ಗರ್ಭಕೋಶ ಕಂಠದ ಕ್ಯಾನ್ಸರ್‌


Team Udayavani, Sep 18, 2022, 12:15 PM IST

3

ದೇಹದ ಯಾವುದೇ ಭಾಗದಲ್ಲಿ ಜೀವಕೋಶಗಳ ಅನಿಯಂತ್ರಿತ ವಿಭಜನೆಯಿಂದ ಉಂಟಾಗುವ ಮಾಂಸದ ಬೆಳವಣಿಗೆ, ಗಡ್ಡೆಯನ್ನು ಕ್ಯಾನ್ಸರ್‌ ಎಂದು ಕರೆಯುತ್ತೇವೆ. ಈ ಜೀವಕೋಶಗಳ ವಿಭಜನೆ ಮತ್ತು ಬೆಳವಣಿಗೆ ನಿರಂತರ ಸಾಮಾನ್ಯ ಕ್ರಿಯೆ ಆಗಿದೆ. ದೇಹದ ಜೀವಕೋಶಗಳ ಬೆಳವಣಿಗೆಯನ್ನು ದೇಹದ ರೋಗ ನಿಯಂತ್ರಕ ವ್ಯವಸ್ಥೆ ನಿಯಂತ್ರಿಸುತ್ತದೆ. ಹಲವಾರು ಕಾರಣಗಳಿಂದ ದೇಹದ ಜೀವಕೋಶಗಳು ಅನಿಯಂತ್ರಿತವಾಗಿ ವಿಭಜನೆಗೊಂಡು ಬೆಳೆಯಲು ಪ್ರಾರಂಭಿಸಿದಾಗ ಅವು ಮಾಂಸದ ಗಡ್ಡೆಗಳನ್ನು ಉಂಟುಮಾಡುತ್ತವೆ. ಹೀಗೆ ಬೆಳೆಯುವ ಮಾಂಸದ ಗಡ್ಡೆಗಳಲ್ಲಿ ಎರಡು ವಿಧಗಳಿವೆ. ಕ್ರಿಯಾಶೀಲ ಗಡ್ಡೆ (ಕ್ಯಾನ್ಸರ್‌ ಗಡ್ಡೆ) ಹಾಗೂ ಸ್ವಲ್ಪ ಸಮಯದ ಅನಂತರ ತಟಸ್ಥವಾಗಿ ಉಳಿಯುವ ತಟಸ್ಥ (Benign) ಗಡ್ಡೆಗಳು. ತಟಸ್ಥ ಗಡ್ಡೆಗಳು ಸಾಮಾನ್ಯವಾಗಿ ಹೆಚ್ಚು ಹಾನಿಯನ್ನುಂಟು ಮಾಡುವುದಿಲ್ಲ ಅಥವಾ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಲಾರವು. ಕ್ಯಾನ್ಸರ್‌ ಗಡ್ಡೆಗಳು ಬೆಳವಣಿಗೆಯನ್ನು ನಿಲ್ಲಿಸುವುದಿಲ್ಲ ಹಾಗೂ ಅವು ನಿಧಾನವಾಗಿ ಸುತ್ತಮುತ್ತಲಿನ ಅಂಗಗಳಿಗೆ/ ದೇಹದ ಇತರೆಡೆಗೆ ಹರಡಿ ಅಲ್ಲಿಯೂ ಬೆಳೆದು ಅಂಗಾಂಗಗಳಿಗೆ ಕ್ರಮೇಣ ವ್ಯಕ್ತಿಯ ಜೀವಕ್ಕೆ ಹಾನಿಯುಂಟು ಮಾಡಬಲ್ಲವು.

ಗರ್ಭಕೋಶ ಕಂಠದ ಪ್ರಪಂಚಾದ್ಯಂತ ಮಹಿಳೆಯರಲ್ಲಿ ಗರ್ಭಕೋಶದ ಕಂಠ (cervix) ದಲ್ಲಿ ಕ್ಯಾನ್ಸರ್‌ ಸಾಮಾನ್ಯವಾಗಿ ಕಂಡುಬರುತ್ತಿದೆ. 2020ರಲ್ಲಿ ಸುಮಾರು 6 ಲಕ್ಷಗಳಿಗಿಂತ ಹೆಚ್ಚು ಪ್ರಕರಣಗಳು ಹಾಗೂ ಸುಮಾರು 3.5 ಲಕ್ಷದಷ್ಟು ಸಾವುಗಳು ಈ ಕ್ಯಾನ್ಸರ್‌ನಿಂದ ಉಂಟಾಗಿವೆ. ಭಾರತದಲ್ಲಿ ಸುಮಾರು 1.25 ಲಕ್ಷ ಮಹಿಳೆಯರಲ್ಲಿ ಪ್ರತೀ ವರ್ಷ ಇದು ಕಂಡುಬರುತ್ತಿದ್ದು, ಇವರಲ್ಲಿ ಅರ್ಧದಷ್ಟು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಗರ್ಭಕೋಶದ ಕಂಠದಲ್ಲಿ ಉಂಟಾಗುವ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿ ಸರಳ ಪರೀಕ್ಷೆಗಳಿಂದ ಗುರುತಿಸಿ ಅಗತ್ಯ ಕ್ರಮ/ ಚಿಕಿತ್ಸೆ ನೀಡಿದರೆ ರೋಗ ಮುಂದುವರಿದು ಸಂಕೀರ್ಣಗೊಳ್ಳದಂತೆ ತಡೆಯಲು ಹಾಗೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಬಹಳಷ್ಟು ಮಹಿಳೆಯರು ಈ ಪರೀಕ್ಷೆಗಳು ನೋವಿನಿಂದ ಕೂಡಿವೆ, ರಕ್ತಸ್ರಾವಕ್ಕೆ ಕಾರಣವಾಗುತ್ತವೆ, ಪರೀಕ್ಷೆಗಾಗಿ ಗರ್ಭಾಶಯದ ತುಂಡನ್ನು ಸಂಗ್ರಹಿಸಲಾಗುತ್ತದೆ ಇತ್ಯಾದಿ ತಪ್ಪುಗ್ರಹಿಕೆಗಳನ್ನು ಹೊಂದಿರುತ್ತಾರೆ.

ಗರ್ಭಕೋಶ -ಗರ್ಭಕಂಠ

ಗರ್ಭಕೋಶದ ಕಂಠವು ಮಹಿಳೆಯರ ಸಂತಾನೋತ್ಪತ್ತಿಯ ವ್ಯವಸ್ಥೆಯಲ್ಲಿ ಗರ್ಭಕೋಶದ ಕಿರಿದಾದ ಕೆಳ ಭಾಗವಾಗಿದೆ. ಇಲ್ಲಿ ಕೆಲವು ಮಹಿಳೆಯರಲ್ಲಿ 25-30 ವರ್ಷಗಳ ಅನಂತರ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಉಂಟಾಗುತ್ತದೆ. ಇವು ಅತೀ ನಿಧಾನವಾಗಿ ಸುಮಾರು 10-15 ವರ್ಷಗಳ ಅನಂತರ ಕ್ಯಾನ್ಸರ್‌ ಗಡ್ಡೆಗಳಾಗಿ ಮಾರ್ಪಡಬಹುದು ಹಾಗೂ ಹತ್ತಿರದ ಅಂಗಾಂಗಗಳಿಗೆ, ಅನಂತರ ದೇಹದ ಇತರೆಡೆಗೆ ಹರಡಿ ಜೀವಹಾನಿ ಮಾಡಬಲ್ಲದು. ಆದರೆ 30 ವರ್ಷ ವಯಸ್ಸಿನ ಅನಂತರ ಮಹಿಳೆಯರಿಗೆ ನಿಯಮಿತವಾಗಿ ಸರಳ ಪರೀಕ್ಷೆಗಳಿಂದ ಈ ಅಸಹಜ ಬೆಳವಣಿಗೆಗಳನ್ನು ಕ್ಯಾನ್ಸರ್‌ ಗೆ ತಿರುಗುವ ಮೊದಲೇ ಸುಲಭವಾಗಿ ಪತ್ತೆ ಮಾಡಿ ಚಿಕಿತ್ಸೆ ನೀಡಿ ಸಂಪೂರ್ಣ ಗುಣಪಡಿಸಬಹುದಾಗಿದೆ.

ಗರ್ಭಕೋಶ ಕಂಠದ ಕ್ಯಾನ್ಸರ್‌ನ ಲಕ್ಷಣಗಳು

ಆರಂಭ ಹಂತದಲ್ಲಿರುವ ಅಸಹಜ ಬೆಳವಣಿಗೆ ಸಮಯದಲ್ಲಿ (ಮೊದಲ 10-15 ವರ್ಷ) ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ಆದರೆ ಈ ಸರಳ ಪರೀಕ್ಷೆಗಳಿಂದ ಈ ಸಮಯದಲ್ಲಿ ಅಸಹಜ ಬೆಳವಣಿಗೆಯಾಗುತ್ತಿರುವುದನ್ನು ಪತ್ತೆ ಮಾಡಬಹುದು. ಮುಂದುವರಿದ ಹಂತದಲ್ಲಿ ಇಂತಹ ಮಹಿಳೆಯರಲ್ಲಿ ರಕ್ತಸ್ರಾವವಾಗುವುದು, ವಾಸನೆಯಿಂದ ಕೂಡಿದ ಸ್ರಾವ, ಮಾಸಿಕ ಸ್ರಾವಗಳ ನಡುವೆ ರಕ್ತಸ್ರಾವ, ಕೆಳ ಹೊಟ್ಟೆ ನೋವುಗಳಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಗರ್ಭಕೋಶ ಕಂಠದ ಕ್ಯಾನ್ಸರ್‌ಗೆ ಅಪಾಯಕಾರಿ ಅಂಶಗಳು

ಇದು ಎಚ್‌.ಪಿ.ವಿ. ((Human papilloma virus) ಎಂಬ ವೈರಾಣುವಿನ ಸೋಂಕಿನಿಂದ ಹೆಚ್ಚಾಗಿ ಕಂಡುಬರುತ್ತದೆ. ಈ ವೈರಸ್‌ನಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಆದರೆ ಶೇ. 50ಕ್ಕಿಂತ ಹೆಚ್ಚಿನ ಗರ್ಭಕೋಶ ಕಂಠದ ಕ್ಯಾನ್ಸರ್‌ಗಳು ಎಚ್‌.ಪಿ.ವಿ.- 16 ಮತ್ತು ಎಚ್‌.ಪಿ.ವಿ.- 18 ಪ್ರಭೇದದ ವೈರಸ್‌ಗಳಿಂದ ಉಂಟಾಗುತ್ತವೆ.

 ಕಿರಿಯ ವಯಸ್ಸಿನಲ್ಲಿ ಮದುವೆ ಹಾಗೂ ಅನೇಕ ಲೈಂಗಿಕ ಪಾಲುದಾರರನ್ನು ಹೊಂದಿರುವುದು

 ದೀರ್ಘ‌ ಕಾಲ ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದು

 ಜನನಾಂಗದಲ್ಲಿ ಹರ್ಪಿಸ್‌ ಸೋಂಕಿರುವವರು, ಎಚ್‌.ಐ.ವಿ. ಸೋಂಕಿರುವವರು

ಅಸುರಕ್ಷಿತ ಲೈಂಗಿಕತೆ ಅಥವಾ ಕಳಪೆ ಲೈಂಗಿಕ ನೈರ್ಮಲ್ಯ

ಕ್ಯಾನ್ಸರ್‌ ಪತ್ತೆಗೆ ಮೊದಲ ಹಂತದ ಸರಳ ಪರೀಕ್ಷೆಗಳು

ಕ್ಯಾನ್ಸರ್‌ ಕಂಡುಬರುವ ಮಹಿಳೆಯರಲ್ಲಿ ಈ ಅಸಹಜ ಜೀವಕೋಶಗಳ ಅನಿಯಂತ್ರಣ ಬೆಳವಣಿಗೆ ಮೊದಲು 10-15 ವರ್ಷಗಳವರೆಗೆ ಅತೀ ನಿಧಾನವಾಗಿ ನಡೆಯುತ್ತಿರುವುದು. ಈ ಸಮಯದಲ್ಲಿ ಕೆಳಗಿನ ಅತ್ಯಂತ ಸರಳ, ನೋವಿಲ್ಲದ ಪರೀಕ್ಷೆಗಳಿಂದ ಈ ಅಸಹಜ ಬೆಳವಣಿಗೆ (pre-cancerous lesions) ಪತ್ತೆ ಮಾಡಿದರೆ ಅದು ಮುಂದೆ ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳುವುದನ್ನು ತಡೆಯಬಹುದು.

ಅಸಿಟಿಕ್‌ ಆಮ್ಲ ಬಳಸಿ ಬರೀಗಣ್ಣ ಪರೀಕ್ಷೆ

ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ವೈದ್ಯರು/ ದಾದಿಯರು ಮಾಡಬಹುದಾದ ಸರಳ ಪರೀಕ್ಷೆ. ಆಗ ತಾನೇ ತಯಾರಿಸಿದ ಶೇ. 3-5 ಅಸಿಟಿಕ್‌ ಆಮ್ಲವನ್ನು ಗರ್ಭಕಂಠಕ್ಕೆ ಲೇಪಿಸಲಾಗುತ್ತದೆ ಹಾಗೂ ಒಂದು ನಿಮಿಷದ ಅನಂತರ ಉತ್ತಮ ಬೆಳಕಿನಲ್ಲಿ ನೋಡಿದಾಗ ಅಲ್ಲಿ ಅಸಹಜ ಕೋಶಗಳು ಬಿಳಿ ಬಣ್ಣಕ್ಕೆ ತಿರುಗುವುದು ಕಂಡುಬರುತ್ತದೆ. ಈ ಹಂತದಲ್ಲಿ ಮಹಿಳೆಗೆ ಕ್ಯಾನ್ಸರ್‌ ರೋಗವಿದೆ ಎಂಬರ್ಥವಲ್ಲ ಮತ್ತು ಈ ಹಂತದಲ್ಲಿ ಅಸಹಜ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಮುಂದೆ ಕ್ಯಾನ್ಸರ್‌ ಆಗದಂತೆ ತಡೆಯಬಹುದು. ಇದು ಅತೀ ಸರಳವಾದ ಪರೀಕ್ಷೆ ಆಗಿದ್ದು, ಈ ಪರೀಕ್ಷೆಯಲ್ಲಿ ಅಸಹಜ ಬೆಳವಣಿಗೆ ಕಂಡುಬಾರದಿದ್ದಲ್ಲಿ ಪರೀಕ್ಷೆಯನ್ನು 3-5 ವರ್ಷಗಳ ಅನಂತರ ಪುನಃ ಮಾಡುವುದು.

ಪ್ಯಾಪ್ಸ್‌ ಪರೀಕ್ಷೆ

ಈ ಪರೀಕ್ಷೆಯಲ್ಲಿ ತರಬೇತಿ ಪಡೆದ ವೈದ್ಯರು/ ದಾದಿಯರು ಸ್ಪಾಟುಲಾ ಅಥವಾ ಬ್ರಷ್‌ ಅನ್ನು ಗರ್ಭಕಂಠದ ಮೇಲೆ ತಿರುಗಿಸುವ ಮೂಲಕ ಅಲ್ಲಿನ ಜೀವಕೋಶಗಳನ್ನು ಸಂಗ್ರಹಿಸಿ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಿ, ಅಸಹಜ ಜೀವಕೋಶಗಳನ್ನು ಪತ್ತೆ ಮಾಡುತ್ತಾರೆ. ಪ್ಯಾಪ್ಸ್‌ ಪರೀಕ್ಷೆಯಲ್ಲಿ ಅಸಹಜ ಜೀವಕೋಶಗಳು ಕಂಡುಬರದಿದ್ದರೆ ಪ್ರತೀ ಮೂರು ವರ್ಷಗಳಿಗೆ ಒಮ್ಮೆ ಪರೀಕ್ಷಿಸಲು ಸೂಚಿಸಲಾಗುವುದು. ಪರೀಕ್ಷೆಯಲ್ಲಿ ಅಸಹಜ ಜೀವಕೋಶಗಳು ಕಂಡುಬಂದಲ್ಲಿ ಈ Pre-cancerous/cancerous ಬೆಳವಣಿಗೆಯನ್ನು ದೃಢೀಕರಿಸಲು, ಕಾಲ್ಪಸ್ಕೊಪಿ ಬಯೋಪ್ಸಿ ಪರೀಕ್ಷೆಯನ್ನು ಹೆಚ್ಚಿನ ದೃಢೀಕರಣಕ್ಕಾಗಿ ಮಾಡಲಾಗುವುದು. ಈ ಹಂತದಲ್ಲಿ ಗರ್ಭಕೋಶ ಕಂಠದ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ದರಿಂದ 30ರಿಂದ 60 ವರ್ಷದವರೆಗಿನ ಮಹಿಳೆಯರು ಪ್ರತೀ 3 ರಿಂದ 5 ವರ್ಷಗಳಿಗೊಮ್ಮೆ ಈ ಪರೀಕ್ಷೆ ಮಾಡಿಸಿಕೊಂಡರೆ ಮುಂದೆ ಸಂಕೀರ್ಣಗೊಂಡ ಕ್ಯಾನ್ಸರ್‌ನ್ನು ಅನಂತರದ ಹಂತಗಳಲ್ಲಿ ಪತ್ತೆ ಆಗಿ ಚಿಕಿತ್ಸೆ ಅಥವಾ ಪ್ರಾಣ ಹಾನಿ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.

ಮೇಲೆ ಸೂಚಿಸಿದ ಗರ್ಭಕೋಶ ಕಂಠದ ಕ್ಯಾನ್ಸರ್‌ ನ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿದರೆ ಈ ಕ್ಯಾನ್ಸರ್‌ ಉಂಟಾಗುವುದನ್ನು ತಡೆಗಟ್ಟಬಹುದು ಅಲ್ಲದೆ ಎಚ್‌.ಪಿ.ವಿ. ವೈರಸ್‌ನಿಂದ ಉಂಟಾಗಬಹುದಾದ ಗರ್ಭಕೋಶ ಕಂಠದ ಕ್ಯಾನ್ಸರ್‌ ಅನ್ನು ಎಚ್‌.ಪಿ.ವಿ. ಸೋಂಕು ತಗಲುವ ಮೊದಲೇ ಲಸಿಕೆ ಪಡೆವುವುದರ ಮೂಲಕ ಕೂಡ ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಬಹುದು.

-ಡಾ| ರಂಜಿತಾ ಎನ್‌. ಶೆಟ್ಟಿ ಸಹ ಪ್ರಾಧ್ಯಾಪಕರು, ಕಮ್ಯೂನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

-ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಕಮ್ಯೂನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒ.ಬಿ.ಜಿ. ವಿಭಾಗ ಮತ್ತು ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

TDY-3

ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

tdy-1

ಬಾಲಕಿಗೆ ಲೈಂಗಿಕ ಕಿರುಕುಳ: 18 ವರ್ಷ ಸಜೆ, ದಂಡ  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOCTOR

ಸ್ತನ ಕ್ಯಾನ್ಸರ್‌ ತಪಾಸಣೆ

5-breast-cancer

ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌

9–liver-problem

ಆರೋಗ್ಯಯುತ ಯಕೃತ್ತಿನ ಪ್ರಯೋಜನ

8–tooth-ache

ಹಲ್ಲಿನ ಸೋಂಕು; ಸಂಧಿ ನೋವಿಗೆ ಕಾರಣವಾದೀತೇ ?

10

ಋತುಮಾನೀಯ ಖಿನ್ನತೆ; ನೀವು ತಿಳಿದುಕೊಳ್ಳಬೇಕಾದ ಅಂಶಗಳು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

TDY-3

ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ

ಲೋಕಾಪುರ:ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆವ ಜ್ಞಾನೇಶ್ವರ ಮಠ

ಲೋಕಾಪುರ:ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆವ ಜ್ಞಾನೇಶ್ವರ ಮಠ

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.