Udayavni Special

ಮಳೆಗಾಲದ ಕೇಶವಿನ್ಯಾಸ


Team Udayavani, Jul 24, 2019, 12:57 PM IST

HA

ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ಹುಡುಗಿಯರು ತಲೆಕೆಡಿಸಿಕೊಳ್ಳುವ ಕಾಲವಿದು. ಹಾಗಾಗಿಯೇ, ಮಳೆಗಾಲದ ಕೇಶವಿನ್ಯಾಸದ ಮಾಹಿತಿ ನಿಮಗಾಗಿ.

ಕ್ರೌನ್‌ ಬ್ರೈಡೆಡ್‌ ಬನ್‌
ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಮೇಲೆ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈಪೋನಿ ಕಟ್ಟಿಕೊಂಡಲ್ಲಿ ಹೇರ್‌ಪಿನ್‌ ಸಹಾಯದಿಂದ ಪಿನ್‌ ಮಾಡಿ. ಈ ವಿನ್ಯಾಸ, ಉದ್ದ ಕೂದಲಿಗೆ ಹೆಚ್ಚು ಸೂಕ್ತ.

ಬ್ಯಾಲೆರಿನಾ ಬನ್‌
ಕೂದಲನ್ನು ಚೆನ್ನಾಗಿ ಬಾಚಿ, ಪೂರ್ತಿ ಕೂದಲನ್ನು ಒಟ್ಟುಗೂಡಿಸಿ ಮೂರು ಅಥವಾ ನಾಲ್ಕು ಸುತ್ತು ಸುತ್ತಿಕೊಂಡು, ಕುತ್ತಿಗೆಯ ಸ್ವಲ್ಪವೇ ಮೇಲೆ, ಎರಡೂ ಕಿವಿಗಳ ಮಧ್ಯದಲ್ಲಿ ಸಮನಾಗಿ ಕ್ಲಿಪ್‌ಗ್ಳ ಸಹಾಯದಿಂದ ಬನ್‌ ಶೇಪ್‌ನಲ್ಲಿ ಟಕ್‌ ಮಾಡುವ ಈ ಸ್ಟೈಲ್‌ ಮಳೆಗಾಲಕ್ಕೆ ಸೂಕ್ತ.

ಸೈಡ್‌ ಫ್ರೆಂಚ್‌ ಪ್ಲೀಟೆಡ್‌ ಬನ್‌
ಕೂದಲನ್ನು ಸೈಡ್‌ನ‌ಲ್ಲಿ ಭಾಗ ಮಾಡಿಕೊಂಡು, ಹೆಚ್ಚು ಕೂದಲಿರುವ ಭಾಗದಲ್ಲಿ ಮತ್ತೆ ಮೂರು ಭಾಗ ಮಾಡಿ, ಫ್ರೆಂಚ್‌ ಪ್ಲೇಟ್‌ ಹಾಕಿ ರಬ್ಬರ್‌ ಬ್ಯಾಂಡ್‌ನಿಂದ ಕಟ್ಟಿ. ಉಳಿದ ಕೂದಲನ್ನು ಅದೇ ಸೈಡ್‌ ಬಾಚಿಕೊಂಡು ಬನ್‌ ಹಾಕಿಕೊಳ್ಳಿ.

ಡಬಲ್‌ ಪ್ಲೀಟೆಡ್‌ ಬನ್‌
ಕೂದಲನ್ನು ಚೆನ್ನಾಗಿ ಬಾಚಿಕೊಂಡು, ತಲೆಯ ಕೆಳಭಾಗದಿಂದ ಸರಿಯಾಗಿ ಎರಡು ಭಾಗ ಮಾಡಿಕೊಂಡು, ಎರಡು ಜಡೆ ಹಾಕಿಕೊಳ್ಳಿ. ಈ ಜಡೆಗಳಿಂದ ತಲೆಯ ನಡುಭಾಗದಲ್ಲಿ ಬಿಗಿಯಾಗಿ ಗಂಟು ಹಾಕಿಕೊಳ್ಳಿ. ಈ ಗಂಟು ಗಟ್ಟಿಯಾಗಿರಲು ಹೇರ್‌ಪಿನ್‌ ಅನ್ನು ಹಾಕಿ. ಉಳಿದ ಕೂದಲನ್ನು ಗಂಟು ಹಾಕಿಕೊಂಡ ಕೂದಲಿಗೆ ಕ್ಲಾಕ್‌ವೆçಸ್‌ ಆಗಿ ಜೋಡಿಸಿಕೊಳ್ಳಬೇಕು. ಎಲ್ಲ ಕೂದಲನ್ನು ಜೋಡಿಸಿಕೊಂಡ ನಂತರ ಹೇರ್‌ಪಿನ್‌ನಿಂದ ಭದ್ರಗೊಳಿಸಿ.

ಪ್ರಟ್ಜೆಲ್‌ ಬನ್‌
ಕೂದಲನ್ನು ಬಾಚಿಕೊಂಡು, ಎರಡರಿಂದ ಮೂರು ಸುತ್ತು ಸುತ್ತಿ, ಕಿವಿಯ ಹತ್ತಿರ ಒಂದು ಬದಿಯಲ್ಲಿ ಲೂಸ್‌/ಮೆಸ್ಸಿಯಾಗಿ ಬನ್‌ ಹಾಕಿಕೊಳ್ಳಬೇಕು. ಹಣೆಯಿಂದ/ಕೆನ್ನೆಯ ಬದಿಯಿಂದ ಒಂದೊಂದು ಕೂದಲನ್ನು ಕರ್ಲ್ ಮಾಡಿಕೊಂಡು ಟೈ ಮಾಡದೆ ಹಾಗೇ ಬಿಡಬೇಕು.

ಟ್ರೈ ಟ್ವಿಟ್ಟೆಡ್‌ ಪೋನಿ ಬನ್‌
ಕೂದಲನ್ನು ಮೂರು ಪಾಲು ಮಾಡಿ. ಮೂರು ಪಾಲನ್ನೂ ಟ್ವಿಸ್ಟ್‌ ಮಾಡಿ ಹೇರ್‌ಪಿನ್‌ ಸಹಾಯದಿಂದ ಮೂರು ಸ್ಟೆಪ್‌ ಜಡೆ ಹೆಣೆದು, ಪೋನಿಟೇಲ್‌ ಹಾಕಿಕೊಳ್ಳಬೇಕು. ನಂತರ ಅದೇ ಪೋನಿಯನ್ನು ಬನ್‌ ಮಾಡಿಕೊಳ್ಳಬೇಕು.

– ಮೇಘನಾ ಮಂಗಳೂರು

ಟಾಪ್ ನ್ಯೂಸ್

honda

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !

david attenborough

ಎದುರಾಗಲಿದೆ ಕೋವಿಡ್ ಮೀರಿದ ದೊಡ್ಡ ಸ‌ವಾಲು!

ghfvj

ಉಗ್ರರ ಅಟ್ಟಹಾಸ :ಗಾಜಾದಲ್ಲಿ 35 ಜನ, ಇಸ್ರೇಲಿನಲ್ಲಿ ಭಾರತೀಯ ಮಹಿಳೆ ಸೇರಿ 3 ಸಾವು

darshan-1620756574

ದರ್ಶನ್ ಫಾರ್ಮ್ ಹೌಸ್ ಗೆ ಹೊಸ ಅತಿಥಿಯಾಗಿ ಬಂದ ಗಿಣಿರಾಮ

ಶುಶ್ರೂಷಕಿಯರಿಗೆ ನಮನ : ಇಂದು ದಾದಿಯರ ದಿನ

ಶುಶ್ರೂಷಕಿಯರಿಗೆ ನಮನ : ಇಂದು ದಾದಿಯರ ದಿನ

rahul dravid coach

ಲಂಕಾ ಸರಣಿಗೆ ಯುವ ತಂಡಕ್ಕೆ ರಾಹುಲ್ ದ್ರಾವಿಡ್‌ ಕೋಚ್‌?

ಕೋವಿಡ್ ಪ್ರಕರಣ : ನರೇಗಾ ಕೆಲಸ ಸ್ಥಗಿತ ,ಮೇ 24ರ ವರೆಗೆ ಇಲ್ಲ ಎಂದ ಗ್ರಾ. ಇಲಾಖೆ

ಕೋವಿಡ್ ಪ್ರಕರಣ : ನರೇಗಾ ಕೆಲಸ ಸ್ಥಗಿತ ,ಮೇ 24ರ ವರೆಗೆ ಇಲ್ಲ ಎಂದ ಗ್ರಾ. ಇಲಾಖೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ikyuuu6

ಟೊಮ್ಯಾಟೊದಲ್ಲಿದೆ ಸೌಂದರ್ಯದ ಗುಟ್ಟು

fgdgete

ಸಖತ್ತಾಗಿದೆ ಫ್ಯಾಶನ್ ಪ್ರಿಯೆ ನೋರಾ ಫೇತೆಹಿ ನ್ಯೂ ಲುಕ್

jksdasasaas

ದೇಹದಿಂದ ಹೊಮ್ಮುವ ದುರ್ನಾತ ತಡೆಯುವುದು ಹೇಗೆ ? ಇಲ್ಲಿವೆ ಕೆಲವು ಟಿಪ್ಸ್   

fcngfgdfxgdf

ಮದುಮಗಳಿಗೆ ಒಡವೆಗಳೇ ವೈಯ್ಯಾರ : ಚೆಂದನೆಯ ಆಭರಣ ಆಯ್ಕೆಗೆ ಇಲ್ಲಿವೆ ಕೆಲವು ಟಿಪ್ಸ್

eye-bro

ಐಬ್ರೋ ಕೂದಲು ಮತ್ತೆ ಬೆಳೆಯಬೇಕೆ ? ಹಾಗಾದರೆ ಈ ಸುದ್ದಿ ತಪ್ಪದೆ ಓದಿ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

gfrtfdfd

ಕೋವಿಡ್‌ ಬೆಡ್‌ಗಳ ಸಂಖ್ಯೆ 250ಕ್ಕೆ ಏರಿಕೆ!

jಜಜಜಜಜಜಜಜಜಜಜಜಜ

ಪೊಲೀಸ್‌ ಬಿಗಿ ಕ್ರಮ: ಜನರ ಪರದಾಟ

dfhfhhhhh

ಪಾಲಿಕೆ ವಾರ್ಡ್‌ ಮೀಸಲಾತಿಗೆ ಅಧಿಸೂಚನೆ

dfhf

ಆಮ್ಲಜನಕ ಕೊರತೆಯಿಂದ ಗೋವಾದಲ್ಲಿ 4 ಗಂಟೆಯಲ್ಲಿ 26 ಮಂದಿ ಸಾವು!

honda

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.