ಕನಸಾಗಿಯೇ ಉಳಿದ ಪಲ್ಲಿಗಳ ಕನ್ನಡೀಕರಣ

ಕನ್ನಡ ಜಾಗೃತಿ ಮರೆತ ಜಿಲ್ಲಾಡಳಿತ 14 ತಿಂಗಳು ಕಳೆದರೂ ನಡೆದಿಲ್ಲ ಸಭೆ

Team Udayavani, Jan 8, 2020, 12:14 PM IST

8-January-8

ಯಾದಗಿರಿ: ಜಿಲ್ಲೆಯಲ್ಲಿ ಸಮರ್ಪಕ ಕನ್ನಡ ಅನುಷ್ಠಾನಗೊಳಿಸಬೇಕಿದ್ದ ಕನ್ನಡ ಜಾಗೃತಿ ಸಮಿತಿ ಕಳೆದ 14 ತಿಂಗಳಿನಿಂದ ಸಭೆ ನಡೆಯದಿರುವುದು ಜಿಲ್ಲಾಡಳಿತ ಕನ್ನಡ ಜಾಗೃತಿಯನ್ನೇ ಮರೆಯಿತೇ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಪಲ್ಲಿ ಎಂದಿರುವ ಹೆಸರನ್ನು ಹಳ್ಳಿ ಎಂದು ಕನ್ನಡೀಕರಣಗೊಳಿಸುವುದು ಇಲ್ಲವೇ ಮರು ನಾಮಕರಣ ಮಾಡುವಂತೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಗಡಿ ಭಾಗದಲ್ಲಿ ಮಡೇಪಲ್ಲಿ, ಪರಮೇಶಪಲ್ಲಿ, ಎಡೇಪಲ್ಲಿ, ಮುಸ್ಲೇಪಲ್ಲಿ ಹೀಗೆ ಗ್ರಾಮಗಳ ಹೆಸರು ಪಲ್ಲಿಗಳು ಎಂದಿವೆ. ಇವುಗಳನ್ನು ಕನ್ನಡೀಕರಣ ಮಾಡುವುದಕ್ಕೆ ಜಿಲ್ಲಾಡಳಿತಕ್ಕೆ ಕಳೆದ 2 ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರದ ಗಮನಕ್ಕೆ ತರಲಾಗಿದೆಯೋ ಇಲ್ಲವೋ ಎನ್ನುವುದೇ ಗೊತ್ತಾಗಿಲ್ಲ ಎನ್ನುತ್ತಾರೆ ಕನ್ನಡ ಪರ ಸಂಘಟನೆ ಪ್ರಮುಖರು.

ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆ 2018ರ ಅಕ್ಟೋಬರ್‌ 5ರಂದು ನಡೆದಿತ್ತು. 14 ತಿಂಗಳು ಗತಿಸಿದರೂ ಮತ್ತೆ ಸಭೆ ನಡೆದಿಲ್ಲ. ಇದರಿಂದ ಸಮಿತಿ ಸದಸ್ಯರು ಬೇಸರವ್ಯಕ್ತಪಡಿಸಿದ್ದು, ಆಗ ನಡೆದ ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ಸಾಕಷ್ಟು ಹಳ್ಳಿಗಳಿಗೆ ಕೊನೆಯಲ್ಲಿ ಪಲ್ಲಿ ಎಂಬ ಹೆಸರಿನಲ್ಲಿಯೇ ತೆಲುಗು ಪ್ರಭಾವವಿದೆ.

ಶೀಘ್ರವೇ ಪಲ್ಲಿಗಳನ್ನು ಹಳ್ಳಿಗಳಾಗಿ ಪರಿರ್ವತಿಸಿ ಕನ್ನಡೀಕರಣಗೊಳಿಸಬೇಕು ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ| ಶರಣು ಗದ್ದುಗೆ ಒತ್ತಾಯಿಸಿದ್ದರು.

ಗಡಿ ಭಾಗದ ಶಾಲೆಗಳಿಗೆ ಮೊದಲು ಕನ್ನಡ ಪುಸ್ತಕಗಳನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು. ಸಿಬಿಎಸ್‌ಸಿ ಮತ್ತು ಐಸಿಎಸ್‌ ಪಠ್ಯಕ್ರಮದಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಳವಡಿಸಬೇಕು. ಡಾ| ಸರೋಜಿನಿ ಮಹಿಷಿ ವರದಿ ಅನ್ವಯ ಎಲ್ಲ ಸರ್ಕಾರಿ-ಖಾಸಗಿ ಸಂಸ್ಥೆಗಳ ಕಾರ್ಖಾನೆ, ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬಳಕೆ ಸಮರ್ಪಕ ಅನುಷ್ಠಾನ ಆಗುತ್ತಿರುವ ಮತ್ತು ಆಗದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಿತಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕನ್ನಡ ಭಾಷೆ, ನೆಲ ಕುರಿತು ಪ್ರತಿ ಮಾಹೆ ಒಂದು ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕನ್ನಡ ಜಾಗೃತಿ ಸಮಾವೇಶ ಹಾಗೂ ಇನ್ನಿತರ ಕನ್ನಡಪರ ಕಾರ್ಯಕ್ರಮಗಳನ್ನು ಕಾಲೇಜು ಮತ್ತು ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ಏರ್ಪಡಿಸುವ ಕುರಿತು ಚರ್ಚೆಯಾಗಿತ್ತು.  ಆ ಚರ್ಚೆ ಕಾಗದದಲ್ಲಿಯೇ ಉಳಿದಿದೆ ಹೊರತು ಅನುಷ್ಠಾನವಾಗಿಲ್ಲ ಎನ್ನುವ ಅಸಮಾಧಾನ ಕೇಳಿ ಬಂದಿದೆ.

ಅನೀಲ ಬಸೂದೆ

ಟಾಪ್ ನ್ಯೂಸ್

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

BSF-1

Encounter: ಕುಪ್ವಾರದಲ್ಲಿ ಗಡಿ ನುಸುಳುತ್ತಿದ್ದ ಮೂವರು ಉಗ್ರರ ಹತ್ಯೆ

1-aa

Water issue; ತಮಿಳುನಾಡಿಗೆ 8,000 ಕ್ಯೂಸೆಕ್ ಕಾವೇರಿ ನೀರು ಬಿಡುತ್ತೇವೆ: ಸಿದ್ದರಾಮಯ್ಯ

1-muslim

Shiggaon; ಉಪಚುನಾವಣೆಯಲ್ಲಿ ಮುಸ್ಲಿಂ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ

Heavy Rain ಹಾರಂಗಿಯಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ

Heavy Rain ಹಾರಂಗಿಯಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ

1-shaan

Ek Ped Maa Ke Naam ; ಒಂದೇ ದಿನ 11 ಲಕ್ಷ ಗಿಡಗಳನ್ನು ನೆಟ್ಟು ವಿಶ್ವದಾಖಲೆ

GOA ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ

GOA ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ

4-yadagiri

Narayanapur: ವಿದ್ಯುತ್‌ ತಂತಿ ತಗುಲಿ ಮಹಿಳೆ ಸಾವು

1-aaaa

Shahpura: ಅಲ್ಪಸಂಖ್ಯಾಕ ಬಾಲಕರ ವಸತಿ ನಿಲಯದ ಊಟದಲ್ಲಿ ಹುಳು ಪತ್ತೆ

Yadagiri CEO withdrew the order issued in the matter of blocking the promotion of teachers

Yadagiri: ಶಿಕ್ಷಕರ ಬಡ್ತಿ ತಡೆ ವಿಚಾರದಲ್ಲಿ ಹೊರಡಿಸಿದ್ದ ಆದೇಶ ಹಿಂಪಡೆದ ಸಿಇಓ

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

BSF-1

Encounter: ಕುಪ್ವಾರದಲ್ಲಿ ಗಡಿ ನುಸುಳುತ್ತಿದ್ದ ಮೂವರು ಉಗ್ರರ ಹತ್ಯೆ

1-aa

Water issue; ತಮಿಳುನಾಡಿಗೆ 8,000 ಕ್ಯೂಸೆಕ್ ಕಾವೇರಿ ನೀರು ಬಿಡುತ್ತೇವೆ: ಸಿದ್ದರಾಮಯ್ಯ

1-muslim

Shiggaon; ಉಪಚುನಾವಣೆಯಲ್ಲಿ ಮುಸ್ಲಿಂ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ

Heavy Rain ಹಾರಂಗಿಯಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ

Heavy Rain ಹಾರಂಗಿಯಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.