Udayavni Special

ಹೊರಳುದಾರಿಯಲ್ಲಿ ಸಂತೋಷ್ ಅನಂತಪುರ ಅವರ ಕಥೆಗಳು

ಕೃತಿಯ ಹೆಸರು : ಕಾಗೆ ಮತ್ತು ಕಡ್ಲೆ ಬೇಳೆ ಪಾಯಸ, ವಿಮರ್ಶೆ : ಡಾ. ಪಾರ್ವತಿ ಜಿ ಐತಾಳ್

Team Udayavani, Feb 28, 2021, 12:20 PM IST

Book Review

ಸಂತೋಷ್ ಅನಂತಪುರ ಅವರ ಸಣ್ಣ ಕಥಾ ಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’ ದ ಹನ್ನೊಂದು ಕಥೆಗಳು ಕನ್ನಡ ಸಣ್ಣ ಕಥಾ ಪ್ರಕಾರವು ಕಾಲಿಡುತ್ತಿರುವ ಹೊಸ ಹೊರಳು ದಾರಿಯತ್ತ  ಬೆರಳು ಮಾಡಿ ತೋರಿಸುತ್ತಿರುವಂತಿದೆ.  ವಸ್ತು, ವಿನ್ಯಾಸ, ನಿರೂಪಣಾ ಶೈಲಿ, ತಂತ್ರಗಳ ದೃಷ್ಟಿಯಿಂದ ಇಲ್ಲಿನ ಕಥೆಗಳು ಭಿನ್ನವಾಗಿದ್ದು ಓದುಗನ ಕುತೂಹಲವನ್ನು ಹೆಚ್ಚಿಸುತ್ತ ಹೋಗುವ ಗುಣವನ್ನು ಹೊಂದಿವೆ. ಸಣ್ಣ ಕಥೆಗಳು ಯಾವುದಾದರೊಂದು ಮುಖ್ಯ ಘಟನೆಯ ಸುತ್ತ ಕಟ್ಟಲ್ಪಟ್ಟಿರಬೇಕು ಎಂಬ ನಿಯಮವನ್ನು ಈ ಕಥೆಗಳು ಅನುಸರಿಸುವುದಿಲ್ಲ.   ಆ ಕಾರಣದಿಂದಾಗಿ ಫಕ್ಕನೆ ಓದಿದಾಗ ಇವು ಕತೆಗಳು ಹೌದೇ ಅಲ್ಲವೇ ಎಂಬ ಅನುಮಾನವೂ ಬರಬಹುದು. ಆದರೆ ಇಲ್ಲಿನ ಕಥೆಗಳು     ಹಿಂದೆ ನಡೆದಿರಬಹುದಾದ ಒಂದು ಘಟನೆಯ ಕುರಿತು ನಿರೂಪಕ ಅಥವಾ ಕಥಾ ನಾಯಕನ ಯೋಚನಾ ಲಹರಿಯಂತಿವೆ ಮತ್ತು ಆ ಯೋಚನೆಗಳಲ್ಲಿಯೇ ಆ ಘಟನೆಯ ಸುಳಿವು ಸೂಚ್ಯವಾಗಿ ಓದುಗನಿಗೆ ಸಿಗುತ್ತದೆ.

ಸಂಕಲನದ ಕಥೆಗಳಲ್ಲಿ ಹೆಚ್ಚಿನವು ಗಂಡು-ಹೆಣ್ಣುಗಳ ನಡುವಣ ಪ್ರೇಮ

ಪ್ರಣಯ ದಾಂಪತ್ಯಗಳ ಕುರಿತಾದ ಕಥೆಗಳು. ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್,ಚೆಂಡೆ, ಹೇಳಿಕೊಳ್ಳಲಾಗದ ನಾನು ,ಕಿ..ಕಾ.. ಮೊದಲಾದ ಕಥೆಗಳ ಮೂಲಕ ದಾಂಪತ್ಯವೆನ್ನುವ ಸಿದ್ಧ ಚೌಕಟ್ಟಿನ ಹಿಂದಿರುವ ಕೃತಕ ಮುಖವಾಡವನ್ನು ಕಿತ್ತೊಗೆದು ಮನುಷ್ಯರು ಸಂಬಂಧಗಳ ನಿಜವನ್ನು ಗುರುತಿಸಬೇಕಾದ ಅನಿವಾರ್ಯತೆ ಯನ್ನು ಒತ್ತಿ ಹೇಳಲಾಗಿದೆ.ಗಂಧ ಎಂಬ ಕಥೆಯಲ್ಲಿ ‘ತಾನೊಂದು ಬಗೆದರೆ ದೈವ ಬೇರೊಂದು ಬಗೆದಿತ್ತು’ಎನ್ನುವ ಹಾಗೆ ಮನುಷ್ಯನ ಎಣಿಕೆಗೆ ವಿರುದ್ಧವಾಗಿ ಬದುಕಿನ ಘಟನೆಗಳು ನಡೆಯುವ ದುರಂತದ ಕಥೆಯಿದೆ. ವಿಧಿಯ ಮುಂದೆ ಸೂರ್ಯನ ಪ್ರಖರತೆಯಾಗಲಿ ಚಂದ್ರನ ಕಾಂತಿಯಾಗಲಿ ಇದ್ದ ಹಾಗೆಯೇ ಇರಲಾರದು ಎನ್ನುವ ನಂಬಿಕೆ ಕಾಣುತ್ತದೆ.

ಶೀರ್ಷಿಕೆಯ  ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’ ಮನಶ್ಶಾಸ್ತ್ರೀಯ ನೆಲೆಯಲ್ಲಿ ರಚಿತವಾದ ಕಥೆ. ಅಡಿಗಲ್ಲೇ ಇಲ್ಲದ ನಂಬಿಕೆಯೊಂದು  ಹೇಗೆ ಒಬ್ಬನ ಭಯ, ಆತಂಕ, ತೊಳಲಾಟ ಕೊನೆಗೆ ಸಾವಿಗೂ ಕಾರಣವಾಗಬಹುದೆಂದು ನಿರೂಪಿಸುವ ಈ ಕಥೆಯಲ್ಲಿ ಸಾವಿಗೆ ಬಲಿಯಾದವನ ಮನೋಭಾವವು ರೂಪುಗೊಂಡ ಹಿನ್ನೆಲೆಯನ್ನು ಗಟ್ಟಿಗೊಳಿಸಲು  ಸಾಕಷ್ಟು ದೀರ್ಘವಾದ ಪೀಠಿಕೆಯೂ   ಇದೆ.

ಪ್ರಣಯಿಗಳಿಬ್ಬರ ಪ್ರೇಮಸಲ್ಲಾಪವನ್ನು ಸಂಪೂರ್ಣವಾಗಿ ನಾಟಕದ ಸಂಭಾಷಣೆಯ ರೂಪದಲ್ಲಿ ಕೊಟ್ಟಂಥ ಒಂದು ವೈಶಿಷ್ಟ್ಯಪೂರ್ಣ ಕಥೆ ‘ಕಿ…ಕಾ..’ ಪ್ರೀತಿ ಪ್ರೇಮ ಕಾಮಗಳ ಬಗ್ಗೆ  ಬಹಳ ಸುಂದರವಾದ ವ್ಯಾಖ್ಯಾನವನ್ನು ನೀಡುತ್ತ ಸಂಬಂಧವನ್ನು ಆಧ್ಯಾತ್ಮಿಕತೆಯ ಎತ್ತರಕ್ಕೇರಿಸಿ  ಕೊನೆಯಲ್ಲಿ ಎಲ್ಲವೂ ಸುಳ್ಳೆಂದು ಸಾಕ್ಷಾತ್ಕರಿಸುವಂತೆ ದಡಾರೆಂದು ನೆಲಕ್ಕಪ್ಪಳಿಸುವ ರೀತಿ ಕಹಿ ವಾಸ್ತವದ ಕುರಿತು ಎಚ್ಚರಿಕೆ ಹುಟ್ಟಿಸುವಂತಿದೆ.ಪ್ರಾಯಶಃ ಇಡೀ ಸಂಕಲನದಲ್ಲೇ ತನ್ನ ವಸ್ತು ತಂತ್ರ ವಿನ್ಯಾಸಗಳಿಂದ ಅತ್ಯಂತ ಹೆಚ್ಚು ಗಮನ ಸೆಳೆಯುವ ಕಥೆಯಿದು. ಹಾಗೆಯೇ ಅಪ್ಪನ ಬಗ್ಗೆ ಅಮ್ಮ ತೋರಿಸುತ್ತಿದ್ದ ಕಾರಣದಿಂದಾಗಿ ಅಪ್ಪ ಒಳ್ಳೆಯವರೆಂದು ಅನ್ನಿಸಿದರೂ ಅವರ ಮೇಲೆ ತಾನು ಪ್ರೀತಿ ತೋರಿಸಲಿಲ್ಲವೆಂಬ ಪರಿತಾಪ ಭಾವದ ಆವೇಗವನ್ನು ಹೊರಹಾಕಲು ಅಪ್ಪ ಪ್ರೀತಿಸುತ್ತಿದ್ದ ಚೆಂಡೆಯು ಹರಿದು ಹೋಗುವಷ್ಟು ಆವೇಶದಿಂದ ಚೆಂಡೆ ಬಾರಿಸುವ ಶಾಲಿನಿಯ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಕಾರಂತರ ಚೋಮನ ದುಡಿಯ ರೂಪಕದಂತೆ ಇದೂ ಪರಿಣಾಮಕಾರಿಯಾಗಿದೆ.

ಸ್ವಾನುಭವದ ಹಿನ್ನೆಲೆಯಿಂದ ಬಂದ ಗ್ರಾಮಿಣ ಸಾಂಸ್ಕೃತಿಕ ಲೋಕದ ಸುಂದರ ಚಿತ್ರಣ, ಕಾವ್ಯಾತ್ಮಕ ಶೈಲಿ ಮತ್ತು ಭಾಷಾ ಸೌಂದರ್ಯದಿಂದ ಓದುಗರ ಗಮನ ಸೆಳೆಯುವ ಸಂತೋಷ್ ಅನಂತಪುರ ಅವರು     ‘ಕಾಗೆ ಮತ್ತು   ಕಡ್ಲೆ ಬೇಳೆ ಪಾಯಸ  ‘ದ ಮೂಲಕ    ಒಬ್ಬ ಒಳ್ಳೆಯ ಕಥೆಗಾರರಾಗಿ ಕನ್ನಡ ಕಥಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಬಹಳ ಸಂತೋಷದ ವಿಷಯ.

–ಡಾ.ಪಾರ್ವತಿ ಜಿ.ಐತಾಳ್, ಹಿರಿಯ ಸಾಹಿತಿಗಳು, ಅನುವಾದಕರು 

ಕೃತಿ : ಕಾಗೆ ಮತ್ತು ಕಡ್ಲೆಬೇಳೆ ಪಾಯಸ

ಪ್ರಕಾಶಕರು :  ನವಕರ್ನಾಟಕ ಪ್ರಕಾಶನ

ಪ್ರಕಟಣಾ ವರ್ಷ : 2020

ಬೆಲೆ : ರೂ.125

ಟಾಪ್ ನ್ಯೂಸ್

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

Bengal govt has formed task force to tackle COVID-19 surge: Mamata

ಕೋವಿಡ್ ಉಲ್ಬಣವನ್ನು ನಿಭಾಯಿಸಲು ಕಾರ್ಯಪಡೆ ರಚಿಸಲಾಗಿದೆ : ದೀದಿ

fgdgete

ಸಖತ್ತಾಗಿದೆ ಫ್ಯಾಶನ್ ಪ್ರಿಯೆ ನೋರಾ ಫೇತೆಹಿ ನ್ಯೂ ಲುಕ್

gndfgdfg

ಕೋವಿಡ್ ಕಂಟಕ : ಪ್ರಿಯಕರನ ಜೊತೆ ಮುಂಬೈ ತೊರೆದ ನಟಿ ಆಲಿಯಾ ಭಟ್

್ಗಹಹ್ದ

ವಿಧಾನಸೌಧದಲ್ಲಿ ಸಿಎಂ ಸಭೆ: ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ಕಾರಣ ಎಂದ ವಿಪಕ್ಷ ನಾಯಕರು

hfghfg

ರಾಖಿ ಸಾವಂತ್ ತಾಯಿಯ ಜೀವ ಉಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-12

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

19-11

ದೇವರ ಜಮೀನಿನಲ್ಲಿ ರೈತರ ಸಾಮೂಹಿಕ ಪೂಜೆ

19–10

ಹೊನ್ನಾಳಿ-ನ್ಯಾಮತಿ ಸಮಗ್ರ ಅಭಿವೃದಿ œ ಗುರಿ: ರೇಣು

MUST WATCH

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

ಹೊಸ ಸೇರ್ಪಡೆ

19-12

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

19-11

ದೇವರ ಜಮೀನಿನಲ್ಲಿ ರೈತರ ಸಾಮೂಹಿಕ ಪೂಜೆ

19–10

ಹೊನ್ನಾಳಿ-ನ್ಯಾಮತಿ ಸಮಗ್ರ ಅಭಿವೃದಿ œ ಗುರಿ: ರೇಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.