ಜೀವ ವೈವಿಧ್ಯಗಳ ಸಂರಕ್ಷಣೆಗೆ ಪಣತೊಡೋಣ


Team Udayavani, May 2, 2021, 6:50 AM IST

Conservation of Biodiversity

ಈ ಭೂಮಿಯ ಮೇಲೆ ಇರುವ ಅಪರೂಪದ ಜೀವವೈವಿಧ್ಯಗಳು ಅರಣ್ಯನಾಶದಿಂದ, ಆಹಾರದ ಕೊರತೆಯಿಂದ ಮತ್ತು ತಮ್ಮ ವಾಸಸ್ಥಳದಲ್ಲಿ ಆಗುತ್ತಿರುವ ವ್ಯತ್ಯಾಸದಿಂದ ಸಾವನ್ನಪ್ಪುತ್ತಾ ಇರು ವುದು ಖೇದಕರ ವಿಚಾರವಾಗಿದೆ.

ಮನುಷ್ಯನ ಅತಿಯಾದ ಅಭಿವೃದ್ಧಿಪರ ಚಟುವಟಿಕೆಗಳು, ಇದ ರಿಂದ ಹವಾಮಾನದಲ್ಲಾಗುತ್ತಿರುವ ವ್ಯತ್ಯಾಸ, ಅಭ ಯಾರಣ್ಯ ಮತ್ತು ರಕ್ಷಿತಾರಣ್ಯಗಳಲ್ಲಿ ಹೆಚ್ಚು ತ್ತಿರುವ ವಾಹನ ಸಂಚಾರ, ಕಳ್ಳಬೇಟೆ ಇವೇ ಮೊದಲಾದವುಗಳು ಅಪರೂಪದ ಜೀವವೈವಿಧ್ಯಗಳ ಸಾವಿಗೆ ಬಹುತೇಕ ಕಾರಣ ಎಂದು ಅಧ್ಯಯನಗಳು ಹೇಳಿವೆ. ಸೀಮಿತ ವಾಹನ ಚಲನೆಯನ್ನು ಹೊಂದಿರುವ ಸಂರಕ್ಷಿತ ಪ್ರದೇಶಗಳೂ ಅಲ್ಲಿರುವ ಅಪರೂಪದ ವನ್ಯಜೀವಿಗಳಿಗೆ ಹಾನಿಕಾರಕ ಎಂದು ಸಂಶೋಧಕರು ಹೇಳುತ್ತಾರೆ.

ರಸ್ತೆಯ ಮೇಲಾಗುವ ಪ್ರಾಣಿಗಳ ಸಾವುಗಳನ್ನು ತಪ್ಪಿಸಲು ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಗಳಲ್ಲಿ ರಾತ್ರಿಯ ವಾಹನ ಸಂಚಾರ ನಿಷೇಧ ಆವಶ್ಯಕವಾಗಿದೆ. ಎಷ್ಟೇ ಕಡಿಮೆ ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಗಳಲ್ಲಿ ಓಡಾಡಿದರೂ ವನ್ಯಜೀವಿಗಳ ಸಾವನ್ನು ತಪ್ಪಿಸಲು ಸಾಧ್ಯವಿಲ್ಲ.

ಕಪ್ಪೆಗಳಂತಹ ಸಣ್ಣ ಸಣ್ಣ ಜೀವ ಪ್ರಭೇದಗಳ ಮೇಲೆ ಇದರ ಪರಿಣಾಮಗಳು ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ. ರಸ್ತೆಗಳಂತಹ ಕೃತಕ ಅಡೆತಡೆಗಳು ಜೀವಿಗಳ ನೈಸರ್ಗಿಕ ಆವಾಸ ಸ್ಥಾನಗಳನ್ನು ಛಿದ್ರಗೊಳಿಸಿ, ಪ್ರಾಣಿಗಳ ಚಲನೆಯ ಪಥಗಳನ್ನು ಬದಲಾಯಿಸುತ್ತವೆ. ಆದ್ದರಿಂದ ಅಂತಹ ರಸ್ತೆಗಳು, ರೈಲ್ವೇ ಮತ್ತು ವಿದ್ಯುತ್‌ ಮಾರ್ಗ ಗಳನ್ನು ನೈಸರ್ಗಿಕವಾದ ಭೂಪ್ರದೇಶಗಳಲ್ಲಿ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೀಮಿತಗೊಳಿಸಬೇಕಾಗಿದೆ.

ನಮ್ಮ ದೇಶದ ವಿವಿಧ ಪ್ರಭೇದಗಳ ಜೀವಿಗಳ ಪರಿಸರ ವಿಜ್ಞಾನ ಮತ್ತು ನಡವಳಿಕೆಯ ಬಗ್ಗೆ ಮತ್ತು ಇಂತಹ ಅಪರೂಪದ ಪ್ರಭೇದಗಳ ಕುರಿತಾಗಿ ಇನ್ನೂ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಅಪರೂಪದ ಪ್ರಾಣಿಗಳ ಕುರಿತು ನಾವು ಹೆಚ್ಚು ತಿಳಿದುಕೊಂಡಷ್ಟೂ ಇವುಗಳ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಲು ಸಾಧ್ಯವಿದೆ.

ಇನ್ನಾದರೂ ಏಕೆ ನಾವು ಎಚ್ಚೆತ್ತುಕೊಳ್ಳಬೇಕು?

ಹವಾಮಾನ ಬದಲಾವಣೆಯಿಂದಾಗಿ ಜಗತ್ತಿ ನಲ್ಲಿ ಗಂಟೆಗೆ ಅಂದಾಜು ಮೂರು ವಿಧದ ಜೀವ ವೈವಿಧ್ಯಗಳು ನಾಶವಾಗುತ್ತಿವೆ. ಅದರಂತೆ ಪ್ರತೀ ದಿನವೂ 100 ರಿಂದ 150 ಜೀವವೈವಿಧ್ಯಗಳು ನಾಶವಾಗುತ್ತಿವೆ. ಜೈವಿಕ ವಲಯ ಸಿದ್ಧಾಂತದ ಆಧಾರದ ಮೇಲೆ, ವರ್ಷಕ್ಕೆ ಸುಮಾರು 1,40,000 ಜೀವಿಗಳು ಇಲ್ಲವಾಗುತ್ತಿವೆ. ಈ ಅಂಕಿಅಂಶವು ಅಸಹನೀಯ ಪರಿಸರದ ಅವನತಿಯನ್ನು ಸೂಚಿಸುತ್ತಿದ್ದು, ಪ್ರತೀ ವರ್ಷ ಪರಿಸರದ ಜೀವಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಜೈವಿಕ ಲೋಕಕ್ಕೆ ಪದಾರ್ಪಣೆ ಮಾಡುತ್ತವೆ.

ಆದರೆ ಮಾನವನ ಇತಿಹಾಸದಲ್ಲೇ ಅತ್ಯಂತ ಅಧಿಕ ಪ್ರಮಾಣದಲ್ಲಿ ನಿಸರ್ಗ ಜೀವಿಸಂಕುಲ ಕಾಣೆಯಾಗುತ್ತಿದೆ. ಸಾಮಾನ್ಯ ವಿನಾಶದ ಪ್ರಮಾಣಕ್ಕಿಂತಲೂ ನೂರು ಪಟ್ಟು ಹೆಚ್ಚು ಅಳಿವು ಸಂಭವಿಸುತ್ತಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣಕ್ಕೆ ಕಳೆದ 20 ವರ್ಷಗಳಲ್ಲಿ ಕೆನಡಾ ದೇಶದಲ್ಲಿ ಇರುವ ಹಿಮಕರಡಿಗಳ ಸಂಖ್ಯೆಯು ಶೇ.25ರಷ್ಟು ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮಳೆಕಾಡುಗಳಲ್ಲಿ ಇರುವ ಸುಮಾರು 80 ಜಾತಿಯ ಕಪ್ಪೆಗಳು ನಾಶವಾಗಿವೆ.

ಸುಮಾರು 25 ವರ್ಷಗಳ ಹಿಂದೆ ಅಂಟಾರ್ಟಿಕಾದಲ್ಲಿ ಇದ್ದ 300 ವಿಧಗಳಿಗೂ ಮಿಕ್ಕಿದ ಅಡೆಲಿ ಪೆಂಗ್ವಿನ್‌ಗಳ ಪೈಕಿ ಈಗ ಉಳಿದಿರುವುದು ಕೇವಲ 54 ವಿಧಗಳು ಮಾತ್ರ.

ಭೂಮಿಯ ಮೇಲಿರುವ ಪ್ರತೀ ಐದು ಪ್ರಭೇದಗಳ ಪೈಕಿ ಒಂದು ಪ್ರಭೇದವು ಮಾನವನ ವಿವಿಧ ಚಟುವಟಿಕೆಗಳ ಕಾರಣದಿಂದಾಗಿ ಅಳಿದು ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅವುಗಳ ಪೈಕಿ ಅನೇಕ ಪ್ರಭೇದಗಳು ಹೊರಜಗತ್ತಿಗೆ ಪರಿಚಯವಾಗುವ ಮೊದಲೇ ನಾಶವಾಗುತ್ತಿವೆ.

ಜೀವಿವರ್ಗೀಕರಣ ವ್ಯವಸ್ಥಿತವಾದ ಅಧ್ಯಯನಗಳು, ಜೀವವೈವಿಧ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದಕ್ಕಾಗಿ ಪ್ರಾದೇಶಿಕ ಗಡಿಗಳ ಮಿತಿಯನ್ನೂ ಮೀರಿ ಸಹಭಾಗಿತ್ವದಲ್ಲಿ ಸಂಶೋಧಕರಿಗೆ ವಿವಿಧ ಮಾದರಿಗಳ ಸುಲಭ ಸಂಗ್ರಹ ಮತ್ತು ಲಾಭೋದ್ದೇಶವಿಲ್ಲದ ಸಂಶೋಧನೆಗೆ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವಂತಹ ಪರಿಸರ ವ್ಯವಸ್ಥೆಯನ್ನು ರೂಪಿಸಬೇಕಾದ ಆವಶ್ಯಕತೆಯಿದೆ.

ಜೀವವೈವಿಧ್ಯದ ಕುರಿತ ಒಡಂಬಡಿಕೆಯು ಜಾರಿಗೆ ಬಂದಾಗಿನಿಂದ ಈ ಒಪ್ಪಂದದ ಭಾಗವಾಗಿರುವ ದೇಶಗಳು ತಮ್ಮ ವ್ಯಾಪ್ತಿಯ ಒಳಗಿನ ಜೀವವೈವಿಧ್ಯಗಳಿಗೆ ಹಕ್ಕುದಾರರಾಗಿದ್ದು, ತಮ್ಮ ಪ್ರದೇಶಗಳಲ್ಲಿ ಇರುವ ತಳಿಯ ಮತ್ತು ಜೀವವೈವಿಧ್ಯಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಅನೇಕ ಶಾಸಕಾಂಗ ನಿಯಮಾ ವಳಿಗಳನ್ನು ರೂಪಿಸಿವೆ.

ಆದ್ದರಿಂದ ಸಂರಕ್ಷಿತ ಪ್ರದೇಶಗಳ ಪೈಕಿ ದಕ್ಷಿಣ ಏಷ್ಯಾ, ಪೂರ್ವ ಆಫ್ರಿಕಾ, ಮತ್ತು ದಕ್ಷಿಣ ಅಮೆರಿಕದ ಹಲವು ಪ್ರದೇಶಗಳನ್ನು ಪ್ರವೇಶಿಸಲು ಅನುಮತಿ ಪಡೆಯುವುದು ಮತ್ತು ವಾಣಿಜ್ಯೇತರ ಸಂಶೋಧನೆಗಾಗಿ ಜೈವಿಕ ಮಾದರಿಗಳನ್ನು ಸಂಗ್ರಹಿಸುವುದು ಅಸಾಧ್ಯವಾಗಿದೆ. ಇದು ಜಾಗತಿಕ ಜೀವವೈವಿಧ್ಯದ ಹಾಟ್‌ಸ್ಪಾಟ್‌ ಎನಿಸಿರುವ ಅಮೆಜಾನ್‌ ಮಳೆಕಾಡುಗಳು, ಪಶ್ಚಿಮಘಟ್ಟಗಳು ಮತ್ತು ಪೂರ್ವ ಹಿಮಾಲಯಗಳನ್ನೂ ಒಳಗೊಂಡಿದೆ.

ಜೀವವೈವಿಧ್ಯದ ಒಡಂಬಡಿಕೆಯ ಜವಾಬ್ದಾರಿ ಗಳನ್ನು ಅನುಸರಿಸಿ, ಭಾರತ ಸರಕಾರವು 2002ರಲ್ಲಿ ಜೀವವೈವಿಧ್ಯತೆಯ ಕಾಯಿದೆಯನ್ನು ಜಾರಿಗೆ ತಂದಿದೆ. ಜೀವವೈವಿಧ್ಯತೆಯ ಸಂರಕ್ಷಣೆಗಾಗಿ 2004ರಲ್ಲಿ “ಜೀವವೈವಿಧ್ಯತೆಯ ನಿಯಮ’ಗಳನ್ನು ಸೂಚಿಸಿದ್ದು, ಇದರ ಅಡಿಯಲ್ಲಿ ನಿಬಂಧನೆಗಳನ್ನು ಜಾರಿಗೆ ತರಲು, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿಗಳನ್ನು ಸ್ಥಾಪಿಸಿದೆ. ಕಾನೂನಿನ ಅಡಿಯಲ್ಲಿರುವ ಈ ವಿಭಾಗಗಳು, ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಗೆ ಮಾತ್ರವಲ್ಲದೇ, ವಾಣಿಜ್ಯೇತರ ಸಂಶೋಧನೆ ಸಂಬಂಧಿತ ಚಟುವಟಿಕೆಗಳ ಮೇಲೂ ನಿಬಂìಧಗಳನ್ನು ಹೇರುತ್ತಿವೆ.

ಜೀವವೈವಿಧ್ಯದ ಸಂರಕ್ಷಣೆಗಾಗಿ ಕೃಷಿಯಲ್ಲಿ ಕೀಟನಾಶಕಗಳ ಬಳಕೆಯನ್ನು ಕಡಿಮೆಗೊಳಿಸಿ ಅಥವಾ ಸಾವಯವ ಕೀಟನಾಶಕಗಳನ್ನು ಬಳಸಬೇಕಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಫ‌ಲವತ್ತಾದ ಭೂಮಿಯ ಸಂರಕ್ಷಣೆ, ಸ್ಥಳೀಯ ಜಾತಿಗಳ ಗಿಡಗಳ ಮತ್ತು ತಳಿಗಳ ಪುನಃ ಪರಿಚಯ ಮತ್ತು ವಿದೇಶೀಯ ತಳಿಗಳ ನಿರ್ಮೂಲನೆ ಮುಂತಾದ ಕ್ರಮಗಳು ಜೀವವೈವಿಧ್ಯಗಳ ಸಂರಕ್ಷಣೆಗೆ ಅತ್ಯುತ್ತಮ ಕ್ರಮಗಳಾಗಿವೆ.

ಸ್ಥಳೀಯ ಜೀವ ಸಂಕುಲಗಳ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರೆ ಈಗಾಗಲೇ ಅಳಿದು ಹೋಗಿರುವ ಸ್ಥಳೀಯ ಜಾತಿಗಳನ್ನು ಪ್ರಸಕ್ತ ಪರಿಸರದೊಳಗೆ ಮತ್ತೆ ಪರಿಚಯಿಸಲು ಪ್ರಯತ್ನಿಸಬಹುದು. ಇಂತಹ ಪುನರ್‌ ಪರಿಚಯದ ಕ್ರಮವನ್ನು ಕೈಗೊಳ್ಳುವ ಮೊದಲು, ಆ ಜಾತಿಯು ಅ ಸ್ಥಳಕ್ಕೆ ಪರಿಚಿತವೇ ಎಂದು ನಿರ್ಣಯಿಸಬೇಕು. ಇದನ್ನು ಜಾಗತಿಕ ಜೀವವೈವಿಧ್ಯ ಮಾಹಿತಿ ಸೌಲಭ್ಯ ಬಳಸಿ ನಿರ್ಧರಿಸಬಹುದು. ಪರಿಸರಕ್ಕೆ ಹಾನಿಕರವಾದ ಗಿಡಗಳ ನಿರ್ಮೂಲನ ಕಾರ್ಯವನ್ನು ಸಾಮಾನ್ಯವಾಗಿ ನೈಸರ್ಗಿಕ ಪರಾವಲಂಬಿಗಳು ಅಥವಾ ಅಲ್ಲಿನ ಪರಿಸರಕ್ಕೆ ಹೊಂದುವ ಕೀಟನಾಶಕಗಳನ್ನು ಬಳಸಿಯೂ ಮಾಡಬಹುದು.

ಜೀವವೈವಿಧ್ಯತೆಯ ಕೊಡುಗೆಯನ್ನು ಸದ್ವಿನಿ ಯೋಗ ಮಾಡಿಕೊಳ್ಳುವ ಬದಲು ದುರಾಸೆಯಿಂದ ದುರ್ಲಾಭಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಆಯಾಯ ರಾಜ್ಯ ಸರಕಾರದ ಅರಣ್ಯ ಇಲಾಖೆಯ ಮೂಲಕ ಕಾನೂನುಬದ್ಧವಾಗಿ ಜೀವವೈವಿಧ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಸಂರಕ್ಷಿಸಬೇಕು. ಮನುಷ್ಯನಿಗಷ್ಟೇ ಅಲ್ಲದೇ ಸಕಲ ಜೀವರಾಶಿಗೆ ಆಶ್ರಯ ಮತ್ತು ಆಹಾರ ನೀಡುವ ಜೀವ ವೈವಿಧ್ಯದ ಕುರಿತು ನಾವೆಲ್ಲರೂ ಹೆಚ್ಚಿನ ಆಸಕ್ತಿಯನ್ನು ತೋರಬೇಕಿದೆ.

ವಿನಾಶವನ್ನು ತಡೆದು ಪರಿಸರ ಪೂರಕವಾದ ಅಭಿವೃದ್ಧಿಗೆ ರಾಜಕಾರಣಿಗಳು, ತಂತ್ರಜ್ಞರು, ಇಲಾಖೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಸುತ್ತಲೂ ಇರುವ ಹಲವು ಜಾತಿಯ ಜೀವವೈವಿಧ್ಯಗಳು ವರ್ಷದ ನಿರ್ದಿಷ್ಟ ಸಮಯದಲ್ಲಿ ವಲಸೆ ಹೋಗುವ ಸಾಧ್ಯತೆ ಇರುವುದರಿಂದ ಇತರ ಪ್ರದೇಶ ಯಾ ದೇಶಗಳೊಂದಿಗೆ ನಿರಂತರ ಸಂಪರ್ಕದ ಅಗತ್ಯವೂ ಇದೆ. ಸಮಶೀತೋಷ್ಣ ವಲಯದಲ್ಲಿರುವ ಹೆಚ್ಚು ನಗರೀಕೃತ ದೇಶಗಳಲ್ಲಿ ವನ್ಯಜೀವಿ ಪ್ರದೇಶ (ಕಾರಿಡಾರ್‌)ಗಳನ್ನು ರೂಪಿಸಬೇಕಾಗಿದೆ.

ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.