ಸ್ಲೋಗನ್‌ ಹೇರ್‌ ಕ್ಲಿಪ್‌

Team Udayavani, Jun 21, 2019, 1:23 PM IST

ಫ್ಯಾಶನ್‌ ಲೋಕ ನಿಂತ ನೀರಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ದಿನದಿಂದ ದಿನಕ್ಕೆ ಇಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತವೆ, ಹೋಗುತ್ತವೆ. ಉಡುಗೆ, ಚಪ್ಪಲ್‌, ವಾನಿಟ್‌ ಬ್ಯಾಗ್‌ ಹೀಗೆ ಪ್ರತಿಯೊಂದು ಫ್ಯಾಶನೇಬಲ್‌ ವಸ್ತುಗಳಲ್ಲಿ ಪ್ರತಿದಿನ ವಿನೂತನ, ವೈಶಿಷ್ಟಗಳಿಂದ ಕೂಡಿರುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ತಲೆಗೆ ಹಾಕುವ ಹೇರ್‌ಕ್ಲೀಪ್‌ನಿಂದ ಹಿಡಿದು, ಕಾಲಿಗೆ ಹಾಕುವ ನೈಲ್‌ಪಾಲೀಶ್‌ನ ವರೆಗೂ ಹೊಸ ಹೊಸ ಟ್ರೆಂಡ್‌ಗಳು ಕಾಲಿಡುತ್ತಿವೆ.

ಹೇರ್‌ ಕ್ಲೀಪ್‌ ಎಂದಾಕ್ಷಣ ನೆನೆಪಾಗುವುದು ಹಳೆ ಮಾದರಿಯ, ಕಪ್ಪು ವರ್ಣದ, ಕೋಲಿನಂತಿರುವ ಕ್ಲೀಪ್‌ಗ್ಳು. ಅನಂತರ ಬಂದಿದ್ದು ಕಲರ್‌ಫ‌ುಲ್‌, ಆಕರ್ಷಕ, ವಿವಿಧ ಮಾದರಿಯ ಹೇರ್‌ಕ್ಲೀಪ್‌ಗ್ಳು ಮಾರುಕಟ್ಟೆಗೆ ಬಂದವು. ಪುಟ್ಟ ಹೆಣ್ಣು ಮಕ್ಕಳ ತಲೆಯಲ್ಲಿ ಬಣ್ಣ ಬಣ್ಣದ ಕ್ಲಿಪ್‌ಗ್ಳು ರಾರಾಜಿಸಿದರೆ, ಬಗೆ ಬಗೆ ವಿನ್ಯಾಸದ ಹೇರ್‌ ಕ್ಲಿಪ್‌ಗ್ಳು ಯುವತಿಯರ ಮನ ಸೆಳೆಯುತ್ತವೆ. ಮುತ್ತುಗಳು, ಹೂವುಗಳು, ಚಿಟ್ಟೆಗಳು ಹೇರ್‌ಕ್ಲೀಪ್‌ಗ್ಳನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ಇದೀಗ ಸ್ಲೋಗನ್‌ ಹೇರ್‌ ಕ್ಲಿಪ್‌ಗ್ಳ ಆಗಮನವಾಗಿದೆ.

ವಿದೇಶದ ಫ್ಯಾಶನ್‌ ಲೋಕದ ದಿಗ್ಗಜರು ಈ ಸ್ಪೇಲ್ಲಿಂಗ್‌ ಕ್ಲಿಪ್‌ಗ್ಳಿಗೆ ಮಾರು ಹೋಗಿದ್ದಾರೆ. ರ್‍ಯಾಂಪ್‌ನಲ್ಲಿ ನಡೆಯುವ ರೂಪದರ್ಶಿಯ ಸ್ಟೈಲ್‌ ಸೇಟ್‌ಮೆಂಟ್‌ ಆಗಿ ಈ ಸ್ಪೆಲ್ಲಿಂಗ್‌ ಕ್ಲಿಪ್‌ಗ್ಳು ಸ್ಥಾನ ಪಡೆದಿವೆ . ಭಾರತಕ್ಕೆ ಇನ್ನಷ್ಟೇ ಈ ಹೇರ್‌ಕ್ಲೀಪ್‌ಗ್ಳು ಕಾಲಿಡಬೇಕಾಗಿದೆ. ಎಲ್ಲ ಮಾದರಿಯ ಉಡುಗೆಗಳಿಗೆ ಈ ಕ್ಲೀಪ್‌ಗ್ಳು ಒಪ್ಪುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಅಷ್ಟೇ ಎಲ್ಲ ಉಡುಗೆಗಳಲ್ಲಿ ಹಳೆಯ ವಿನ್ಯಾಸಗಳು ಮೂಲೆಗುಂಪಾದಂತೆ ಈ ಕ್ಲೀಪ್‌ಗ್ಳು ಮೂಲೆ ಗುಂಪಾಗಲು ಸಾಧ್ಯವಿಲ್ಲ.

ವಿದೇಶಿ ವಿನ್ಯಾಸಕಾರ್ತಿಯರಾದ ಸಿಮೋನೆ ರೊಚಾ, ಆಶ್ಲೇ ವಿಲಿಯಮ್ಸ್‌ ಇವರ ಕೈ ಚಳಕದಲ್ಲಿ ಈ ಸ್ಲೋಗನ್‌/ ಸ್ಪೇಲ್ಲಿಂಗ್‌ ಹೇರ್‌ ಕ್ಲೀಪ್‌ ರೂಪುಗೊಂಡಿದೆ. ಡೆನ್ಮಾರ್ಕ್‌ನ ಕೋಪನ್‌ ಹ್ಯಾಗನ್‌ನಲ್ಲಿ ನಡೆದ ಪ್ಯಾಶನ್‌ ವೀಕ್‌ನಲ್ಲಿ ಈ ಸ್ಲೋಗನ್‌ ಹೇರ್‌ ಕ್ಲೀಪ್‌ಗ್ಳ ಜನಪ್ರಿಯತೆ ಹೆಚ್ಚಿತು. ಯಾವುದೇ ಮಾರ್ಡನ್‌ ಡ್ರೆಸ್‌ಗಳಿಗೆ ಸ್ಪೇಲ್ಲಿಂಗ್‌ ಹೇರ್‌ ಕ್ಲೀಪ್‌ ಸೂಟ್‌ ಆಗುತ್ತವೆ. ವಿದೇಶಿ ವಧುಗಳು ತಮ್ಮ ಮದುವೆ ಸಮಾರಂಭ ದಲ್ಲಿಯೂ ಧರಿಸಲು ಇಷ್ಟಪಡುತ್ತಿದ್ದಾರೆ‌. ಅಷ್ಟರ ಮಟ್ಟಿಗೆ ಇದರ ಬೇಡಿಕೆ ಯುರೋಪ್‌ ಮಾರುಕಟ್ಟೆಯಲ್ಲಿದೆ.

ಏನಿದು ಸ್ಲೋಗನ್‌ ಹೇರ್‌ಕ್ಲಿಪ್‌?
ಇದೀಗ ಹೇರ್‌ಕ್ಲಿಪ್‌ಗ್ಳ ಲೋಕಕ್ಕೆ ಕಾಲಿಟ್ಟಿರುವ ಹೊಸ ವಿನ್ಯಾಸ ಸ್ಲೋಗನ್‌ ಹೇರ್‌ ಕ್ಲಿಪ್‌. ಪದಗಳಿ ರುವ ಹೇರ್‌ ಕ್ಲಿಪ್‌ಗ್ಳು ಇಂದಿನ ಟ್ರೆಂಡಿ ಹೇರ್‌ ಕ್ಲಿಪ್‌ಗ್ಳು. ಹಲೋ, ಎಸ್‌, ಕ್ರೆಜೀ, ಲಕ್‌, ಡ್ರೀಮ್‌ ಗರ್ಲ್, ಕ್ಯೂಟ್‌ ಹೀಗೆ ನಾನಾ ಪದಗಳು ಈ ಕ್ಲಿಪ್‌ನಲ್ಲಿ ಮುದ್ರಿತವಾಗಿರುತ್ತವೆ. ಉಡುಗೆಗೆಳಿಗೆ ಸೂಕ್ತವಾಗಂತಹ ಹೇರ್‌ಕ್ಲಿಪ್‌ಗ್ಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮೂಡ್‌ಗೆ ಸರಿಹೊಂದುವ ಕ್ಲಿಪ್‌ಗ್ಳನ್ನು ಧರಿಸಿ ನಿಮ್ಮ ಮನದ ಭಾವನೆಯನ್ನು ತಿಳಿಸಬಹುದು.

– ಧನ್ಯಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವ್ಯಕ್ತಿಯೊಬ್ಬನ ಶಕ್ತಿ ಅಡಗಿರುವುದು ತೋಳಿನಲ್ಲಿ ಅಂತ ನಂಬಿಕೆ. ಅದಕ್ಕೇ ತೋಳ್ಬಲ, ಭುಜಬಲ ಅಂತೆಲ್ಲಾ ಹೇಳುವುದು. ಹಾಗೆಯೇ, ವಸ್ತ್ರದ ಸೌಂದರ್ಯ ಕೂಡಾ ತೋಳಿನಲ್ಲಿ...

  • ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು,...

  • ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ...

  • ಹೆಣ್ಣು ಮತ್ತು ಹೂವು ಇವೆರಡೂ ಜೋಡಿ ಪದಗಳು. ಚೆಲುವು ಹೂವಿನಧ್ದೋ, ಹೂವು ಮುಡಿದ ಹೆಣ್ಣಿನಧ್ದೋ ಎಂಬುದು ಕವಿಗಳ ಜಿಜ್ಞಾಸೆ. ಹೀಗೆ ಹೆಣ್ಣಿನೊಂದಿಗೆ ನಡೆದು ಬಂದ...

  • ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸು ಭಾರತದ ಇತರ ರಾಜ್ಯಗಳ ದಿರಿಸಿಗಿಂತ ಭಿನ್ನವಾಗಿದೆ. ನಾಗಾಲ್ಯಾಂಡ್‌ ಜನತೆ ತಮ್ಮ ಸಾಂಪ್ರದಾಯಿಕತೆ...

ಹೊಸ ಸೇರ್ಪಡೆ