Udayavni Special

ಸಹೋದರ ಪ್ರೇಮವನ್ನು ಪ್ರತಿಬಿಂಬಿಸುವ ರಕ್ಷಾಬಂಧನ..!


Team Udayavani, Aug 22, 2021, 6:25 PM IST

Happy Raksha Bhandan 2021 Special Article

ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕೇಸರಿ ದಾರ ಕಟ್ಟುವುದರ ಮೂಲಕ ರಕ್ಷೆಯ ಪತೀಕವಾಗಿ ಕಟ್ಟಿ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಸಹೋದರಿ ಸಹೋದರಿಯ ಕೈ ಗೆ ಕಟ್ಟುವುದದು ಬರಿಯ ದಾರವಲ್ಲ, ಅದು ರಕ್ಷೆಯ ಪ್ರತೀಕ.

ಅದರಲ್ಲಿ ಸಹೋದರ ಸದಾಕಾಲ ತನ್ನನ್ನು ರಕ್ಷಿಸಬೇಕು ಹಾಗೂ ಸಹೋದರನೂ ಕೂಡ ಸದಾ ಶ್ರೀರಕ್ಷೆಯಿಂದಿರಬೇಕು ಎಂಬ ಆಶಯ ಅಡಗಿದೆ. ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಕಂಡಬರುವ ವೈವಿಧ್ಯಮಯ ಆಚರಣೆಗಳಲ್ಲಿ ಈ ಹಬ್ಬವು ಕೂಡ ಒಂದು.

ರಕ್ಷಾಬಂಧನ ಎಂದರೆ ಕೇಸರಿ ದಾರ ಕಟ್ಟಿ, ಉಡುಗೊರೆ ನೀಡುವುದಷ್ಟೆ ಅಲ್ಲ, ‘ಪ್ರೀತಿ,ಮಮತೆಯನ್ನು ತುಂಬಿ ನಾ ಬದುಕಿರುವ ತನಕ ನನ್ನ ಅಣ್ಣ ಖುಷಿಯಾಗಿರಬೇಕು, ಈ ರಕ್ಷೆ ಸದಾ ನನ್ನ ಸಹೋದರನನ್ನು ರಕ್ಷಿಸಬೇಕು ಎಂಬ ಆಶಯದೊಂದಿಗೆ ಸಹೋದರಿ ಪ್ರೀತಿಯಿಂದ ಕಟ್ಟುವ ರಕ್ಷೆ.

ಇದನ್ನೂ ಓದಿ : ಆಗಸ್ಟ್ 23ರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ದಾಖಲಾತಿ ಆರಂಭ :ಸಚಿವ ಅಶ್ವತ್ಥನಾರಾಯಣ

ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ – ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ರಕ್ಷಾ ಬಂಧನ ರಕ್ಷೆ ಹಾಗೂ ಬಂಧನ ಎಂಬ ಎರಡು ಪದಗಳಿಂದ ಕೂಡಿದೆ.

ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನ ಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.

ತಂಗಿಯಾದವಳಿಗೆ ಅಣ್ಣ ಕೇವಲ ಸಂಬಂಧವಲ್ಲ ಅಳುವಾಗ ಕಣ್ಣೊರೆಸುವ ಕೈಯಾಗುತ್ತಾನೆ, ನೊಂದಾಗ ಮಿಡಿಯುವ ಹೃದಯವಾಗುತ್ತಾನೆ, ರಕ್ಷಣೆಗೆ ಸದಾ ಸಿದ್ದವಿರುವ ಯೋಧನಾಗಿರುತ್ತಾನೆ, ಅಂತೆಯೇ ತಂಗಿ ಅಣ್ಣನಾದವನ ಪ್ರತಿ ಭಾವನೆಗೆ ಸ್ಪಂದಿಸುವ ಗೆಳತಿಯಾಗಿರುತ್ತಾಳೆ, ಆರೋಗ್ಯ ಕೆಟ್ಟಾಗ ಸೇವೆ ಮಾಡುವಸೇವಕಿಯಾಗಿರುತ್ತಾಳೆ. ಇದು ಕೇವಲ ರಕ್ಷೆಯ ಬಂಧನವಲ್ಲ ಮಧುರ ಪ್ರೀತಿಯ ಬಂಧನ.

ಈ ಪರಿಸ್ಥಿತಿಯಲ್ಲಿ ಯುದ್ಧ ಮಾಡಲಾರೆ, ಮಾಡದೆ ಇರಲಾರೆ, ಏನು ಮಾಡಬೇಕೆಂದು ಅರಿಯದವನಾಗಿದ್ದೇನೆ. ಯಾವುದಾದರೂ ಉಪಾಯ ಸೂಚಿಸಿ’ಎಂದಾಗ ದೇವೇಂದ್ರನ ವೇದನೆ ಅರಿತು ವಿಜಯ ಪ್ರಾಪ್ತಿಯಾಗಲು, ಶ್ರಾವಣಪೂರ್ಣಿಮೆ ದಿನ ರಕ್ಷಾವಿಧಾನವನ್ನು ಮಾಡಲು ಸೂಚಿಸಿದರು.

ಅದರಂತೆ ಇಂದ್ರಾಣಿಯು ಶ್ರಾವಣ ಪೂರ್ಣಿಮೆ ದಿನ, ಇಂದ್ರನಿಗೆ ಬೃಹ್ಮಸ್ಪತಿ ಆಚಾರ್ಯರಿಂದ ಸ್ಪಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು ಇಂದ್ರನ ಬಲಗೈಗೆ- ಯೇನ ಬದ್ಧೋ ಬಲೀರಾಜಾ ದಾನವೇಂದ್ರೋ ಮಹಾಬಲಃ ಭಾರತೀಯ ಪ್ರಾಚೀನ ಋುಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು.

ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ಆಚರಣೆ ನಡೆದು ಬಂದಿದೆ. ಅದರಂತೆ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ, ರಕ್ಷಾಬಂಧನ, ಉಪಾಕರ್ಮ ಮುಂತಾದ ಹೆಸರಿನಿಂದ ಆಚರಿಸುತ್ತೇವೆಭವಿಷ್ಯಪುರಾಣದ ಪ್ರಕಾರ ಹಿಂದೆ ದೇವ-ದಾನದವರಿಗೆ ಹನ್ನೆರಡು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು, ರಾಕ್ಷಸರು ದೇವತೆಗಳನ್ನು ಸೋಲಿಸಿ, ದೇವಲೋಕವನ್ನು ಆಕ್ರಮಿಸಿ, ದೇವತೆಗಳನ್ನು ಅಲ್ಲಿಂದ ಹೊರದಬ್ಬಿದರು.

ಮೂರುಲೋಕದ ಆಡಳಿತವನ್ನು ತಮ್ಮ ಕೈವಶ ಮಾಡಿಕೂಂಡ ದಾನವರು, ಮನುಷ್ಯರು ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡಬಾರದೆಂದೂ, ತಮ್ಮನ್ನೇ ಪೂಜಿಸಬೇಕೆಂದರು. ಇದರ ಪರಿಣಾಮ ವೇದಪಠಣ-ಯಜ್ಞ- ಉತ್ಸವಾದಿಗಳು ನಿಂತವು, ಧರ್ಮನಾಶವಾಗಿ ದೇವತೆಗಳು ಕ್ಷೀಣಬಲರಾದಾಗ, ದೇವರಾಜ ಇಂದ್ರನು, ಗುರು ಬೃಹಸ್ಪತಿ ಆಚಾರ್ಯರಲ್ಲಿ ಹೀಗೆ ಪ್ರಾರ್ಥಿಸಿದ.

ಆಕರ್ಷ ಆರಿಗ

ಎಸ್. ಡಿ. ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ

ಇದನ್ನೂ ಓದಿ : ಗಿರಿಜನ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಗಾರ

ಟಾಪ್ ನ್ಯೂಸ್

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

 ಅರಬ್ಬರ ನಾಡಲ್ಲಿ ಐಪಿಎಲ್‌ ಅಬ್ಬರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅಂತರಂಗ ಪರಿಶುದ್ಧವಾಗಿರಲಿ

ಅಂತರಂಗ ಪರಿಶುದ್ಧವಾಗಿರಲಿ

ರಾಜಕೀಯ ರಹಿತ ರಾಜಕಾರಣದ ತ್ರಿಮೂರ್ತಿಗಳು

ರಾಜಕೀಯ ರಹಿತ ರಾಜಕಾರಣದ ತ್ರಿಮೂರ್ತಿಗಳು

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.