ಫೇವರಿಟ್ ಫ‌ುಡ್‌ನೊಂದಿಗೆ ಡಯೆಟಿಂಗ್‌…


Team Udayavani, May 21, 2019, 11:13 AM IST

sud-8
ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್ ಮತ್ತು ನಿಯಮಿತ ವರ್ಕ್‌ ಔಟ್. ಆರೋಗ್ಯಕರ, ಸಂತೋಷಕರ ಜೀವನಕ್ಕೆ ಡಯೆಟ್ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು ಹಲವು ಅಂಶಗಳಿಂದ ನಿರ್ಧರಿಸಲ್ಪಡುತ್ತವೆ. ಆರೋಗ್ಯಕರ ಡಯೆಟ್ ಮತ್ತು ವ್ಯಾಯಾಮ ಆ ಹಲವುಗಳಲ್ಲಿ ಎರಡು ಅಷ್ಟೇ. ನೆಚ್ಚಿನ ಆಹಾರವನ್ನು ಸೇವಿಸುವಾಗ ತೂಕ ಇಳಿಸಿಕೊಳ್ಳುವುದು ದೂರದ ಮಾತು ಎಂದು ಅಂದುಕೊಂಡಿದ್ದರೇ ಅದು ನಿಜವಲ್ಲ. ಬೇಕಾದುದನ್ನು ತಿನ್ನುತ್ತಲೇ ದೇಹದ ತೂಕವನ್ನು ಕಳೆದುಕೊಳ್ಳಬಹುದು. ನೆಚ್ಚಿನ ಆಹಾರವನ್ನು ಸೇವಿಸುತ್ತಾ ದೇಹದ ತೂಕವನ್ನು ಕಳೆದುಕೊಳ್ಳಲು ಇಲ್ಲಿದೆ 5 ಸಲಹೆಗಳು.
ಅಡುಗೆ ಎಣ್ಣೆ ಬಗ್ಗೆ ಎಚ್ಚರವಿರಲಿ
ಆರೋಗ್ಯಕರ ಎಣ್ಣೆಗಳಲ್ಲಿ ಕೂಡ ಹೆಚ್ಚು ಕ್ಯಾಲೋರಿಗಳಿರುತ್ತವೆ. ಆಹಾರ ತಯಾರಿಸುವ ವೇಳೆ ಎಣ್ಣೆಯನ್ನು ಬೇಕಾಬಿಟ್ಟಿ ಸುರಿದು ನಾವು ತಪ್ಪು ಮಾಡುತ್ತವೆ. ಅಡುಗೆ ಎಣ್ಣೆ ಸೇವನೆಯಿಂದ ಸೇವಿಸುವ ಹೆಚ್ಚುವರಿ ಕ್ಯಾಲೋರಿಗಳನ್ನು ತಪ್ಪಿಸಲು ಉತ್ತಮ ವಿಧಾನವೆಂದರೆ ಅಡುಗೆ ಎಣ್ಣೆ ಬಳಕೆಗೆ ಮಿತಿ ಹಾಕುವುದು. ತೂಕ ಇಳಿಸಿಕೊಳ್ಳ ಬಯಸುವವರು ಅದಷ್ಟು ಕಡಿಮೆ ಎಣ್ಣೆ ಬಳಸುವುದು ಉತ್ತಮ.

ಸರಿಯಾದ ಸೇವನೆ ಇರಲಿ
ಸೇವಿಸುವ ಆಹಾರಗಳ ಗಾತ್ರವನ್ನು ನಿರ್ವಹಿಸುವ ಮೂಲಕ ದೇಹದ ತೂಕವನ್ನು ಕಳೆದು ಕೊಳ್ಳಬಹುದು. ಊಟದ ಆಹಾರ ಸೇವನೆಯ ಗಾತ್ರದಲ್ಲಿ ಸ್ನಾಕ್ಸ್‌ ತಿಂಡಿಗಳನ್ನು ಸೇವಿಸುವುದು ಉತ್ತಮವಲ್ಲ. ಸಣ್ಣ ಕಾಫಿ ಕಪ್‌ಗ್ಳಲ್ಲಿ ಪಾಪ್‌ಕಾರ್ನ್, ಚಿಕ್ಕ ಗ್ಲಾಸ್‌ಗಳಲ್ಲಿ ನಟ್ಸ್‌ ಇಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ ಪ್ರೋಟಿನ್‌ ಅಂಶಗಳನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ಊಟವನ್ನು ಕಳೆದುಕೊಳ್ಳುವ ಪ್ರಮೇಯ ಅಥವಾ ಹೆಚ್ಚಿನದ್ದನ್ನು ಸೇವಿಸಿ ದೇಹದ ತೂಕ ಹೆಚ್ಚಾಗುವಷ್ಟು ಸೇವಿಸುವ ತೊಂದರೆ ಬರುವುದಿಲ್ಲ.

ಪ್ಲೇಟ್ ಮತ್ತು ಗ್ಲಾಸ್‌ ಬದಲಾಯಿಸಿ

ಇದೇನಿದು ಅಂತ ಅಚ್ಚರಿ ಪಡಬೇಡಿ. ತಟ್ಟೆ ಮತ್ತು ಗ್ಲಾಸ್‌ ಬದಲಾಯಿಸಿದರೇ ತೂಕ ಕಳೆದುಕೊಳ್ಳಬಹುದೇ? ಎಂಬ ಪ್ರಶ್ನೆ ಉದ್ಬವಿಸಿದೆಯೇ ಇದಕ್ಕಿಲ್ಲಿದೆ ಉತ್ತರ. ಆಹಾರದ ನಿಯಂತ್ರಣಕ್ಕೆ ಇದು ಕೂಡ ಒಂದು ದಾರಿ. ಭೋಜನದ ತಟ್ಟೆಯನ್ನು ಬದಲಾಯಿಸಿ ಊಟಕ್ಕೆ ಸಣ್ಣ ಸಲಾಡ್‌ ತಟ್ಟೆಗಳನ್ನು ಬಳಿಸಿ. ಕಡಿಮೆ ಕ್ಯಾಲೋರಿ, ತೂಕ ನಷ್ಟ ವೇಗವರ್ಧಕ ಸಲಾಡ್‌ಗಳನ್ನು ಸೇವಿಸಲು ದೊಡ್ಡ ತಟ್ಟೆಯನ್ನು ಬಳಸಿ. ದೊಡ್ಡ ಗ್ಲಾಸಿನಲ್ಲಿ ನೀರು ಕುಡಿಯಬೇಕು. ಸಣ್ಣ ಕಪ್‌ನಲ್ಲಿ ಸಕ್ಕರೆ ಪಾನೀಯಗಳನ್ನು ಸೇವಿಸಬೇಕು.

ಸಮಯ ಬದಲಾಯಿಸಿ

ಸೂರ್ಯಾಸ್ತದ ಮುನ್ನ ಮತ್ತು ಸೂರ್ಯೋದಯದ ಅನಂತರ ಆಹಾರ ಸೇವಿಸುವುದು ಒಳ್ಳೆಯದು. ಆಹಾರವನ್ನು ಸಂಸ್ಕರಿಸಲು, ಜೀರ್ಣಿಸಿಕೊಳ್ಳಲು ಮತ್ತು ನಿರ್ವಿಷೆಯಲ್ಲಿ ಸಹಾಯ ಮಾಡಲು ಇದು ದೇಹಕ್ಕೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ. ಬಹುಬೇಗನೇ ರಾತ್ರಿ ಊಟ ಮತ್ತು ತಡವಾದ ಉಪಾಹಾರ ಎರಡೂ ಕೂಡ ಉತ್ತಮವಲ್ಲ.

ಹ್ರೈಡ್ರೇಟ್‌!
ಹೈಡ್ರೇಶನ್‌ ದೇಹದ ತೂಕ ಇಳಿಸಿಕೊಳ್ಳಲು ಮುಖ್ಯವಾಗಿದೆ. ಸರಿಯಾರಿ ಆಹಾರ ಸೇವನೆ ಮತ್ತು ವ್ಯಾಯಾಮಾ ಮಾಡುತ್ತಿದ್ದು ದೇಹವನ್ನು ಹ್ರೈಡ್ರೇಟ್ ಆಗಿರುವಂತೆ ನೋಡಿಕೊಳ್ಳದಿದ್ದರೇ ಮೆಟಾಬಾಲಿಸಮ್‌ ಮತ್ತು ಜೀರ್ಣಕ್ರಿಯೆಯಂತಹ ದೇಹದ ಕಾರ್ಯಗಳು ಹಾಳಾಗಬಹುದು ಮತ್ತು ದೇಹದ ತೂಕ ಇಳಿಕೆ ನಿಧಾನವಾಗಬಹುದು. ತೂಕ ಇಳಿಕೆಯ ವೇಗ ಹೆಚ್ಚಿಸಿಕೊಳ್ಳಲು ಬಹಳಷ್ಟು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.