ಕೋವಿಡ್‌ ಕೇಂದ್ರ ಸೋಂಕಿತರ ಸಂಜೀವಿನಿ


Team Udayavani, May 21, 2021, 9:23 PM IST

21-29

„ಸಿದ್ಧಯ್ಯಸ್ವಾಮಿ ಕುಕುನೂರು

ರಾಯಚೂರು: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕಳೆದ ಬಾರಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸಾವಿರಕ್ಕಿಂತ ಅ ಧಿಕ ಬೆಡ್‌ಗಳ ವ್ಯವಸ್ಥೆಯಾಗಿದ್ದರೆ; ಈ ಬಾರಿ ಜಿಲ್ಲಾಡಳಿತ ಮೂರು ಸಾವಿರಕ್ಕೂ ಅಧಿ ಕ ಬೆಡ್‌ ಗಳ ವ್ಯವಸ್ಥೆ ಮಾಡಿಕೊಂಡಿದೆ. ಆ ಮೂಲಕ ಬೆಡ್‌ಗಳ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಸೋಂಕಿನ ತೀವ್ರತೆ ಕಳೆದ ಬಾರಿಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಜಿಲ್ಲೆಯಲ್ಲಿ 2ನೇ ಅಲೆ ಶುರುವಾಗುತ್ತಿದ್ದಂತೆ ಜಿಲ್ಲಾಡಳಿತ ಕೂಡ ಯುದೊœàಪಾದಿಯಲ್ಲಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಒತ್ತು ನೀಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸಾವು ನೋವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಕಳೆದ ವಾರ ಒಂದೇ ದಿನ ಒಂದು ಸಾವಿರಕ್ಕೂ ಅಧಿ ಕ ಪಾಸಿಟಿವ್‌ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಇದರಿಂದ 2ನೇ ಅಲೆಯನ್ನು ಸಮರ್ಥವಾಗಿ ಹಿಮ್ಮೆಟ್ಟಲು ಎಲ್ಲೆಡೆ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಪುನಾರಂಭಿಸಿದ್ದಲ್ಲದೇ, ಬೆಡ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ವಸತಿ ನಿಲಯಗಳೇ ಬಳಕೆ: ಕಳೆದ ವರ್ಷ ರಾಯಚೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ 200 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸಿದ್ಧ ಮಾಡಿಕೊಳ್ಳಲಾಗಿತ್ತು. ತಾಲೂಕು ಕೇಂದ್ರಗಳಲ್ಲಿ 200 ಬೆಡ್‌ಗಳಿದ್ದರೂ ಹೆಚ್ಚಿನ ಜನ ಆಗಮಿಸರಲಿಲ್ಲ. ಕೊರೊನಾ ತೀವ್ರತೆ ಕಡಿಮೆಯಾದಂತೆಲ್ಲ ಅವುಗಳನ್ನು ಕ್ರಮೇಣ ಮುಚ್ಚಲಾಯಿತು. ಜಿಲ್ಲೆಯಲ್ಲಿ ಬಹುತೇಕ ವಸತಿ ನಿಲಯಗಳನ್ನೇ ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಬಳಿಸಿಕೊಳ್ಳಲಾಗುತ್ತಿದೆ.

ಮೊರಾರ್ಜಿ ದೇಸಾಯಿ, ಅಲ್ಪಸಂಖ್ಯಾತರ ವಸತಿ ನಿಲಯಗಳು, ಬಿಸಿಎಂ ಹಾಸ್ಟೆಲ್‌ಗ‌ಳು ಸೇರಿದಂತೆ ವಿವಿಧ ವಸತಿ ನಿಲಯಗಳನ್ನು ಬಳಸಿಕೊಳ್ಳಲಾಗಿದೆ. ಮೊದಲನೇ ಅಲೆ ಸಂಪೂರ್ಣ ಕಡಿಮೆಯಾದಾಗ ಬಹುತೇಕ ವಸತಿ ನಿಲಯಗಳನ್ನು ಮತ್ತೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬಿಟ್ಟು ಕೊಡಲಾಗಿತ್ತು. ಆದರೆ, 2ನೇ ಅಲೆ ಶುರುವಾಗುತ್ತಿದ್ದಂತೆ ಮತ್ತೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನಾಗಿ ಪರಿವರ್ತಿಸಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಬೆಡ್‌?: ರಾಯಚೂರು ಸೇರಿದಂತೆ ಜಿಲ್ಲೆಯಲ್ಲಿ 7 ತಾಲೂಕುಗಳಿದ್ದು, ಈ ಬಾರಿ ಎಲ್ಲ ಕಡೆ ಕೋವಿಡ್‌ ಕೇಂದ್ರ ಆರಂಭಿಸಲಾಗಿದೆ. ರಾಯಚೂರು, ಮಾನ್ವಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ ಕೇಂದ್ರ ಸ್ಥಾನಗಳಲ್ಲಿ 500 ಬೆಡ್‌ಗಳ ಕೇರ್‌ ಸೆಂಟರ್‌ ತೆರೆಯಲಾಗಿದೆ. ಕಳೆದ ಬಾರಿ ಮಸ್ಕಿ, ಸಿರವಾರದಲ್ಲಿ ಕೋವಿಡ್‌ ಕೇಂದ್ರಗಳನ್ನು ತೆರೆದಿರಲಿಲ್ಲ. ಈ ಬಾರಿ ತಲಾ 100 ಬೆಡ್‌ಗಳ ಕೇಂದ್ರಗಳನ್ನು ಆರಂಭಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಮೂರು ವಸತಿ ನಿಲಯಗಳನ್ನು ಯರಮರಸ್‌ ಬಳಿ ಕಳೆದ ಬಾರಿಯಂತೆ ಮತ್ತೆ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. ಚಂದ್ರಬಂಡಾ ಬಳಿ 250 ಬೆಡ್‌ಗಳ ಕೇಂದ್ರ ಸಿದ್ಧಗೊಂಡಿದ್ದು, ಅಗತ್ಯ ಬಿದ್ದರೆ ಬಳಸಿಕೊಳ್ಳುವುದಾಗಿ ಅ ಧಿಕಾರಿಗಳು ತಿಳಿಸುತ್ತಾರೆ.

ಗುಣಮುಖರ ಸಂಖ್ಯೆಯಲ್ಲೂ ಹೆಚ್ಚಳ: ಕೊರೊನಾ ಪಾಸಿಟಿವ್‌ ಬಂದ ಮಾತ್ರಕ್ಕೆ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದೇನಿಲ್ಲ. ಅನುಕೂಲಕರ ವಾತಾವರಣ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಇಲ್ಲವೇ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 16,565 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದರೆ ಅದರಲ್ಲಿ 14,711ಕ್ಕೂ ಅಧಿ ಕ ಸೋಂಕಿತರು ವಿವಿಧ ಕೋವಿಡ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗಿದ್ದರು.

ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿನಿಂದ 159 ಜನ ಮೃತಪಟ್ಟಿದ್ದರು. 2ನೇ ಅಲೆಯಲ್ಲಿ ಕೇವಲ ಎರಡೇ ತಿಂಗಳಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 32,668 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, 25,519 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಸೋಂಕಿನಿಂದ 227 ಜನ ಸಾವಿಗೀಡಾಗಿದ್ದಾರೆ.

ಸೋಂಕಿತರ ಸಂಪರ್ಕ ಕಡಿತಗೊಳಿಸಲು ಹೋಮ್‌ ಐಸೊಲೇಶನ್‌ಗೆ ಒಳಗಾದವರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 6900ಕ್ಕೂ ಅಧಿ ಕ ಸಕ್ರಿಯ ಪ್ರಕರಗಣಳಿದ್ದು, ಅವರಲ್ಲಿ ತೀವ್ರತರ ಸೋಂಕಿನಿಂದ ಬಳಲುವವರನ್ನು ಆಸ್ಪತ್ರೆಗೆ, ರೋಗದ ಲಕ್ಷಣಗಳಿರುವವರನ್ನು ಕೋವಿಡ್‌ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಶುರುವಾಗಲಿದೆ ಎನ್ನುತ್ತಾರೆ ಅ ಧಿಕಾರಿಗಳು.

ಟಾಪ್ ನ್ಯೂಸ್

1-asdadad

ಜಮ್ಮುವಿನ ಹೆದ್ದಾರಿಯಲ್ಲಿ ಸುರಂಗ ಕುಸಿತ : 9 ಮಂದಿ ಅವಶೇಷಗಳ ಅಡಿ ; ರಕ್ಷಣಾ ಕಾರ್ಯ

CM-@-2

ಎಂಟು ವಾರದಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ನಿರ್ದೇಶನ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31  ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

cm-bommai

ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

cm-@-3

ಸಿಎಂ ದಾವೋಸ್ ಪ್ರವಾಸ ಮೊಟಕು?; ಇಂದು ದಿಲ್ಲಿಗೆ ಹಠಾತ್ ಭೇಟಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ  ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

ಸೈದಾಪುರ: ಯಾದಗಿರಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿಮರ್ಶಳಿಗೆ ಜಿಲ್ಲಾಧಿಕಾರಿಯಾಗುವ ಆಸೆ

19drinking-water

ಹತ್ತಿಗೂಡೂರಲ್ಲಿ ನೀರಿಗಾಗಿ ಹಾಹಾಕಾರ

17water

ಶುದ್ಧ ನೀರಿಗಾಗಿ ಜನರ ಪರದಾಟ

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

15education

ಗುಣಮಟ್ಟ ಶಿಕ್ಷಣಕ್ಕೆ ಮೊದಲಾದ್ಯತೆ: ಪಾಟೀಲ್

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

1-asdadad

ಜಮ್ಮುವಿನ ಹೆದ್ದಾರಿಯಲ್ಲಿ ಸುರಂಗ ಕುಸಿತ : 9 ಮಂದಿ ಅವಶೇಷಗಳ ಅಡಿ ; ರಕ್ಷಣಾ ಕಾರ್ಯ

CM-@-2

ಎಂಟು ವಾರದಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ನಿರ್ದೇಶನ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

10

ಸವಾಲಿನ ಪಾತ್ರದಲ್ಲಿ ಮಯೂರಿ : ಅಂಧ ಪಾತ್ರದ ಮೇಲೆ ಚೆಂದದ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.