ಮನಸೆಳೆಯುತ್ತಿವೆ ಗುಲ್‌ಮೊಹರ್‌!


Team Udayavani, Jun 3, 2021, 10:46 PM IST

Ballary , Gul mohar

„ಆರ್‌.ಬಸವರೆಡ್ಡಿ ಕರೂರು

ಸಿರುಗುಪ್ಪ: ಮೇ ತಿಂಗಳಿನಲ್ಲಿಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನೋಡಿದಲ್ಲೆಲ್ಲ ಈಗ ಕೆಂಪು ಪುಷ್ಪಗಳು ಸೂಜಿಗಲ್ಲಿನಂತೆ ಗಮನ ಸೆಳೆಯುತ್ತಿವೆ. ಮೇಫÉವರ್‌ ಎಂದೆ ಕರೆಯಲ್ಪಡುವ ಗುಲ್‌ಮೊಹರ್‌ ಹೂ ಅರಳುವ ಸಮಯ ಇದಾಗಿದ್ದು, ನಗರ ಸೇರಿದಂತೆ ಗ್ರಾಮ, ರಸ್ತೆ, ಹೊಲ, ಗದ್ದೆ, ಶಾಲೆಗಳ ಬಳಿ ಗುಲ್‌ಮೊಹರ್‌ ಅರಳಿರುವುದು ಈಗ ಕಾಣ ಸಿಗುತ್ತದೆ.

ಉಷ್ಣವಲಯದ ಮರವಾಗಿರುವ ಇದು, ಪ್ರಪಂಚದ ಎಲ್ಲೆಡೆ ಬೆಳೆಯುತ್ತದೆ. ಮದುವೆ, ಹಬ್ಬ ಮತ್ತು ಗೃಹ ಪ್ರವೇಶದ ಸಂದರ್ಭದಲ್ಲಿ ಇದರ ಹೂ ಗೊಂಚಲನ್ನು ಕಿತ್ತು, ಚಪ್ಪರಗಳ ನಡುವೆ ಅಲಂಕರಿಸುವ ಪರಂಪರೆ ಗ್ರಾಮೀಣ ಭಾಗಗಳಲ್ಲಿ ಇನ್ನು ಉಳಿದಿದೆ. ಸುಮಾರು 10ರಿಂದ 60 ಅಡಿ ಎತ್ತರ ಬೆಳೆಯುವ ಇದನ್ನು ಪಾರ್ಕ್‌ಗಳಲ್ಲಿ ಮತ್ತು ರಸ್ತೆಯ ಬದಿಯಲ್ಲಿ ಹೆಚ್ಚು ಬೆಳೆಸಲಾಗುತ್ತದೆ.

ಇದು ಕೆಂಪು ಹೂ, ಕಿತ್ತಳೆಗೆಂಪು, ಕೇಸರಿ ಲತೆಗಳು, ಹಸಿರು ವೃಕ್ಷಕ್ಕೆ ಬಾಸಿಂಗ ತೊಡಿಸಿದಂತೆ ಆಕರ್ಷಕವಾಗಿ ಕಾಣುತ್ತದೆ. ಮಳೆಗಾಲದ ಮುಂಜಾವಿನ ರಸ್ತೆಯಲ್ಲಿ ಪುಷ್ಪಗಳು ಉದುರಿದಾಗ ಪುಷ್ಪದ ಚಾದಾರ ಎದ್ದುಕಾಣುತ್ತದೆ. ಹಳದಿ ಮತ್ತು ಬಿಳಿ ಹೂಗಳ ಸಂತತಿ ಕಾಣಬಹುದು. ಇದರ ಪುಷ್ಪ ಪಾತ್ರೆಯನ್ನು ಕಿತ್ತು, ಇದರೊಳಗಿನ ಕೇಸರದ ಕೊಕ್ಕೆಯನ್ನು ತೆಗೆದು ಆಟವಾಡುವ ಸಂಭ್ರಮ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕಾಣಬಹುದು.

ಅವರೆ ಕಾಯಿಯಂತಹ ಉದ್ದನೆಯ ಕತ್ತಿಯಾಕಾರದ ಕೋಡು, ಸಣ್ಣಗಾತ್ರದ 20-30 ಬೀಜಗಳನ್ನು ಹೊಂದಿರುತ್ತದೆ. 5 ಸೆಂಟಿಮೀಟರ್‌ ಉದ್ದ ಬೆಳೆಯುವ ಹಸಿರು ಬಣ್ಣದ ಕೋಡು, ಬಲಿತಾಗ ಕಡು ಕಂದುಬಣ್ಣ ಹೊಂದಿದರೆ, ಮರದ ಕಾಂಡ ಬೂದಿ ಮಿಶ್ರಿತ ಕಂದುಬಣ್ಣ ಪಡೆಯುತ್ತದೆ. ಬೀಜ ಮತ್ತು ರೆಂಬೆನೆಟ್ಟು ಹೊಸ ಸಸ್ಯ ಬೆಳೆಸಬಹುದು. ಅಲಂಕಾರಿಕಕ್ಕೆ ಇಲ್ಲವೆ ನೆರಳಿಗಾಗಿ ಸಾಲು ಮರದಂತೆ ಬೆಳೆಸುತ್ತಾರೆ.

“ಮೇ, ಜೂನ್‌, ಜುಲೈಗಳಲ್ಲಿ ಹೂಗಳಿಂದ ಜನರನ್ನು ಆಕರ್ಷಿಸುವ ಈ ಮರ ವರ್ಷಪೂರ್ತಿ ಜನರಿಗೆ ನೆರಳು ನೀಡುತ್ತವೆ. ಬೇಸಿಗೆಯ ದಾಹ ನೀಗಲು ಸಂಜೆ ಮತ್ತು ಬೆಳಿಗ್ಗೆ ವಾಯು ವಿಹಾರಿಗಳು ನಡೆದಾಡುವಾಗ ಮರದ ನೆರಳಿನಲ್ಲಿ ಸ್ವಲ್ಪ ಸಮಯ ಕುಳಿತು ವಿಶ್ರಮಿಸುತ್ತಾರೆ. ನಗರದ ಕೃಷ್ಣ ನಗರದ ಬಡಾವಣೆಯಲ್ಲಿ ಗುಲ್‌ಮೊಹರ್‌ ಲತೆಗಳು ಹಸಿರು ವೃಕ್ಷಕ್ಕೆ ಕೆಂಪು ಛತ್ರಿ ತೊಟ್ಟಂತೆ ಜನರನ್ನು ಆಕರ್ಷಿಸುತ್ತಿವೆ’ ಎನ್ನುತ್ತಾರೆ ಪತ್ರಿಕಾ ವಿತರಕ ಹುಸೇನ್‌ಸಾಬ್‌ ಬೀಜದಿಂದ ಉತ್ಪಾದಿಸುವ ಅಂಟು, ಎಣ್ಣೆಯನ್ನು, ಜವಳಿ, ಚರ್ಮ, ಸಾಬೂನು, ಔಷ ಧಿ ಮೊದಲಾದ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ.

ಈ ವೃಕ್ಷದ ಮೂಲ ಮಡಗಾಸ್ಕರ್‌. ಸೆಭಾಷಿಯೇ ಕುಟುಂಬದ ಸೀತಂತಿನಿಯೋಯಿಡೆ ಉಪಕುಟುಂಬಕ್ಕೆ ಸೇರಿದೆ. ಇದರ ಸಸ್ಯ ಶಾಸ್ತ್ರಿಯ ಹೆಸರು “ಡೆಲೋನಿಕ್ಸ್‌ ರೇಜಿಯಾ’, ಕನ್ನಡದಲ್ಲಿ ಕತ್ತಿಕಾಯಿ ಮರ, ಹಿಂದಿಯಲ್ಲಿ ಗುಲ್‌ಮೊಹರ್‌, ಬೆಂಕಿಮರ, ದೊಡ್ಡರತ್ನಗಂದಿ, ಸೀಮೆ ಸಂಕೇಶ್ವರ, ಕೃಷ್ಣಾಚುರ ರಾಧಾಚುರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.