- Saturday 14 Dec 2019
ಸೌಕರ್ಯಗಳಿಲ್ಲದೆ ವಾಗಣಗೇರಾ ಒಣ ಒಣ
•ಕುಡಿಯುವ ನೀರಿಗೆ ಹಾಹಾಕಾರ•ಅಧಿಕಾರಿ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
Team Udayavani, Jul 9, 2019, 12:10 PM IST
ಸುರಪುರ: ವಾಗಣಗೇರಾ ಗ್ರಾಮದ ಕಿಲ್ಲಾ ಮೇಲೆ ನಿರ್ಮಿಸಿರುವ ನೀರಿನ ಟ್ಯಾಂಕ್.
ಸುರಪುರ: ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀಟರ್ ಅಂತರದಲ್ಲಿರುವ ವಾಗಣಗೇರಾ ಗ್ರಾಮದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಉಂಟಗಿದೆ.
ಗಬ್ಬೆದ್ದು ನಾರುತಿರುವ ಚರಂಡಿಗಳು, ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುವ ಕೊಳಚೆ ನೀರು. ಮನೆಗಳ ಪಕ್ಕದಲ್ಲಿಯೇ ತಿಪ್ಪೆ ಗುಂಡಿ, ಕುಡಿಯುವ ನೀರಿಗೂ ಜನರ ಪರದಾಟ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.
ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿವೆ. 6000 ಸಾವಿರಕ್ಕೂ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ. 8 ಜನ ಗ್ರಾಪಂ ಸದಸ್ಯರಿದ್ದು, ಓರ್ವ ತಾಪಂ ಸದಸ್ಯನಿದ್ದು, ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಕಚೇರಿ ಮತ್ತು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
2014-15ರಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ಟ್ಯಾಂಕ್ ಸಂಪೂರ್ಣ ಸೋರುತ್ತಿದೆ. ಹೀಗಾಗಿ ಇದುವರೆಗೂ ಟ್ಯಾಂಕ್‌ಗೆ ನೀರು ಹರಿಸಿಲ್ಲ. ಗುತ್ತಿಗೆದಾರರು ಪೈಪ್‌ಲೈನ್ ಕಾಮಗಾರಿ ಅಪೂರ್ಣಗೊಳಿಸಿ ಬಿಲ್ ಎತ್ತಿ ಹಾಕಿದ್ದಾರೆ. ಸರಕಾರದ ಅನುದಾನ ಅನಗತ್ಯ ಪೋಲು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಜನ ಸೇರಿ ತಾಲೂಕು ಪಂಚಾಯಿತಿ ಕಚೇರಿಗೆ ಎರಡು ಬಾರಿ ಮುತ್ತಿಗೆ ಹಾಕಿ ಖಾಲಿ ಕೊಡಗಳ ಪ್ರದರ್ಶನ ಮಾಡಿದ್ದೇವೆ. ಸಮಸ್ಯೆ ಬಗೆಹರಿಸುವಂತೆ ಶಾಸಕರು ಗ್ರಾಮೀಣ ನೀರು ಸರಬರಾಜು ಇಲಾಖೆಯವರಿಗೆ ತಾಕೀತು ಮಾಡಿದ್ದಾರೆ. ಆದರೆ ಇಲಾಖೆ ಎಇಇ ಹಣಮಂತಪ್ಪ ಅಂಬ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ. ಶಾಸಕರ ಮಾತಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ನೀರಿನ ಸಮಸ್ಯೆ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.
ನೀರಿಗಾಗಿ ಜಮೀನುಗಳತ್ತ ಲಗ್ಗೆ:
ಘಟಕಕ್ಕಿಲ್ಲ ಉದ್ಘಾಟನೆ ಭಾಗ್ಯ:
ಈ ವಿಭಾಗದಿಂದ ಇನ್ನಷ್ಟು
-
ಕಕ್ಕೇರಾ: ಪಟ್ಟಣದಲ್ಲಿರುವ ಬಸ್ ನಿಲ್ದಾಣ ಹಾಳು ಕೊಂಪೆಯಂತಾಗಿದ್ದು, ಇದ್ದೂ ಇಲ್ಲದಂತಾಗಿದೆ. ಪುರಸಭೆ ಕೇಂದ್ರ ಹೊಂದಿರುವ ಪಟ್ಟಣಕ್ಕೆ ಅಗತ್ಯ ತಕ್ಕಂತೆ ಬಸ್...
-
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಗ್ರಾಮೀಣ ಪೊಲೀಸ್ ಠಾಣೆ, ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ...
-
ಸುರಪುರ: ಮಕ್ಕಳ ಕಲಿಕೆ ಅಭಿವೃದ್ಧಿಗೆ ಶೈಕ್ಷಣಿಕ ಮೇಳಗಳು ಹೆಚ್ಚು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಹೇಳಿದರು. ನಗರದ ಖುರೇಶಿ...
-
ಯಾದಗಿರಿ: ಕೇಂದ್ರ ಸರ್ಕಾರದ ನೀತಿ ಆಯೋಗ ಗುರುತಿಸಿದ ಮಹತ್ವಾಕಾಂಕ್ಷೆ ಜಿಲ್ಲೆಗಳ ರ್ಯಾಂಕಿಂಗ್ನಲ್ಲಿ ಯಾದಗಿರಿ ಜಿಲ್ಲೆ ಸೆಪ್ಟೆಂಬರ್ ತಿಂಗಳಲ್ಲಿದ್ದ ಒಟ್ಟಾರೆ...
-
ಅನೀಲ ಬಸೂದೆ ಯಾದಗಿರಿ: ಜಿಲ್ಲೆಯ ಬೇಕರಿ, ಹೋಟೆಲ್, ರಸ್ತೆ ಬದಿ ಮಳಿಗೆಯಲ್ಲಿ ಮಾರಾಟ ಮಾಡಲಾಗುವ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ...
ಹೊಸ ಸೇರ್ಪಡೆ
-
ಬೆಂಗಳೂರು: ಸರ್ಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ...
-
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಠ ಹಿಡಿದು ಸರ್ಕಾರ ರಚಿಸಿ, ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಗೆಲ್ಲಿಸಿಕೊಂಡು ನೆಮ್ಮದಿಯ ನಿಟ್ಟುಸಿರು...
-
ಬೆಂಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಆಟದ ಮೈದಾನಗಳಿದ್ದಂತೆ ವಾತಾವರಣ ಸೃಷ್ಟಿಸಿ, ಭಯ, ಖನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ...
-
ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬುಧ ವಾರ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ (ಗಲ್ಲು) ಶಿಕ್ಷೆ ವಿ ಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು...
-
ಬೆಂಗಳೂರು: ಹೊಸ ಶಾಸಕರ ಬೆಂಬಲಿ ಗರಿಗೆ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಉಪಚುನಾವಣೆ ಕಾರ್ಯ...