶ್ವರ ದೇವಸ್ಥಾನ ಸೇರಿದಂತೆ ದಿಗ್ಗಿ ಸಂಗಮೇಶ್ವರ ಮತ್ತು ನಗರದ ಚರಬಸವೇಶ್ವರ ದೇವಸ್ಥಾನಗಳಲ್ಲಿ...

ಹೊಸ ಸೇರ್ಪಡೆ