‘ಒತ್ತಡ’ ಮಾನಸಿಕ ಆರೋಗ್ಯಕ್ಕೆ ಮಾರಕವಲ್ಲ : ಸಂಶೋಧನ ವರದಿ ಹೇಳಿಕೆ


Team Udayavani, Mar 21, 2021, 10:44 AM IST

Mentaly helth

ಜೀವನದಲ್ಲಿ ಒತ್ತಡ ಇರಬೇಕು, ಆದರೇ ಜೀವನವೇ ಒತ್ತಡ ಆಗಬಾರದು ಎನ್ನುವ ಮಾತು ಇದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಒತ್ತಡಕ್ಕೆ ಒಳಗಾಗುತ್ತಲೆ ಇರುತ್ತಾರೆ. ಒತ್ತಡಕ್ಕೆ ನಿಗದಿತವಾದ ಕಾರಣವಿಲ್ಲವಾದರೂ ಮನುಷ್ಯ ಅದರಿಂದ ತೊಂದರೆಗೆ ಸಿಲುಕುವುದು ಕಟ್ಟಿಟ್ಟ ಬುತ್ತಿ. ಆದ್ದರಿಂದ ಒತ್ತಡದ ಸಂಕೋಲೆಯಿಂದ ಪಾರಾಗಲು ಸದಾ ಹವಣಿಸುತ್ತಿರುತ್ತಾನೆ.

ಅದರಲ್ಲೂ ಮಾನಸಿಕ ಒತ್ತಡ ಮನುಷ್ಯನನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತದೆ. ನಾನಾ ಬಗೆಯ ತೊಂದರೆಗಳನ್ನು ತಂದೊಡ್ಡುತ್ತದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ಸಂಗೀತದ ಮೊರೆ ಹೋಗಲಾಗುತ್ತದೆ. ಆದರೆ, ಇತ್ತೀಚಿನ ವರದಿಯೊಂದು ಒತ್ತಡವೂ ಕೂಡ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದಿದೆ.

ಹೌದು, ಸಂಶೋಧನ ವರದಿಯೊಂದರ ಪ್ರಕಾರ  ಮಾನಸಿಕ ಆರೋಗ್ಯಕ್ಕೆ ಕಡಿಮೆ ಒತ್ತಡ ಲಾಭದಾಯಕವಂತೆ. ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನಗಳ ಪ್ರೊ. ಡೆವಿಡ್ ಎಂ ಅಲ್ಮೇಡಿಯಾ ಅವರ ಪ್ರಕಾರ ಅಧ್ಯಯನಗಳ ವರದಿ ಸೂಚಿಸುವಂತೆ ನಿತ್ಯ ಅಲ್ಪ ಒತ್ತಡ ಮೆದುಳಿಗೆ ಸ್ವಲ್ಪ ಲಾಭ ತಂದು ಕೊಡುತ್ತದೆ. ಒತ್ತಡಕ್ಕೆ ಒಳಗಾಗುವವರು ಅತೀ ಸೃಜನಶೀಲರಾಗುವ ಸಾಧ್ಯತೆ ಇದೆ. ಅವರು ಯಾವುದೇ ಸಮಸ್ಯೆಯನ್ನು ಕ್ಷಣಾರ್ಧದಲ್ಲೇ ಬಗೆ ಹರಿಸುತ್ತಾರೆ. ಒತ್ತಡಗಳನ್ನು ಅನುಭವಿಸುವುದು ಆಹ್ಲಾದಕರವಲ್ಲದಿರಬಹುದು ಆದರೆ ಸಮಸ್ಯೆಯನ್ನು ಪರಿಹರಿಸಲು ಅವು ನಿಮ್ಮನ್ನು ಸಬಲರನ್ನಾಗಿಸುತ್ತದೆ. ಹಾಗೂ ಕ್ರಿಯಾತ್ಮಕ  ಕಾರ್ಯಚಟುವಟಿಕೆ ಬೆಳೆಸಲು ಒತ್ತಡ ಸಹಕಾರಿಯಾಗುತ್ತದೆ ಎನ್ನತ್ತಾರೆ ಅಲ್ಮೇಡಿಯಾ.

ಒತ್ತಡದಿಂದ ದೀರ್ಘಕಾಲಿಕ ಅನಾರೋಗ್ಯದಂತಹ ಕೆಲವೊಂದು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಈ ಹಿಂದಿನ ಹೇಳಿಕೆಗಳು ಹೇಳುತ್ತವೆ. ಆದರೆ, ಅಲ್ಮೇಡಾ ಅವರು ಹೇಳುವಂತೆ ಒತ್ತಡಕ್ಕೆ ಒಳಗಾಗುವ ವ್ಯಕ್ತಿ ಆರೋಗ್ಯಯುತವಾಗಿರುತ್ತಾರೆ ಎಂದು ಇಂದಿನ ಸಂಶೋಧನೆಗಳು ಹೇಳಿವೆ ಎಂದಿದ್ದಾರೆ.

ಒತ್ತಡ ಒಳ್ಳೆಯದಲ್ಲ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ಒತ್ತಡಕ್ಕೆ ಒಳಗಾಗದೇ ಇರುವವರು ಯಾರಾದರೂ ಇದ್ದಾರಾ ? ಎಂದು ಅಲ್ಮೇಡಿಯಾ ಪ್ರಶ್ನಿಸುತ್ತಾರೆ. ನನ್ನ ಈ ಹಿಂದಿನ ಅಧ್ಯಯನ ‘ಹೆಚ್ಚು ಒತ್ತಡ ವರ್ಸಸ್ ಕಡಿಮೆ ಒತ್ತಡ’ ಎದುರಿಸುವ ಜನರ ಕುರಿತಾಗಿತ್ತು. ಆದರೆ ಯಾವುದೇ ಒತ್ತಡಕ್ಕೆ ಒಳಗಾಗದವರು ಎಲ್ಲರಿಗಿಂತ ಆರೋಗ್ಯವಂತರಾಗುತ್ತಾರೆಯೇ ? ಎಂದು ನಾನು ಎಂದಿಗೂ ನೋಡಿಲ್ಲ ಎಂದಿದ್ದಾರೆ.

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.