ಮಾನಸಿಕ ಸ್ಥಿಮಿತ ಕಳೆದುಕೊಂಡ ಯತ್ನಾಳ್
Team Udayavani, Apr 6, 2021, 8:45 PM IST
ಸಿಂಧನೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ವಸ್ಪರ್ಶಿ ಬಜೆಟ್ ನೀಡಿ, ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ರಾಜೀನಾಮೆ ಕೇಳುವವರಿಗೆ ತಲೆ ಸರಿಯಲ್ಲ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೂರ್ಣ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.
ನಗರದ ನ್ಯಾಯವಾದಿ ಆರ್.ಕೆ. ಹಿರೇಮಠ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಅವರೊಬ್ಬರೇ ಸಿಎಂ ಮಾಡಿಲ್ಲ. ಅವರು ಎಲ್ಲ ಶಾಸಕರ ಒಮ್ಮತದಿಂದ ಮುಖ್ಯಮಂತ್ರಿಯಾಗಿದ್ದಾರೆ. ಜನಪರ ಆಡಳಿತ ನೀಡುತ್ತಿದ್ದಾರೆ ಎಂದರು. ಯಾರನ್ನೂ ಬಿಟ್ಟಿದ್ದಾರೆ ಹೇಳಿ?: ಬಸನಗೌಡ ಪಾಟೀಲ್ ಯತ್ನಾಳ್ ಯಾರನ್ನು ಟೀಕಿಸದೇ ಬಿಟ್ಟಿದ್ದಾರೆ. ವಚನಾನಂದ ಸ್ವಾಮಿಗಳು ಸೇರಿದಂತೆ ಎಲ್ಲರಿಗೂ ಬೈದಿದ್ದಾರೆ. ಅವರದು ಟೀಕಿಸುವ ಚಾಳಿ. ನಾವು ಕೂಡ ಬಿಜೆಪಿ ತತ್ವ-ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಬಿಜೆಪಿಯಲ್ಲಿ ಎಲ್ಲರೂ ಕುಟುಂಬದ ಸದಸ್ಯರಂತೆ ಇದ್ದೇವೆ. ವಾಜಪೇಯಿ, ಅಮಿತ್ ಶಾ, ನರೇಂದ್ರ ಮೋದಿ ಅವರನ್ನು ಒಳಗೊಂಡು ಎಲ್ಲರ ಆದರ್ಶ ರೂಢಿಸಿಕೊಂಡಿದ್ದೇವೆ.
ಆದರೆ, ಈ ಯತ್ನಾಳ್ ಅವರು ಕಪಟ ಹಿಂದುತ್ವದ ನಾಟಕ ಆರಂಭಿಸಿದ್ದಾರೆ. ಇಂತಹ ನಾಟಕ ನಡೆಯುವುದಿಲ್ಲ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದ ತಕ್ಷಣ ಯಾಕೆ ಕೊಡಬೇಕು?. ಅವರೊಬ್ಬರಿಂದಲೇ ಬಿ.ಯಡಿಯೂರಪ್ಪ ಸಿಎಂ ಆಗಿಲ್ಲ ಎಂದರು. ಕೆ.ಎಸ್. ಈಶ್ವರಪ್ಪ ಹಿರಿಯ ಸಚಿವರು. ಸಿಎಂ ಅವರು ಯಾವುದೇ ತಾರತಮ್ಯ ಮಾಡಿಲ್ಲ. ಅವರು ರಾಜ್ಯಪಾಲರಿಗೆ ದೂರು ನೀಡಿದ್ದು ತಪ್ಪು. ಈ ಬಗ್ಗೆ ಈಗಾಗಲೇ ವರಿಷ್ಠರು ಅವರಿಗೆ ಕಿವಿಮಾತು ಹೇಳಿದ್ದಾರೆ. ಬೇಡ ಜಂಗಮರು ಎಸ್ಟಿ ಸರ್ಟಿ μಕೇಟ್ ಗೆ ಬೇಡಿಕೆ ಇಡುತ್ತಿರುವ ಬಗ್ಗೆ ಗಮನ ಸೆಳೆದಾಗ, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಮೀಸಲಾತಿಗೆ ಸಂಬಂಧಿಸಿದ ಮನವಿಗಳನ್ನೂ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುತ್ತದೆ ಎಂದರು. ಈ ವೇಳೆ ಸಮಾಜದ ಮುಖಂಡರಾದ ರಾಜೇಶ ಹಿರೇಮಠ, ಹಂಪಯ್ಯಸ್ವಾಮಿ ರ್ಯಾವಿಹಾಳ್, ಶಶಿಧರ ಸ್ವಾಮಿ, ಬಸವರಾಜ ಬಾದರ್ಲಿ, ಪ್ರೇಮಾ ಸಿದ್ದಾಂತಿಮಠ, ಮಮತಾ ಹಿರೇಮಠ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು