ಸಕಾಲದ ಚಿಕಿತ್ಸೆಯಿಂದ ಶ್ರವಣ ದೋಷಮುಕ್ತ ಮಗು

Team Udayavani, Jul 2, 2019, 11:01 AM IST

ಮಗುವಿಗೆ ಶ್ರವಣ ದೋಷವಿದ್ದಾಗ ಪ್ರತಿಯೊಂದು ನಿಮಿಷ ಕೂಡಾ ಮಹತ್ವದ್ದಾಗಿರುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿದೆ. ಮಕ್ಕಳಲ್ಲಿಯ ಶ್ರವಣ ದೋಷವು ನರವೈಜ್ಞಾನಿಕ ತುರ್ತುಸ್ಥಿತಿ ಎಂದು ಇತ್ತೀಚೆ ಹೇಳಲಾಗುತ್ತಿದೆ. ಒಂದು ವೇಳೆ ಕಿವುಡುತನಕ್ಕೆ ಚಿಕಿತ್ಸೆ ಮಾಡದೇ ಬಿಟ್ಟರೆ ಮೆದುಳಿನಲ್ಲಿ ನರ ಕೋಶಗಳು ಪ್ರತಿ ನಿಮಿಷಕ್ಕೆ ನಾಶವಾಗಲು ಪ್ರಾರಂಭಿಸುತ್ತವೆ. ನಂತರದ ಹಂತದಲ್ಲಿ ಚಿಕಿತ್ಸೆ ನಡೆಸಿದರೆ ಫಲಕಾರಿಯಾಗುವುದು ಕಡಿಮೆ.

ಸಕಾಲದ ಚಿಕಿತ್ಸೆಯಿಂದ ಶ್ರವಣ ದೋಷವುಳ್ಳ ಮಗು ಕೇಳುವುದು, ಕಲಿಯುವುದು, ಮಾತನಾಡುವುದು ಸಾಧ್ಯ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಫಲವಾಗಿ ಕಿವುಡ-ಮೂಗು ಮಗು ಕೂಡಾ ಕೇಳುವುದು, ಕಲಿಯುವುದು ಮತ್ತು ಮಾತನಾಡುವಂತೆ ಮಾಡಬಹುದು.

ಹುಬ್ಬಳ್ಳಿಯಲ್ಲಿರುವ “ಇಯರ್‌ ಸೈನ್ಸ್‌ ಸೆಂಟರ್‌” ನಲ್ಲಿ ಮಗುವಿನ ಶ್ರವಣ ದೋಷ ಪರೀಕ್ಷಿಸಲು ತಜ್ಞ ವೈದ್ಯರಿದ್ದು, ಚಿಕಿತ್ಸೆಯಲ್ಲಿ ನೆರವಾಗುತ್ತಾರೆ.
ತಮ್ಮ ಮಗುವಿನ ಕಿವುಡುತನ ಪತ್ತೆ ಮತ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಮಾರ್ಗದರ್ಶನ ಪಡೆಯಲು ತಂದೆ, ತಾಯಿಗಳು ವಿಫಲರಾಗುವುದೇ ಚಿಂತೆಯ ವಿಷಯ. ಆದ್ದರಿಂದ ಮಗುವಿಗೆ ಶ್ರವಣ ದೋಷವಿದೆಯೆಂದು ಸಂಶಯ ಬಂದರೆ ತಡಮಾಡಬಾರದು. ವಯಸ್ಸು ಹೆಚ್ಚಾದಂತೆ ಶ್ರವಣ ಸಾಮರ್ಥ್ಯ ಸುಧಾರಿಸುವುದಿಲ್ಲ.

ಇಂಥ ಚಿಕಿತ್ಸೆ ನೀಡುವ ಪರಿಣಿತ ವೈದ್ಯರನ್ನು ಪಿಡಿಯಾಟ್ರಿಕ್ಸ್‌ ಆಡಿಯೋಲಾಜಿಸ್ಟ್‌ (ಮಕ್ಕಳ ಶ್ರವಣ ತಜ್ಞರು) ಎಂದು ಕರೆಯುತ್ತಾರೆ. ಇಯರ್‌ ಸೈನ್ಸ್‌ ಸೆಂಟರ್‌ ನಲ್ಲಿ ಇಂಥ ವೈದ್ಯರ ತಂಡವೇ ಇದೆ. ಅವರು ಮಾರ್ಗದರ್ಶನ ಮಾಡುತ್ತಾರೆ. ಮಗುವಿನ ಶ್ರವಣ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರಿಶೋ ಧಿಸಲು ಬಹುವಿಧ ಟೆಸ್ಟ್‌ಗಳನ್ನು ಮಾಡುವ ಅವಶ್ಯಕತೆ ಇರುತ್ತದೆ. ಇವುಗಳಲ್ಲಿ ಮಹತ್ವದ ಟೆಸ್ಟ್‌ ಗಳನ್ನು OAE, ABR(BERA), ASSR ಮತ್ತು ಟಿಂಪಾನೊಮೆಟ್ರಿ ಎಂದು ಕರೆಯಲಾಗುತ್ತದೆ.  ಒಟ್ಟಾರೆ ಈ ಎಲ್ಲ ಟೆಸ್ಟ್‌ಗಳ ವೆಚ್ಚ 5 ಸಾವಿರಕ್ಕಿಂತ ಹೆಚ್ಚಾಗುವುದಿಲ್ಲ. ಮಗುವಿನ ಶ್ರವಣ ಸಾಮರ್ಥಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಎಲ್ಲ  ಟೆಸ್ಟ್‌ಗಳು ಕಡ್ಡಾಯ.

ಕೆಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್‌ಗಳನ್ನು ಮಾಡಲಾಗುತ್ತದೆ. ಒಂದು ವೇಳೆ ಮಗುವಿಗೆ ಶ್ರವಣ ದೋಷ ಇದೆ ಎಂದು ಪತ್ತೆಯಾದರೆ ಚಿಕಿತ್ಸೆಯ ಆಯ್ಕೆಗಳೇನು?, ಕಿವಿಯ ಯಾವ ಭಾಗ ಪೀಡಿತವಾಗಿದೆ ಎಂಬುದರ ಮೇಲೆ ಔಷಧ‌ , ಶಸ್ತ್ರಚಿಕಿತ್ಸೆ ಅಥವಾ ಶ್ರವಣ ಸಾಧನಗಳ ಬಳಕೆ ಆಯ್ಕೆಗಳಿರುತ್ತವೆ.

ಒಂದು ವೇಳೆ ಮಗುವಿನ ಕಿವಿಯ ಹೊರಭಾಗ ಅಥವಾ ಮಧ್ಯದ ಭಾಗದ ಸಮಸ್ಯೆ ಇದ್ದರೆ ಔಷಧ ಅಥವಾ ಶಸ್ತ್ರಚಿಕಿತ್ಸೆಯಿಂದ ಮತ್ತೆ ಕಿವಿ ಕೇಳಿಸಲು ನೆರವಾಗುತ್ತದೆ. ಆದರೆ ಒಂದು ವೇಳೆ ಕಿವಿಯ ಒಳಭಾಗದ ಸಮಸ್ಯೆ ಇದ್ದರೆ ಮಗುವಿಗೆ ಉತ್ತಮವಾಗಿ ಕೇಳಿಸಿಕೊಳ್ಳಲು ನಿಶ್ಚಿತವಾಗಿ ಶ್ರವಣ ಸಾಧನಗಳು ಬೇಕಾಗುತ್ತವೆ.

ಶ್ರವಣ ಸಾಧನದಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತದೆ. ಒಂದು ವೇಳೆ ಸರಿಯಾದ ಸಾಧನವನ್ನು ಆಯ್ಕೆ ಮಾಡಿದ್ದರೆ ಖಂಡಿತವಾಗಿ ಮಗು ಅದನ್ನು ಯಾವುದೇ ತೊಂದರೆಯಿಲ್ಲದೆ ಧರಿಸಬಹುದು.  ಮಗುವಿನ ಶ್ರವಣ ದೋಷವು ಸೇ.70 ಕ್ಕಿಂತ ಹೆಚ್ಚಾಗಿದ್ದರೆ ಕೋಕ್ಲೀಯರ್‌ ಇಂಪ್ಲಾಂಟ್ಸ್‌ ಅಳವಡಿಕೆಗೆ ಆದ್ಯತೆ ನೀಡಲಾಗುತ್ತದೆ.

ಮಗು ಮುಂಜಾನೆ ಅದನ್ನು ಧರಿಸಿದರೆ ನಿದ್ರೆ ಮಾಡುವಾಗ ತೆಗೆಯಬೇಕು. ಆದರೆ ಕೋಕ್ಲಿಯರ್‌ ಇಂಪ್ಲಾಂಟ್ಸ್‌ ಸಲಹೆ ಮಾಡಿದ್ದರೆ ಅದನ್ನು ಅಳವಡಿಸಲು ಒಂದು ಸಣ್ಣ ಆಪರೇಶನ್‌ ಮಾಡಬೇಕಾಗುತ್ತದೆ. ಮತ್ತು ಹೊರಗೆ ತೆಗೆಯಬಹುದಾದ ಸಾಧನವನ್ನು (ಪೊಸೆಸ್ಸರ್‌) ಕಿವಿಯ ಮೇಲೆ ಕೂಡಾ ಧರಿಸಬಹುದು.
ಸರಕಾರದ ಕಾರ್ಯಕ್ರಮಗಳು ಮತ್ತು ಖಾಸಗಿ ದೇಣಿಗೆಗಳು ಚಿಕಿತ್ಸಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಆಯ್ಕೆಗಳ ಬಗ್ಗೆ ಚರ್ಚಿಸಲು “ಇಯರ್‌ ಸೈನ್ಸ್‌ ಸೆಂಟರ್‌’ಗೆ ಭೇಟಿ ಕೊಡಬಹುದು. ಶ್ರವಣ ದೋಷವುಳ್ಳ ಮಗುವಿನ ಪೋಷಕರು 7676046666 ಅಥವಾ 9663422177 ಈ ನಂಬರ್‌ಗೆ ಸಂಪರ್ಕಿಸಬಹುದು. ನೆಲ ಮಹಡಿ ಮತ್ತು ಎರಡನೇ ಮಹಡಿ, ಮಾರ್ವೆಲ್‌ ಸಿಗ್ನೆಟ್‌ ಬಿಲ್ಡಿಂಗ್‌, ಶಿರೂರ ಪಾರ್ಕ್‌, ವಿದ್ಯಾನಗರ, ಹುಬ್ಬಳ್ಳಿ ಇಲ್ಲಿ ಕೇಂದ್ರವಿದೆ.

ಡಾ| ವಿಕ್ರಾಂತ್‌ ಪಾಟೀಲ
AuD(USA) MASLP(India)
MAudSA.CCP(Australia)

Director,
Audiologist & Speech
Pathologist

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ