ನರೇಗಾದ ಉಪಯೋಗ ಪಡೆಯಿರಿ
Team Udayavani, Feb 21, 2021, 5:59 PM IST
ಯಾದಗಿರಿ: ನರೇಗಾ ಯೋಜನೆಯಡಿ ಪುರುಷರಷ್ಟೇ ಕೂಲಿಯನ್ನು ಮಹಿಳೆಯರಿಗೂ ನೀಡಲಾಗುತ್ತದೆ. ಗ್ರಾಮೀಣ ಭಾಗದ ಪ್ರತಿಯೊಬ್ಬರು ನರೇಗಾ ಯೋಜನೆಯ ಲಾಭ ಪಡೆಯಬೇಕು ಎಂದು ಜಿಪಂ ಸಿಇಒ ಶಿಲ್ಪಾ ಶರ್ಮಾ ಕರೆ ನೀಡಿದರು.
ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ ಎಸ್.ಹೆಚ್ ಗ್ರಾಮದಲ್ಲಿ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಿದರು. ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡಲಾಗುತ್ತಿದ್ದು, ಹಲವು ಸಮುದಾಯಿಕ ಅಲ್ಲದೆ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶವಿದ್ದು, ಕೆಲಸ ಮಾಡಲು ಇಚ್ಛಿಸುವವರು ಉದ್ಯೋಗ ಚೀಟಿ ಪಡೆದು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಲವರಿಗೆ ಉದ್ಯೋಗ ಚೀಟಿಯನ್ನು ವಿತರಿಸಿದರು.