ಮನೆಯೇ ಇನ್ನು ಪಾಠಶಾಲೆ

ಮಕ್ಕಳ ಕಲಿಕೆ ಮನೆಯಲ್ಲೇಅಂತರ್ಜಾಲದ ಜತೆ ರಜೆ ಮಸ್ತಿ

Team Udayavani, May 2, 2021, 3:11 PM IST

covid effet

ಇವನು ಮನೆಯಲ್ಲಿದ್ರೆ ಏನಾದರೂ ಒಂದು ತರೆಲೆ ಮಾಡ್ತಾ ಇರ್ತಾನೆ. ಆನ್‌ಲೈನ್‌ ಕ್ಲಾಸ್‌ ದಿನಪೂರ್ತಿ ಇದ್ದಿದ್ರೆ ಚೆನ್ನಾಗಿತ್ತು. ಈ ಕೊರೊನಾದಿಂದ ಮಕ್ಕಳು ಹೊರಗೊಗಕ್ಕೂ ಆಗಲ್ಲ. ಮನೆಯಲ್ಲೂ ಸುಮ್ಮನಿರಲ್ಲ. ನಮಗೆ ಬೇರೆ ವರ್ಕ್‌ ಫ್ರಂ ಹೋಂ ಕೊಟ್ಟು ಸಂಕಷ್ಟಕ್ಕೆ ನೂಕಿದ್ದಾರೆ.

ಈ ರೀತಿಯ ಮಾತುಗಳು ಈಗ ಮನೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಮಗೆ ತೊಂದರೆ ನೀಡಬಾರದೆಂದು ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಗೇಮ್‌ ಆಡಲು ಬಿಟ್ಟುಬಿಡುವ ಪರಿಪಾಟ ಪೋಷಕರದ್ದು, ಮಕ್ಕಳು ಪ್ರತಿದಿನ ವಿಡಿಯೊ ಗೇಮ್‌ ಆಡುತ್ತಾ ದಿನದೂಡುತ್ತಾರೆ. ಅದರೆ, ಅವರಿಗೆ ಇದರಿಂದ ಕೌಶಲ್ಯ ಅಥವಾ ಮುಂದೆ ಅವರು ಓದಬೇಕಿರುವ, ಕಲಿಯಬೇಕಿರುವ ತರಗತಿಗಳಿಗೆ ಇದು ಅನುಕೂಲವಾಗುತ್ತದೆಯೇ ಎಂದು ತಂದೆ-ತಾಯಿಗಳು ಯೋಚಿಸುವುದೇ ಇಲ್ಲ.

ಮಕ್ಕಳ ಪ್ರತಿಭೆಯನ್ನು ಅರಳಿಸುವ ತಮ್ಮ ಜ್ಞಾನ, ಕೌಶಲ್ಯ ವೃದ್ಧಿಸುವಂತೆ ಮಾಡುವ ಅನೇಕ ಅವಕಾಶಗಳು ನಮ್ಮ ಸುತ್ತಮುತ್ತ ಇವೆ ಎಂಬುದನ್ನು ಪೋಷಕರು ಮನಗಾಣಬೇಕಿದೆ. ಇದಕ್ಕಾಗಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ತರಬೇತಿ ಶಿಬಿರ, ಪ್ರಾತ್ಯಕ್ಷಿಕಾ ತರಗತಿಗಳು, ಕಾರ್ಯಾಗಾರಗಳು ಒಂದು ದಿನದಿಂದ ತಿಂಗಳುಗಟ್ಟಲೆ ಕಾರ್ಯಕ್ರಮಗಳನ್ನು ನಡೆಸುತ್ತವೆ. ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಿಗೆ ಹತ್ತಿರವಾಗುತ್ತವೆ. ಈಗ ಸಾಮಾನ್ಯವಾಗಿ ಆನ್‌ಲೈನ್‌ ಕ್ಲಾಸಿಗಾಗಿ ಕನಿಷ್ಠ ಪಕ್ಷ ಪೋಷಕರ ಲ್ಯಾಪ್‌ ಟ್ಯಾಪ್‌ ಅಥವಾ ಮೊಬೈಲನ್ನೇ ಬಳಸುತ್ತಿದ್ದು, ಅದರ ಜತೆ ಆನ್‌ ಲೈನಿನಲ್ಲಿಯೇ ಶಿಬಿರಗಳನ್ನು ಪಡೆದರೆ ಮಕ್ಕಳಿಗೆ ಅನುಕೂಲವಾಗಲಿದೆ.

 ನಾಟಕದ ಜತೆ ಸಮ್ಮರ್‌ ಕ್ರೂಸ್‌

10 ದಿನಗಳ ಕಾಲ ನಡೆಯುವ ಈ ಆನ್‌ಲೈನ್‌ ಶಿಬಿರದಲ್ಲಿ ಮಕ್ಕಳು ವರ್ಚುಯಲ್‌ ಮೂಲಕ ಜಗತ್ತಿನ ನಾಟಕ, ಸಾಹಸ, ಸಂಗೀತ, ನೃತ್ಯ ಸೇರಿದಂತೆ ಐತಿಹಾಸಿಕ ವಿಷಯಗಳವೆ. ಗ್ರೇಟ್‌ ಪಿರಮಿಡ್‌, ಈಜಿಪ್ಟ್ ನ ಸಂಪತ್ತನ್ನು ಅನ್ವೇಷಣೆ, ತಾಜ್‌ ಮಹಲ್‌ ನ ಶ್ರೀಮಂತ ಇತಿಹಾಸ, ವೆನಿಸ್‌ ನ ಕಾಲುವೆಗಳ ಮೂಲಕ ಗೊಂಡೋಲಾ ಸವಾರಿ, ಶೇಕ್ಸ್ ಪಿಯರ್‌ ನ ಗ್ಲೋಬ್‌ ಥಿಯೇಟರ್‌ನ ವರ್ಚುಯಲ್‌ ಮಾಹಿತಿ, ಬ್ರೆಜಿಲ್‌ನ ಪ್ರಸಿದ್ಧ ರಿಯೋ ಕಾರ್ನಿವಲ್‌ ಆಚರಣೆಗಳ ವಿಷಯಗಳು ಇದರಲ್ಲಿ ಅಡಕವಾಗಿವೆ.  4ರಿಂದ6, 7ರಿಂದ9 ಮತ್ತು 10ರಿಂದ 13 ವರ್ಷದ ಮಕ್ಕಳಿಗಾಗಿ ಪ್ರತ್ಯೇಕ ಶಿಬಿರಗಳನ್ನು ಆಯೋಜಿಸಲಾಗಿದೆ. ಪಾಲ್ಗೊಂಡರೆ ಪ್ರಮಾಣಪತ್ರವೂ ಸಿಗಲಿದೆ. ಫ‌ಸ್ಟ್‌ ಬ್ಯಾಚ್‌ ಈಗಾಗಲೇ ಪ್ರಾರಂಭವಾಗಿದ್ದು 2ನೇ ಬ್ಯಾಚ್‌ ಮೇ 3ರಿಂದ 14ರವರೆಗೆ 10ದಿನಗಳ ಕಾಲ ನಡೆಯಲಿದೆ. ಮಾಹಿತಿಗೆ https:// in.bookmyshow.com/bengaluru/events/raellpadamsees-ace-summer-cruise-with-drama/ ET00305916/bookingStep/datetime ಮೊ. 9320130013 ಮೊ. 9320130013 ಸಂಪರ್ಕಿಸಿ.

ಬ್ಲಾಕ್‌ ಪ್ರಿಂಟಿಂಗ್‌

ಮಕ್ಕಳಲ್ಲಿ ಆರ್ಟ್‌ ಮತ್ತು ಡಿಸೈನ್‌ ಕೌಶಲ್ಯವನ್ನುನ ವೃದ್ಧಿಗೊಳಿಸಲು ಬ್ಲಾಕ್‌ ಪ್ರಿಂಟಿಂಗ್‌ ಸಮ್ಮರ್‌ ಕೋರ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೊಂದು ಕೌಶಲ್ಯಾಧಾರಿತ ಕಲಿಕೆ. ಇಲ್ಲಿ ಮಕ್ಕಳು ಮಾಧ್ಯಮ, ವರ್ಣಮಯ ಸಾಮಗ್ರಿಗಳು, ವಿವಿಧ ತಂತ್ರಗಳ ಮೂಲಕ ತಮ್ಮ ಆಲೋಚನೆಯನ್ನು ಸಕಾರಗೊಳಿಸಲು ಅನುಕೂಲವಾಗಿದೆ. ಮಕ್ಕಳು ಮುದ್ರಣ ಮಾಡಲು ಉಚಿತ ಕ್ಯಾನ್ವಾಸ್‌ ನೀಡಲಾಗುತ್ತದೆ. ಈ ಕೋರ್ಸ್‌ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಅನ್ವಯವಾಗಲಿದೆ. ಒಟ್ಟು ನಾಲ್ಕು ತರಗತಿಗಳಲ್ಲಿ ನಡೆಯುವ ಈ ತರಬೇತಿ ಮೇ 6, 13, 20, 27 ರಂದು ನಡೆಯಲಿದೆ. ಮಾಹಿತಿಗೆ 8861996557 ಸಂಪರ್ಕಿಸಿ.

ಸೌರವ್ಯೂಹದ ಅನ್ವೇಷಣೆ

8, 9, 10ನೇ ತರಗತಿ ಉತ್ತೀರ್ಣರಾದ(12 ವರ್ಷ ಮೇಲ್ಪಟ್ಟ) ವಿದ್ಯಾರ್ಥಿಗಳಿಗಾಗಿಆಯೋಜಿಸಿರುವ ಆನ್‌ ಲೈನ್‌ ಕಾರ್ಯಾಗಾರವಾಗಿದ್ದು, ಸೌರವ್ಯೂಹಕ್ಕೆ ಸಂಬಂಧಿಸಿದ ಆಕಾಶಕಾಯಗಳು, ಚಲನೆ, ವಿಶೇಷತೆ ನೆರೆ ಹೊರೆ ದೇಶದೊಂದಿಗೆ ಇತ್ತೀಚೆಗೆ ನಡೆಸಿದ ಆವಿಷ್ಕಾರಗಳ ಬಗೆಗೆ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮವು ಮೇ 8, 9, 15, 16 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ https:// in.bookmyshow.com/bengaluru/events/raellpadamsees-ace-summer-cruise-with-drama/ ET00305916/bookingStep/datetime Êæã. 9320130013 ಸಂಪರ್ಕಿಸಿ.

ಆನ್‌ಲೈನ್‌ ಛಾಯಾಗ್ರಹಣ

ಔಟ್‌ ಬ್ಯಾಕ್‌ ಎಕ್ಟೀರಿಯನ್ಸ್ ಸಂಸ್ಥೆಯು ಆಯೋಜಿಸುತ್ತಿರುವ ಆನ್‌ ಲೈನ್‌ ಫೋಟೋಗ್ರಫಿ ಸಮ್ಮರ್‌ ವರ್ಕ್‌ ಶಾಪ್‌ ನಲ್ಲಿ ಮಕ್ಕಳು ಮನೆಯಲ್ಲೇ ಕುಳಿತು ಫೋಟೋಗ್ರಫಿಯನ್ನು ಕಲಿಯುವಂಥ ಅವಕಾಶಗಳನ್ನು ಒದಗಿಸಲಾಗುತ್ತದೆ. ಛಾಯಾಗ್ರಹಣದ ವಿವಿಧ ತಾಂತ್ರಿಕ ವಿಷಯಗಳು, ಕ್ಯಾಮೆರಾ ಬಳಕೆ, ವಿಶೇಷ ಸಂದರ್ಭಗಳಲ್ಲಿ ಕ್ಯಾಮೆರಾ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳು ಇದರಲ್ಲಿದೆ. 10-16 ವರ್ಷದ ಮಕ್ಕಳಿಗೆ ಈ ಕಾರ್ಯಾಗಾರವನ್ನು ಆಯೋಜಿ ಸಲಾಗಿದ್ದು, ಬ್ಯಾಚ್‌- ಮೇ 19-23ರ ವರೆಗೆ ನಡೆಯಲಿದೆ. ಇದ ಪೂರ್ಣ ಆನ್‌ ಲೈನ್‌ ಮೂಲಕವೇ ನಡೆಯುವ ವರ್ಕ್‌ ಶಾಪ್‌ ಆಗಿದ್ದು, https://www.theoutbackexperience.in/ portfolio/virtual&online&kids&photography&w orkshop/ ಮೂಲಕ ನೋಂದಾ ಯಿಸಿ ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9900147018 ಸಂಪರ್ಕಿಸಿ.

ಡ್ರೋನ್‌ ಮತ್ತು ಕೋಡಿಂಗ್‌ ಕಲಿಕೆ

ಕಿಡ್ಡಿಪಿ ಸಂಸ್ಥೆಯು ಮಕ್ಕಳಿಗಾಗಿ ಡ್ರೋನ್‌ ಮತ್ತು ಕೋಡಿಂಗ್‌ ಕಲಿಕೆ ಮೂಲಕ ಮಕ್ಕಳ ಮೆದುಳಿನ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಶಿಬಿರವನ್ನು ಆಯೋಜಿಸಿದೆ. ಇದರಲ್ಲಿ ಕೋಡಿಂಗ್‌ ಕಿಟ್‌ಗಳು, ಡ್ರೋನ್‌ ನಿರ್ಮಾಣ ಮತ್ತು ಅದರ ನಿಯಂತ್ರಿಸುವ ತರಬೇತಿಗಳನ್ನು ಅಳವಡಿಸಲಾ ಗಿದೆ. ಇದಲ್ಲದೆ ಎಂಜಿನಿಯ ರಿಂಗ್‌ ಅಂಡ್‌ ಎರೋ, ರೊಬೋಟಿಕ್‌, ಎಲೆಕ್ಟಾನಿಕ್ಸ್‌, ಎಕೆøಷನ್‌, ಕ್ರಿಯೆಟಿವಿಟಿ ಮತ್ತು ಲಾಗÌಜ್‌ ತರಬೇತಿಗಳೂ ಇವೆ. 1ರಿಂದ 2 ವಾರಗಳು ನಡೆಯು ಶಿಬಿರದಲ್ಲಿ 9 ವರ್ಷ ಮೇಲ್ಪಟ್ಟ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಮಾರ್ಚ್‌, ಏಪ್ರಿಲ್‌ನಲ್ಲಿ ಎರಡು ಶಿಬಿರಗಳು ನಡೆದಿವೆ. ಮೇ, ಜೂನ್‌ನಲ್ಲಿಯೂ ಶಿಬಿರಗಳು ನಡೆಯಲಿದ್ದು, ಶುಲ್ಕವನ್ನು ನಿಗದಿ ಮಾಡಲಾಗಿದೆ. ಮಾಹಿತಿಗೆ http://bit.ly/kpbb_ summercamps2022,, ಮೊ. 91 9845349742, 91 7406419320 ಸಂಪರ್ಕಿಸಿ.

ಮಕ್ಕಳಿಗಾಗಿ ವೈಜ್ಞಾನಿಕ ಚಿಂತನೆ

ಇಂದಿನ ಮಕ್ಕಳಿಗೆ ವಿಜ್ಞಾನ ಕುತೂಹಲ, ರೋಮಾಂಚನಕಾರಿ ಮತ್ತು ಆಸಕ್ತಿದಾಯಕ ವಿಷಯವಾಗಿದೆ. ವೈಜ್ಞಾನಿಕ ಮನೋ ಧರ್ಮ ಹೆಚ್ಚಿಸುವುದು, ವಿಜ್ಞಾನವು ಹೇಗೆ ಕಾರ್ಯನಿರ್ವ ಹಿಸುತ್ತದೆ ಎಂಬುದರ ಜಾಗೃತಿ, ವಿಮಶಾìತ್ಮಕ ಚಿಂತನೆ, ಆತ್ಮವಿಶ್ವಾಸ ವನ್ನು ಬೆಳೆಸಿ ಪ್ರಶ್ನಾತ್ಮಕ ಪ್ರವೃತಿಯನ್ನು ಜಾಗೃತಗೊಳಿಸುವುದು ಈ ಶಿಬಿರದ ಉದ್ದೇಶ. ಇದರಲ್ಲಿ ಗುಂಪು ಎ ಮತ್ತು ಬಿ ಎಂದು ವಿಂಗಡನೆ ಮಾಡಿದ್ದು ಎ ಗುಂಪಿನಲ್ಲಿ 1-4ನೇ ತರಗತಿ ಮಕ್ಕಳಿಗೆ ಮತ್ತು ಗುಂಪು ಬಿ ನಲ್ಲಿ 5-8ನೇ ತರಗತಿ ಮಕ್ಕಳಿಗೆ ಕಾರ್ಯಾಗಾರ ನಡೆಸಲಾ ಗುವುದು.

ಗುಂಪು ಎ: ಮಕ್ಕಳಿಗೆ ಎಲೆಕ್ಟ್ರಿಕ್‌ ಸರ್ಕಿಟ್‌, ಸರಳ ಯಂತ್ರಗಳು, ಗಾಳಿ-ನೀರಿನ ಒತ್ತಡ, ರಾಸಾಯನಿಕ ಕ್ರಿಯೆಗಳ ಕುರಿತು ತಿಳಿಸಲಾಗುತ್ತದೆ.

ಗುಂಪು ಬಿ: ಮಕ್ಕಳಿಗೆ ಬಲಗಳು, ಮಸೂರಗಳು ಮತ್ತು ದೃಗ್ವಿಜ್ಞಾನದ ಸಮತೋಲನ. ರಾಸಾಯನಿಕ ಕ್ರಿಯೆಗಳು, ಲೋಳೆ, ಧಾತುಗಳು ಮತ್ತು ಸಂಯುಕ್ತಗಳು. ನೊರೆ ಉತ್ಪಾದನೆ, ಸ್ಲೆ„ಡ್‌ ತಯಾರಿಕೆ, ಮೈಕ್ರೋಸ್ಕೋಪಿ ಕುರಿತು ವಿವರಿಸ ಲಾಗುತ್ತದೆ. ಒಟ್ಟಾರೆ 6-14 ವರ್ಷದ ಮಕ್ಕಳಿಗೆ ಆನ್‌ ಲೈನ್‌ ಮತ್ತು ಆಫ್ಲೈನ್‌ ಮೂಲಕ ಕಾರ್ಯಾಗಾರ ನಡೆಸಲಿದ್ದು, ಈಗಾಗಲೇ ಒಂದು ತರಗತಿ ಪ್ರಾರಂಭವಾಗಿ 2ನೇ ಬ್ಯಾಚ್‌ ಮೇ 7ಕ್ಕೆ ಶುರುವಾಗಲಿದೆ. ಮಾಹಿತಿಗೆ ರಂಜನಾ ಆನಂದ್‌ 9945275572, 9900084641 ಸಂಪರ್ಕಿಸಿ.

ತಾರಾಲಯದಲ್ಲಿ ವಿವಿಧ ಬೇಸಿಗೆ ಶಿಬಿರ

ಬೆಂಗಳೂರಿನ ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ಮಕ್ಕಳಿಗೆ ವಿಜ್ಞಾನ ಕುರಿತು ಆಸಕ್ತಿ ಮೂಡಿಸಲು, ಸೃಜನಾತ್ಮಕ ಕಲಿಕೆಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆ.

  1. ಮಕ್ಕಳಿಗಾಗಿ ಕಮ್ಮಟ( ಟಿನಿ ಟಾಟ್ಸ್‌): ಈ ಶಿಬಿರವು ಎಂಟು ವರ್ಷ ಮೇಲ್ಪಟ್ಟ 3,4,5 ನೇ ತರಗತಿ ಓದುತ್ತಿರುವ ಮಕ್ಕಳಿಗಾಗಿ ವಿನ್ಯಾಸಗೊಳಿ ಸ ಲಾಗಿದೆ. ಇದು ಎರಡು ಗಂಟೆಗಳ ಕಾಲದ ಆನ್‌ ಲೈನ್‌ ಕಾರ್ಯಕ್ರಮವಾಗಿದ್ದು, ಮೇ 4 ರಂದು ಈ ಕಮ್ಮಟ ನಡೆಯಲಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮಾಡಬಹುದಾದ ಸರಳ ವಿಜ್ಞಾನ ಪ್ರಯೋಗಗಳ ಬಗ್ಗೆ ತಿಳಿಸಿಕೊಡಲಾಗುವುದು. ಸಾಮಗ್ರಿಗಳ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ನೀಡಲಾಗುವುದು. ಪ್ರಯೋಗವನ್ನು ಜತೆಯಲ್ಲೇ ಮಾಡುವ ಅವಕಾಶ ಕಮ್ಮಟದಲ್ಲಿದೆ. ನೋಂದಣಿಗೆ æ https://in.bookmyshow.com/events/ summer&programmes&2021/ET00310321? webview=true ಸಂಪರ್ಕಿಸಿ

ಟಾಪ್ ನ್ಯೂಸ್

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

Mehbooba Mufti,

ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

thumb 2

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

Untitled-1

ಸಮವಸ್ತ್ರ ಸಮಾಚಾರ: ನಿಮ್ಮ ಮಕ್ಕಳ ಯೂನಿಫಾರಂ ಎಲ್ಲಿಂದ ಬರುತ್ತೆ?

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಡೆಂಗ್ಯೂ ಪ್ರಕರಣ ಭಾರೀ ಏರಿಕೆ : ಇಂದು ರಾಷ್ಟ್ರೀಯ ಡೆಂಗ್ಯೂ ದಿನ

ಡೆಂಗ್ಯೂ ಪ್ರಕರಣ ಭಾರೀ ಏರಿಕೆ : ಇಂದು ರಾಷ್ಟ್ರೀಯ ಡೆಂಗ್ಯೂ ದಿನ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

khadar

ನವ ಸಮಾಜ ನಿರ್ಮಾಣದ ಕಾರಣಕರ್ತರಾಗಿ: ಖಾದರ್‌

1

2.08 ಲಕ್ಷ ಕ್ವಿಂಟಲ್‌ ಕಡಲೆ ಖರೀದಿ

bottadka

ಕಡಬ:ಬೊಟ್ಟಡ್ಕದಲ್ಲಿ ಆಗಬೇಕಿದೆ ರೈಲ್ವೇ ಅಂಡರ್‌ಪಾಸ್‌

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.